ಕಲ್ಲುಕಂಬ ಗ್ರಾಮದಲ್ಲಿ ಮಳೆಗೆ ಬಿದ್ದ ಮನೆಗೆ
ತಹಶೀಲ್ದಾರ್ ಬೇಟಿ ಪರಿಶೀಲನೆ


ಸಂಜೆವಾಣಿ ವಾರ್ತೆ
ಕುರುಗೋಡು.ಆ.3: ಸಮೀಪದ ಕಲ್ಲುಕಂಬ ಗ್ರಾಮದ ರೈತ  ಎನ್.ಯಂಕಣ್ಣ ಮತ್ತು ಎನ್.ದಿವಾಕರಪ್ಪ ಎಂಬ ರೈತರ ಮನೆಗಳು ಗುರುವಾರ ಸುರಿದ ಬಾರೀಮಳೆಗೆ ಬಿದ್ದಿವೆ. ಈ ಹಿನ್ನಲೆಯಲ್ಲಿ ಕುರುಗೋಡು ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಮಳೆಗೆ ಬಿದ್ದ ಮನೆಗೆ ಬೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಅಕಾಲಿಕ ಮಳೆಗೆ ತುತ್ತಾದ ಮನೆ, ಸೇರಿದಂತೆ ಇತರೆ ಬೆಳೆ ನಷ್ಟಹೊಂದಿದ ರೈತರಿಗೆ ಸರ್ಕಾರದಿಂದ ಸೂಕ್ತಪರಿಹಾರ ನೀಡಲಾಗುವುದು. ರೈತರು ಯಾವುದೇ ರೀತಿಯಲ್ಲಿ ಚಿಂತಿಸಬೇಕಿಲ್ಲ. ಸರ್ಕಾರ ಸಂತ್ರಸ್ಥರಿಗೆ ಪರಿಹಾರ ನೀಡಿ ಪರಿಹಾರ ನೀಡಲಾಗುವುದು ಎಂದು ರೈತ ಕಟುಂಬಗಳಿಗೆ ಸಾಂತ್ವನ ಹೇಳಿದರು. ಆದ್ದರಿಂದ  ಗ್ರಾಮಲೆಕ್ಕಾದಿಕಾರಿ ಕೊಟ್ರೇಶನಾಯಕರವರು ಬಿದ್ದಮನೆ, ಸೇರಿದಂತೆ ಇತರೆ ಬೆಳೆ ನಷ್ಟಹೊಂದಿದ ರೈತರ ಕುಟುಂಬಗಳನ್ನು ಸರ್ವೆಮಾಡಿ ದಾಖಲೆಗಳೊಂದಿಗೆ ಅರ್ಜಿಸಲ್ಲಿಸುವಂತೆ ಗ್ರಾಮಲೆಕ್ಕಾಧಿಕರಿಗಳಿಗೆ ಸೂಚಿಸಿದರು.
ಕಲ್ಲುಕಂಬ ಗ್ರಾಮಲೆಕ್ಕಾದಿಕಾರಿ ಕೊಟ್ರೋಶನಾಯಕ್ ರವರು ಮಾತನಾಡಿ, ಗುರುವಾರ ಬೆಳಿಗ್ಗೆ ದಾರಾಕಾರವಾಗಿ ಸುರಿದ ಮಳೆಯಿಂದಾಗಿ ಸುಮಾರು 56 ಮೀ.ಮೀ. ಮಳೆಯಾಗಿದೆ. ಮಳೆಯ ರಭಸಕ್ಕೆ ಗ್ರಾಮದ ರೈತ ಎನ್.ಯಂಕಣ್ಣ, ಎನ್.ದಿವಾಕರಪ್ಪ ಮನೆಗಳು ಕುಸಿದುಬಿದ್ದಿವೆ. ಇಂದಿನಿಂದ ಮಳೆಗೆ ಬಿದ್ದ ಮನೆಗಳನ್ನು ಸರ್ವೆ ಮಾಡಿ  ತಮ್ಮ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕುರುಗೋಡು ಗ್ರೇಡ್2 ತಹಶೀಲ್ದಾರ್ ಮಲ್ಲೇಶಪ್ಪ, ರೈತರು ಇದ್ದರು.

Attachments area