ಕಲ್ಲುಗುಂಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅನಾಹುತ

ಸುಳ್ಯ,ಜು.೧೮-ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಶೆಡ್‌ನಲ್ಲಿರುವ ಟಯರ್ ಅಂಗಡಿ, ಸೋಡಾ ಫ್ಯಾಕ್ಟರಿ ಮತ್ತು ಹೋಟೆಲ್‌ಯೊಂದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಡ ರಾತ್ರಿ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ.
ಮಧ್ಯರಾತ್ರಿ ೧೨.೩೦ ರ ಸುಮಾರಿಗೆ ಅಂಗಡಿಗಳ ಒಳಗಿಂದ ಬೆಂಕಿ ಕಾಣಿಸಿಕೊಂಡಿತು. ಆದರೆ ಆ ವೇಳೆಗೆ ಧಾರಾಕಾರ ಮಳೆ ಸುರಿಯುತ್ತಿದ್ದುರಿಂದ ಬೆಂಕಿ ಹೊರಗಡೆ ಬಂದಿರಲಿಲ್ಲ ಅಂಗಡಿಯ ಒಳಗಿಂದ ಸಿಲಿಂಡರ್ ಕೂಡ ಸಿಡಿಯತೊಡಗಿದ್ದರಿಂದ ಬೆಂಕಿ ನಂದಿಸಲು ಹತ್ತಿರ ಯಾರು ಹೋಗುತ್ತಿರಲಿಲ್ಲ. ಕ್ಷಣ ಮಾತ್ರದಲ್ಲೇ ಲಿಗೋರಿ ಡಿಸೋಜ ರವರ ಟಯರ್ ಅಂಗಡಿ ಮುಹಮ್ಮದ್ ರವರ ಸೋಡಾ ಫ್ಯಾಕ್ಟರಿ ಮತ್ತು ಆನಂದರವರ ಹೋಟೆಲ್ ಬೆಂಕಿಗೆ ಆಹುತಿಯಾದವು. ಸುಳ್ಯದ ಅಗ್ನಿಶಾಮಕ ದಳ ಹಾಗು ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ.ಹಮೀದ್ ಹಾಗು ಸ್ಥಳೀಯ ಜನಪ್ರತಿನಿಧಿಗಳು ಹಾಗು ಸ್ಥಳೀಯರು ಬೆಂಕಿ
ನಂದಿಸುವ ಕಾರ್ಯಾಚರಣೆ ನಡೆಸಿದ್ದರು.