ಕಲ್ಲು ಬಂಡೆ ಉರುಳಿ ಬಿದ್ದು ಟನಲ್‍ನಲ್ಲೇ ಸಿಕ್ಕಿಬಿದ್ದ ರೈಲು: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಕಲಬುರಗಿ,ಜೂ.12-ಕಮಲಾಪುರ ತಾಲ್ಲೂಕಿನ ಬಳಿ ಇರುವ ಟನಲ್‍ನಲ್ಲಿ ಮಳೆಯಿಂದಾಗಿ ಕಲ್ಲು ಬಂಡೆ ಬಿದ್ದಿರುವುದರಿಂದ ಕಲಬುರಗಿ-ಬೀದರ್ ರೈಲು ಟನಲ್‍ನಲ್ಲಿ ಸಿಕ್ಕಿಬಿದ್ದು, ಭಾರಿ ಅನಾಹುತ ತಪ್ಪಿದೆ.
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಕಲ್ಲು ಬಂಡೆ ಉರುಳಿ ಬಿದ್ದ ಪರಿಣಾಮ ಕಲ್ಲು ರೈಲಿಗೆ ತಾಗಿ ಟನಲ್‍ನಲ್ಲೇ ರೈಲು ನಿಂತಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಯಾಣಿಕರ ಜೀವಕ್ಕೆ ಅಪಾಯವೇನೂ ಇಲ್ಲ. ಕಳೆದ ರಾತ್ರಿ ಮಳೆಯಾದ ಹಿನ್ನೆಲೆಯಲ್ಲಿ ಟನಲ್ ಒಳಗೆ ಹಸಿಯುಂಟಾಗಿ ಕಲ್ಲು ಬಂಡೆ ಉರುಳಿ ಬಿದ್ದಿದೆ ಎನ್ನಲಾಗುತ್ತಿದೆ.
ಬೆಳಿಗ್ಗೆ ಕಲಬುರಗಿಯಿಂದ ಬೀದರ್‍ಗೆ ಹೊರಟ ರೈಲು ಇದಾಗಿದ್ದು, ಟನಲ್ ಒಳಗೆ ಸಿಲುಕಿದೆ ಎಂದು ತಿಳಿದುಬಂದಿದೆ.