ಕಲ್ಲುಗಣಿಗಾರಿಕೆ ಪುನಾರಂಭಕ್ಕೆ ನಿರ್ಧಾರ: 2 ದಿನದಲ್ಲಿ ಆದೇಶ

ಬೆಂಗಳೂರು,ಮಾ.೨೯- ರಾಜ್ಯದಲ್ಲಿ ಸ್ಥಗಿತಗೊಂಡಿರುವ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಗಳನ್ನು ಪುನರಾರಂಭಿಸವ ನಿರ್ಧಾರ ಸರ್ಕಾರ ಕೈಗೊಂಡಿದೆ ಎಂದು ಗಣಿ ಮತ್ತು ಭೂಗರ್ಭ ಸಚಿವ ಮುರುಗೇಶ್ ಆರ್ ನಿರಾಣಿ ಹೇಳಿದರು
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿದ ಘಟನೆಯ ನಂತರ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಚಟುವಟಿಕೆ ಬಹುತೇಕ ಸ್ಥಗಿತವಾಗಿದೆ. ಪರಿಣಾಮ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು ೩೦೦ ಕೋಟಿರೂ ಅಧಿಕ ನಷ್ಟ ಸಂಭವಿಸಿದೆ. ಹಾಗಾಗಿ ಕಲ್ಲುಗಳಿವೆ ಕಲ್ಲು ಗಣಿಗಳ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ ಇನ್ನೆರಡು ದಿನಗಳಲ್ಲಿ ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದರು
ಇನ್ನುಮುಂದೆ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಮಾಲೀಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಲ್ಲು ಗಣಿಗಳ ಆರಂಭಕ್ಕೆ ಅನುವು ಮಾಡಿಕೊಡುವುದಾಗಿ ಅವರು.
ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ನಡೆಸುವ ಮಾಲೀಕರು ಸ್ಫೋಟಕಗಳನ್ನು ಬಳಕೆ ಮಾಡಲು ಕಡ್ಡಾಯವಾಗಿ ಗಣಿ ಮತ್ತು ಸುರಕ್ಷತಾ ಮಹಾನಿರ್ದೇಶಕರಿಂದ ಪರಾವನಗಿ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಉಂಟಾದ ಎರಡು ಘಟನೆಗಳಿಂದಾಗಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದ ಪರಿಣಾಮ ಕಟ್ಟಡ ಕಾಮಗಾರಿಗಳು ಅರ್ಧಕರ್ಧ ನಿಂತುಹೋಗಿದೆ. ಚಟುವಟಿಕೆಗಳೇ ಸ್ಥಗಿತಗೊಂಡಿರುವುದರಿಂದ ಮಾಲೀಕರಿಗೆ ನಿರ್ವಹಣೆ ಮಾಡಲು ಸಾಧ್ಯವಾಗದೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಪರಿಣಾಮ ಒಂದು ಕಡೆ ಕಾರ್ಮಿಕರಿಗೆ ಉದ್ಯೋಗವಿಲ್ಲದೆ ನಿರುದ್ಯೊಗ ಸೃಷ್ಟಿಯಾಗುತ್ತಿದೆ. ಮತ್ತೊಂದೆಡೆ ಜನರ ಬೇಡಿಕೆಗೆ ತಕ್ಕಂತೆ ನಾವು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಲ್ಲು ಗಣಿಗಳ ಆರಂಭಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‍ಗಳು ಸ್ಥಗಿತಗೊಂಡಿರುವ ಕಾರಣ ಕಚ್ಚಾ ಸಾಮಾಗ್ರಿಗಳ ಬೆಲೆ ಮಾರುಕಟ್ಟೆಯಲ್ಲಿ ದಿಡೀರ್ ಹೆಚ್ಚಳವಾಗಿದೆ ಜನಸಾಮನ್ಯರಿಗೆ ಖರೀದಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಉದ್ಯಮವನ್ನು ನಡೆಸುತ್ತಿರುವ ಸಂಘಟನೆಗಳು ಹಾಗೂ ಮುಖಂಡರು ನಮ್ಮನ್ನು ಭೇಟಿಯಾದಾಗ ಪುನಾರರಂಭಿಸುವಂತೆ ಮನವಿ ಮಾಡಿದ್ದಾರೆ ಎಂದರು,
ಸ್ಪೋಟಕ ವಸ್ತುಗಳನ್ನು ಬಳಸದೆ ಕಲ್ಲು ಗಣಗಾರಿಕೆ ಮತ್ತು ಕ್ರಷರ್‍ಗಳನ್ನು ನಡೆಸಲು ಸಾದ್ಯವಿಲ್ಲ. ಗಣಿ ಸುರಕ್ಷಿತಾ ಮಹಾನಿರ್ದೇಶಕರಿಂದ ಪರಾವನಗಿ ಪಡೆಯುವುದು ಅನಿವಾರ್ಯವಾಗಿದೆ. ಆದರೂ ಇಲ್ಲಿರುವ ಕಠಿಣ ನಿಬಂಧನೆಗಳಿಂದಾಗಿ ಯಾರೊಬ್ಬರೂ ಸ್ಪೋಟಕ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ.
ಇದನ್ನು ಮನಗೊಂಡು ಇಲಾಖೆ ಈಗಿರುವ ಮಾರ್ಗಸೂಚಿಯನ್ನು ಬದಲಾಯಿಸಿ ಸರಳೀಕರಣಗೊಳಿಸಲು ತೀರ್ಮಾನಿಸಿದೆ. ಎಂದು ಹೇಳಿದರು. ಮಾರ್ಗಸೂಚಿಯನ್ನು ಬದಲಾವಣೆ ಮಾಡಿ ಸರಳೀಕರಣ ಮಾಡಿದರೆ ಸ್ಥಗಿತಗೊಂಡಿರುವ ಉದ್ಯಮವನ್ನು ಸರಿ ದಾರಿಗೆ ತರಲು ಸಹಾಯವಾಗಲಿದೆ. ಕಲ್ಲುಗಣಿಗಾರಿಕೆ ಮತ್ತು ಕ್ರಷರ್‍ಗಳಲ್ಲಿ ಸ್ಪೋಟಕಗಳನ್ನು ಬಳಸುವಾಗ ಮಾಲಿಕರು ಕಡ್ಡಾಯವಾಗಿ ನಿಬಂಧನೆಗಳನ್ನು ಪಾಲನೆ ಮಾಡಬೇಕಾಗುತ್ತದೆ. ಎಂದರು
ಉದ್ಯೋಗ ಅವಕಾಶಗಳನ್ನು ನೀಡಬೇಕಾದರೆ ಚಟುವಟಿಕೆಗಳು ನಡೆಯುವುದು ಅನಿವಾರ್ಯವಾಗಿದೆ.
ಕಳೆದ ಹಲವು ತಿಂಗಳಿನಿಂದ ಈ ಉದ್ಯಮ ಸ್ಥಗಿತಗೊಂಡಿರುವ ಕಾರಣ ಭಾರೀ ಮೊತ್ತದ ಹಣ ಹೂಡಿಕೆ ಮಾಡಿದ್ದ ಮಾಲೀಕರು ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ತೀರಿಸದಂತಹ ಸ್ಥಿತಿಗೆ ತಲುಪಿದ್ದಾರೆ ಪ್ರತಿ ತಿಂಗಳು ಅವರಿಗೆ ಸಕಾಲಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಎಂದು ಅವರು ಹೇಳಿ ಇದನ್ನೆಲ್ಲ ಇದನ್ನೆಲ್ಲ ಗಮದಲ್ಲಿಟ್ಟುಕೊಂಡು ಕ್ರಷರ್ ಪುನರಾರಂಭಕ್ಕೆ ತೀರ್ಮಾನ ಮಾಡಿದ್ದೇವೆ ಎಂದರು

ಅದಿರು ನಿಧಿ ಬಳಕೆ

ಜಿಲ್ಲಾ ಅದಿರು ನಿಧಿ(ಡಿಎಂಎಪ್ ) ಸದ್ಬಳಕೆ ಮಾಡಿಕೊಳ್ಳಲು ನಾವು ಹಲವಾರು ರೀತಿಯ ಕ್ರಿಯಾ ಯೋಜನೆಗಳನ್ನು ರೂಪಿಸಿದ್ದೇವೆ.

ರಾಜ್ಯದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಗಳು ಅಸ್ತಿತ್ವದಲ್ಲಿದೆ.ಈ ಯೋಜನೆಯಲ್ಲಿಕುಡಿಯುವ ನೀರು. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಅಳತೆ. ಆರೋಗ್ಯ. ಶಿಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಬಂದಿಸಿದ ಕಾರ್ಯಕ್ರಮ. ವಯಸ್ಸಾದ ಮತ್ತು ವಿಕಲಚೇತನ ವ್ಯಕ್ತಿಗಳ ಕಲ್ಯಾಣ. ಕೌಶಲ್ಯ ಅಭಿವೃದ್ಧಿ, ನೈರ್ಮಲ್ಯತೆ. ಭೌತಿಕ ಮೂಲ ಸೌಕರ್ಯ. ನೀರಾವರಿ. ಶಕ್ತಿ ಮತ್ತು ನೀರಿನ ಅಭಿವೃದ್ಧಿ. ಗಣಿಗಾರಿಕೆ ಜಿಲ್ಲೆಗಳಲ್ಲಿ ಪರಿಸರದ ಗುಣಮಟ್ಟ ಹೆಚ್ಚಿಸುವುದು.
ಈ ಮೇಲ್ಕಂಡ ಅಭಿವೃದ್ಧಿ ಕಾಮಗಾರಿಗಳನ್ನು ನಮ್ಮ ಇಲಾಖೆಯ ಅನುದಾನದಲ್ಲಿ ವಿವಿಧ ಇಲಾಖೆಗಳು ಅವರ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ.
ಈ ಕೆಲಸಗಳನ್ನು ಕೆ.ಐ.ಎ.ಡಿ.ಬಿ ಸಂಸ್ಥೆಯ ಮಾದರಿಯಂತೆ ನಮ್ಮ ಇಲಾಖೆ ವತಿಯಿಂದ ಕರ್ನಾಟಕ ಮಿನರಲ್ ಇಂಡಸ್ಟಿಯಲ್ ಡೆವಲೆಪ್‌ಮೆಂಟ್ ಬೋರ್ಡ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಎಂದು ಹೇಳಿದರು.

ಡಿಎಂಎಪ್ ಗೆ ಜಿಲ್ಲಾ ಉಸ್ತುವಾರಿ ಸಚಿವರೇ ಅಧ್ಯಕ್ಷರಾಗಿರುವುದರಿಂದ ಸಭೆ ನಡೆಸಲು ಸಾಧ್ಯವಾಗಿಲ್ಲ.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ನಿಧಿಯನ್ನು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದರು.