ಕಲ್ಲು ದಿಮ್ಮಿ ಸಾಗಾಟ ಲಾರಿ ಜಪ್ತಿ

ಕನಕಪುರ, ಮಾ ೧೫- ಭಾರಿ ಗಾತ್ರದ ಕಲ್ಲುದಿಮ್ಮಿಯನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಲಾರಿಯೊಂದನ್ನು ತಹಶೀಲ್ದಾರ್ ವರ್ಷಾ ಒಡೆಯರ್ ದಾಳಿ ನಡೆಸಿ ವಶಕ್ಕೆ ಪಡೆದಿರುವುದು ನಡೆದಿದೆ.
ತಾಲ್ಲೂಕಿನ ದೊಡ್ಡಮುದುವಾಡಿ ಬಳಿ ನಡೆಯುತ್ತಿರುವ ಎಂ.ಎಂ. ಕ್ವಾರಿಯಿಂದ ಭಾರಿ ಗಾತ್ರದ ಕಲ್ಲು ದಿಮ್ಮಿಯನ್ನು ರಾತ್ರಿ ೮ ಗಂಟೆ ವೇಳೆಯಲ್ಲಿ ತುಂಬಿಕೊಂಡು ಬರುತ್ತಿದ್ದಾಗ ಅರಳಾಳುಸಂದ್ರ ಗೇಟ್ ಬಳಿ ತಹಶೀಲ್ದಾರ್ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ವೇಳೆ ಕಲ್ಲು ದಿಮ್ಮಿಯನ್ನು ಸಾಗಿಸಲು ಪರವಾನಗಿಯನ್ನು ಪಡೆದಿಲ್ಲ ಮತ್ತು ಲಾರಿಗೆ ಯಾವುದೆ ಡಾಕ್ಯೂಮೆಂಟ್ ಇರಲಿಲ್ಲವೆಂದು ತಹಶೀಲ್ದಾರ್ ತಿಳಿಸಿದ್ದಾರೆ.
ವಶಕ್ಕೆ ಪಡೆದಿರುವ ಲಾರಿಯನ್ನು ಗ್ರಾಮಾಂತರ ಪೊಲೀಸ್ ಠಾಣೆ ಸುಪರ್ಧಿಗೆ ನೀಡಿರುವ ವರ್ಷಾ ಒಡೆಯರ್ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.