ಕಲ್ಲುಗಣಿ ಪ್ರದೇಶದಲ್ಲಿ ಮುತ್ತುಗಳಿವೆ, ಗುರುತಿಸಬೇಕಿದೆ: ವ್ಯಾಸಮುದ್ರ

ವಾಡಿ:ಜ.8: ಕಲ್ಲುಗಣಿಗಳ ಪ್ರದೇಶದಲ್ಲಿ ಪ್ರತಿಭೆಯಂತಹ ಮುತ್ತುಗಳಿದ್ದು, ಅವರನ್ನು ಈ ಭಾಗದಲ್ಲಿ ಹುಡುಕುವ ಕೆಲಸವಾಗಬೇಕಿದೆ ಎಂದು ಹಿರಿಯ ಪರ್ತಕರ್ತ ವಾದಿರಾಜ ವ್ಯಾಸಮುದ್ರ ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಶ್ರೀಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಗೆಳೆಯರ ಬಳಗದ, ವೀರಶೈವ-ಲಿಂಗಾಯತ ಯುವ ವೇದಿಕೆ ವತಿಯಿಂದ ಗ್ರಾಮದ ಪ್ರತಿಭಾವಂತ ಪ್ರತಿಭೆಗಳಿಗೆ ಚಿಗುರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಅವರು ಮಾತನಾಡುತ್ತಾ, ಯುವಕರು ಇಂದು ನಿರ್ದಿಷ್ಟ ಗುರಿಯಿಲ್ಲದೆ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಉತ್ತಮ ಗುರು ಹಾಗೂ ಗುರಿಯ ಕೊರತೆ ಅವರನ್ನು ಕಾಡುತ್ತಿದೆ. ರಾವೂರನಂತಹ ಕಲ್ಲಿನ ಗಣಿಕಾರಿಕೆಯ ಪ್ರದೇಶದಲ್ಲಿ ಇಂತಹ ಮುತ್ತುಗಳಿವೆ ಎನ್ನುವುದೇ ಹೆಮ್ಮೆಯ ಸಂಗತಿ. ಇಂತಹ ಪ್ರತಿಭೆಗಳ ಸಂಖ್ಯೆ ಇನ್ನೂ ಹೆಚ್ಚಾಗಲಿ ಗೆಳೆಯರ ಬಳಗ ಇಂತಹ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿರುವು ಸಂತೋಷದ ವಿಷಯ ಎಂದು ಹೇಳಿದರು.

ಶ್ರೀಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ಧಲಿಂಗ ದೇವರು ನಿಜವಾದ ಪ್ರತಿಭೆಗಳಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಆದರೆ ಅವರನ್ನು ಗುರುತಿಸುವ ಮನಸ್ಸು ಬೇಕಷ್ಟೆ. ಗುರುತಿಸಿದಾಗ ಮಾತ್ರ ನಿಜವಾದ ಪ್ರತಿಭೆಗಳು ಹೊರಬರಲು ಸಾದ್ಯ. ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಗೆಳೆಯರ ಬಳಗ ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆ ಹಮ್ಮಿಕೊಂಡಿದ್ದ ಚಿಗುರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಮರಕ್ಕೆ ಚಿಗುರು ಎಷ್ಟು ಮುಖ್ಯವೊ ಸಮಾಜ ಬದಲಾವಣೆಗೆ ಪ್ರತಿಭಾವಂತ ಸೃಜನಶೀಲ ಯುವಕರ ಅಗತ್ಯ ತುಂಬಾ ಇದೆ. ಗ್ರಾಮೀಣ ಪ್ರತಿಭೆಗಳು ಚರಿತ್ರೆ ನಿರ್ಮಾಣವಾಡುವಂತಾಗಲಿ ಎಂದು ಶುಭಹಾರೈಸಿದರು.

ಸಿದ್ಧಲಿಂಗ ಬಾಳಿ ಪ್ರಾಸ್ತಾವಿಕವಾಗಿ ಮಾತಾಡಿದರು ಕಾರ್ಯಕ್ರಮದಲ್ಲಿ ಐವರು ಯುವ ಸಾಧಕರಾದ ಬಸವರಾಜ ಹಡಪದ( ಕ್ಷೌರದಲ್ಲಿ ಕಲಾಕೃತಿ), ರೇವಣಸಿದ್ದಯ್ಯ ಗೋಳೆದಮಠ(ಚಿತ್ರಕಲೆ), ಪಾರ್ವತಿ ನಾಡಂಪಲ್ಲಿ(ಕ್ರೀಡೆ), ಮಾರುತಿ ದಶರಥ(ಬಹುಮುಖ ಪ್ರತಿಭೆ), ಗುರುರಾಜ ಬಂಡಪ್ಪ(ಬಹುಮುಖ ಪ್ರತಿಭೆ) ಇವರಿಗೆ ಚಿಗುರು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯ ಮೇಲೆ ಮಾಜಿ ಜಿ.ಪಂಸದಸ್ಯ ಡಾ.ಗುಂಡಣ್ಣ ಬಾಳಿ, ಚೆನ್ನಣ್ಣ ಬಾಳಿ ಇದ್ದರು. ಕೆ.ಬಿ.ಎನ್ ವಿವಿ ಸಿಂಡಿಕೇಟ ಸದಸ್ಯ ಈಶ್ವರಪ್ಪ ಬಾಳಿ, ಮಹಾದೇವ ಹದಪದ, ಶ್ರೀನಿವಾಸ ವಗ್ಗರ, ಶಾಂತು ಬಾಳಿ, ಮಹೇಶ ಬಾಳಿ, ದತ್ತು ಗುತ್ತೆದಾರ, ವಿಶ್ವ ಬೈರಾಮಡಗಿ, ವೀರೇಶ ಕಲ್ಲೂರಕರ, ಸಿದ್ದು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಸವರಾಜ ಬಳವಾಟ ನಿರೂಪಿಸಿದರು, ಶರಣು ಜ್ಯೋತಿ ವಂದಿಸಿದರು.