ಕಲ್ಲು ತಲೆ ಮೇಲೆ ಹೊತ್ತು ರೈತರ ಪ್ರತಿಭಟನೆ

ಇಂಡಿ : ಸೆ.24:ತಾಲೂಕಿನ ಝಳಕಿ ಗ್ರಾಮದಲ್ಲಿ ಭಾರತಿಯ ಕೀಸಾನ ಸಂಘದ ವತಿಯಿಂದ ಸತತವಾಗಿ 10ನೇ ದಿನಕ್ಕೆ ಕಾಲಿಟ್ಟ ರೇವಣಸಿದ್ದೇಶ್ವರ ಏತ ನೀರಾವರಿ ಹೊರಾಟಕ್ಕೆ ಸಮಯವಿಲ್ಲದಂತಾಗಿದೆ, ಸರಕಾರಕ್ಕೆ ಮಾತ್ರ ತಮ್ಮದೆ ಮೀಟಿಂಗಗಳನ್ನ ಹಮ್ಮಿಕೊಳ್ಳಲು ಸಮಯವಿದೆ ಆದರೆ ನಮ್ಮಂತಹ ಬಡವ ರೈತರ ಗೋಳು ಕೇಳಲು ಮಾತ್ರ ಸಮಯವಿಲ್ಲವೆಂದು ಈ ಸಂದರ್ಬದಲ್ಲಿ ರೈತರು ಸರಕಾರ ನಮ್ಮ ತಲೆಯ ಮೇಲೆ ಕಲ್ಲು ಎರಚಿದೆ ಅನ್ನುವರೀತಿಯಲ್ಲಿ ಇಂದಿನ ಹೋರಾಟದಲ್ಲಿ ಎಲ್ಲ ರೈತರು ತಮ್ಮ-ತಮ್ಮ ತಲೇಗಳ ಮೇಲೆ ಕಲ್ಲು ಹೊತ್ತು ಘೋಷಣೆಯನ್ನು ಕೂಗಿದರು.
ಈ ಸಂದರ್ಬದಲ್ಲಿ ರೈತ ಮುಖಂಡರಾದ ಶ್ರೀಮಂತ ಕಾಪಸೆ ಮಾತನಾಡಿ ನಾವುಗಳು ರೈತರ ಮಕ್ಕಳಾಗಿ ಹುಟ್ಟಿದ್ದೆ ನಮ್ಮ ತಪ್ಪು ನಾವುಗಳು ಯಾರಾದರು ರಾಜಕಾರಣಿ ಅಥವಾ ದೊಡ್ಡ-ದೊಡ್ಡ ಅಧಿಕಾರಿಗಳ ಮಕ್ಕಳಾಗಿ ಹುಟ್ಟಿದರೆ ನಮಗು ಹಸಿವಿನ/ನಿರಿನ ಕೋರತೆ ಇರುತ್ತಿರಲಿಲ್ಲ, ಆವಾಗ ಅವರುಗಳಿಗೆ ಅನ್ನದ ರುಣ ನೀರಿನ ಗುಣದ ಬಗ್ಗೆ ಅರಿವಾಗುತ್ತಿತ್ತು, ಇವತ್ತು 10ನೇ ದಿನಕ್ಕೆ ಕಾಲಿಟ್ಟರು ಸರಕಾರ ನಮ್ಮ ಕಡೆಗೆ ನೋಡುತ್ತಿಲ್ಲ ಕೇಳುತ್ತಿಲ್ಲ, ಹೀಗೆ ನಡೆದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಬಹಳ ಶೋಚನೀಯ, ಇಗಲಾದರು ಸರ್ಕಾರ ರೈತರ ಕಡೆಗೆ ನೋಡದೆ ಹೋದರೆ , ನಿನ್ನೆ ರಾಣಿಬೆನ್ನುರ ತಾಲೂಕಿನ ಐರಾಣಿ ಗ್ರಾಮದ ರೈತ ಅಣ್ಣಪ್ಪ ಕಂದಾಟಿ ಎಂಬ 36 ವರ್ಷದ ರೈತ ಸಾಲಭಾದೆ ತಾಳದೆ ವಿದ್ಯೂತ್ ಹಿಡಿದು ಪ್ರಾಣ ತ್ಯಾಗಮಾಡಿದ ಹಾಗೆ ನಾವೆಲ್ಲ ಪ್ರಾಣತ್ಯಾ ಮಾಡುವುದಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಈ ಸಂದರ್ಬದಲ್ಲಿ ಸುತ್ತಲಿನ 62 ಗ್ರಾಮದ ರೈತರೆಲ್ಲರು ತಮ್ಮ-ತಮ್ಮ ತಲೆಗಳ ಮೇಲೆ ಕಲ್ಲುಗಳನ್ನು ಹೊತ್ತು ಗಂಟೆ ಗಟ್ಟಲೆ ನಿಂತರು ಇದನ್ನು ಕಂಡ ಜನರು ರೈತರಿಗೆ ಮನವಿ ಮಾಡಿ ಶಾಂತ ಗೊಳಿಸಿದರು.
ಈ ಸಂದರ್ಬದಲ್ಲಿ ಕಪನಿಂಬರಗಿ ಗ್ರಾ-ಪಂ ಅಧ್ಯಕ್ಷ ಅತ್ತಾರಗೌಡ ಪಟೇಲ, ಕಿಸಾನ ಸಂಘದ ಗುರುನಾಥ ಬಗಲಿ, ಸೋಮಶೇಖರ, ಸುರೇಶ ಜೇವರಗಿ, ಮಲ್ಲುಗೌಡ ಪಾಟೀಲ, ಬಸುಗೌಡ ಹಳಕಿ, ಪ್ರಕಾಶ ಪಾಟೀಲ, ಶ್ರೀಶೈಲ ಬನಸೋಡೆ, ಗುರನಗೌಡ ಪಾಟೀಲ, ರಾವಜಿ ಸಗಾಯಿ, ಕಾಶೀನಾಥ ದುದಗಿ ಇನ್ನಿತರೆ ರೈತರು ಹಾಜರಿದ್ದರು.