ಕಲ್ಲುಗುಂಡಿ ಪೋಲೀಸರಿಗೆ ಕೊರೊನಾ

ಸುಳ್ಯ, ಎ.೨೧- ಕಲ್ಲುಗುಂಡಿ ಪೋಲೀಸ್ ಹೊರ ಠಾಣೆಯ ಇಬ್ಬರು ಪೋಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವರಿಗೆ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ.
ಬಾಯಿಗೆ ರುಚಿ ಮತ್ತು ಮೂಗಿಗೆ ವಾಸನೆ ಇಲ್ಲದಿರುವುದರಿಂದ ಹೊರಠಾಣೆಯ ಇಬ್ಬರು ಪೋಲೀಸ್ ಕಾನ್ ಸ್ಟೇಬಲ್ ಗಳು ಕೆ.ವಿ.ಜಿ. ಆಸ್ಪತ್ರೆಗೆ ಹೋಗಿ ಕೊರೋನ ಪರೀಕ್ಷೆಗೊಳಗಾದರು. ಆ ವೇಳೆ ಅವರಿಬ್ಬರಿಗೂ ಪಾಸಿಟಿವ್ ಬಂತೆನ್ನಲಾಗಿದೆ. ಪೋಲೀಸರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಲ್ಲುಗುಂಡಿ ಹೊರಠಾಣೆಗೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಸ್ ಮಾಡಲಾಯಿತು.