ಕಲ್ಲುಕಂಬ ಗ್ರಾಮದಲ್ಲಿ ಹಳೆ ಆಂಜಿನೇಯಸ್ವಾಮಿ ಪ್ರಾಣ ಪ್ರತಿಷ್ಠಾಪನೆ
ಕಳಸಾರೋಹಣ, ನೂತನದ್ವಜಸ್ತಂಭ ಸ್ಥಾಪನೆ


ಸಂಜೆವಾಣಿ ವಾರ್ತೆ
ಕುರುಗೋಡು, ಆ.01: ಸಮೀಪದ ಕಲ್ಲುಕಂಬ ಗ್ರಾಮದಲ್ಲಿ ಹಳೆ ಆಂಜಿನೇಯಸ್ವಾಮಿ ಪುನಃ ಪ್ರಾಣ ಪ್ರತಿಷ್ಟಾಪನೆ, ನಂತರ ಕಳಸಾರೋಹಣ ನೂತನ ದ್ವಜಸ್ತಂಭ ಸ್ಥಾಪನೆಯನ್ನು ಸಹಸ್ರಾರು ಭಕ್ತ ಸಮೂಹದೊಂದಿಗೆ ಸಂಬ್ರಮ- ಸಡಗರದಿಂದ ಜರುಗಿತು.
ಪ್ರಾರಂಭದಲ್ಲಿ  ಹಳೆ ಆಂಜಿನೇಯಸ್ವಾಮಿ ಸೇವಾಸಮಿತಿ ಹಾಗು ಊರಿನ ಭಕ್ತರಿಂದ ಡೊಳ್ಳು, ತಾಳ, ಮೇಳ ಸೇರಿದಂತೆ ಸಕಲವಾದ್ಯಗಳೊಂದಿಗೆ ಗಂಗೆಪೂಜೆಯನ್ನು ನೆರವೇರಿಸಲಾಯಿತು. ನಂತರ ದೇವಸ್ಥಾನದಲ್ಲಿ ಅರ್ಚಕರಿಂದ ಗಣಪತಿಪೂಜೆ, ಫೂಣ್ಯಾಹವಾಚನ, ನಂದಿಪೂಜೆ, ಉಮಾಮಹೇಶ್ವರ, ಪಂಚಕಲಶ, ನವಗ್ರಹ, ವಾಸ್ತು, ಗಣಹೋಮ, ಸೇರಿದಂತೆ ಇತರೆ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ-ವಿಧಾನಗಳಿಂದ ಸಾಂಗೋಪ-ಸಾಂಗವಾಗಿ ಜರುಗಿದವು.
ನಂತರ ಬ್ರಾಹ್ಮಿ ಮೂಹೂರ್ತದಲ್ಲಿ ಶ್ರೀ ಹಳೆ ಆಂಜಿನೇಯಸ್ವಾಮಿಯ ಪ್ರಾಣಪ್ರತಿಷ್ಟಾಪನೆ ನೇತ್ರನಿಲನ, ಮಹಾರುದ್ರಭಿಷೇಕ, ಸೇರಿದಂತೆ ಮಹಾಮಂಗಳಾರುತಿ ಮಾಡಲಾಯಿತು  ಶ್ರೀ ಹಳೆ ಆಂಜಿನೇಯಸ್ವಾಮಿ ಪುನಃ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮಕ್ಕೆ ವಿದಾನಪರಿಷತ್ ಸದಸ್ಯ ಅಲ್ಲಂವೀರಭದ್ರಪ್ಪ, ಕಂಪ್ಲಿಕ್ಷೇತ್ರದ ಶಾಸಕ ಜೆಎನ್.ಗಣೇಶ, ಕಂಪ್ಲಿಕ್ಷೇತ್ರದ ಮಾಜಿಶಾಸಕ ಟಿಹೆಚ್.ಸುರೇಶಬಾಬು ಸೇರಿದಂತೆ ಇತರೆ ಊರಿನ ಮುಖಂಡರು, ಹಾಗು ಆಂಜಿನೇಯಸ್ವಾಮಿ ದೇವಸ್ಥಾನದ ಸೇವಾಸಮಿತಿಯ ಮುಖಂಡರು, ಮಹಿಳೆಯರು ಬಾಗವಹಿಸಿದ್ದರು. ನಂತರ ಊರಿನ ಸಕಲ ಭಕ್ತರು ಸಾಲು-ಸಾಲಗಿ ಬಂದು ಹಳೆ ಶ್ರೀಆಂಜಿನೇಯಸ್ವಾಮಿಯ ಪ್ರಸಾದ ಸ್ವೀಕರಿಸಿದರು.