ಕಲ್ಲುಕಂಬ ಗ್ರಾಮದಲ್ಲಿ ಉಚಿತವಾಗಿ ಸಿಇಟಿ ತರಬೇತಿ ಕೇಂದ್ರ ಪ್ರಾರಂಭ

????????????????????????????????????

ಕುರುಗೋಡು. ನ. 15 : ಗ್ರಾಮೀಣ ಮಟ್ಟದ ಪ್ರತಿಭಾವಂತ ವಿದ್ಯಾಥಿಗಳಿಗೆಂದು ಕಲ್ಲುಕಂಬ ಗ್ರಾಮದಲ್ಲಿ ಉಚಿತವಾಗಿ ಸಿಇಟಿ ತರಬೇತಿ ನೀಡುವ ಕೇಂದ್ರ ಪ್ರಾರಂಭವಾಗಿರುವುದು ಶ್ಲಾಘನಿಯ ಕಾರ್ಯ ಎಂದು ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ ಅಭಿಪ್ರಾಯ ಪಟ್ಟರು.
ಸಮೀಪದ ಕಲ್ಲುಕಂಬ ಗ್ರಾಮದ ಮೇಘನಾ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ “ಸ್ವಾಭಿಮಾನಿ ಸಿಇಟಿ ತರಬೇತಿ ಕೇಂದ್ರ” ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಇಟಿ ತರಬೇತಿ ಕೇಂದ್ರಗಳು ಪಟ್ಟಣಕ್ಕೆ ಮಾತ್ರ ಸೀಮಿತವಾಗಿವೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ಪಡೆಯಬೇಕೆಂದರೆ ದೂರದ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ ನಮ್ಮ ಭಾಗಕ್ಕೆ ಇರುವ ಹೈದ್ರಾಬಾದ್ ಕರ್ನಾಕಟ ಕೋಟಾ ಅಡಿ ಸೌಲಭ್ಯ ಪಡೆಯಲು ಗ್ರಾಮೀಣ ಮಟ್ಟದಲ್ಲಿರುವ ಈ ಉಚಿತ ತರಬೇತಿ ಕೇಂದ್ರ ಉಪಯುಕ್ತವಾಗಲಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ನಂತರ ಮಾತನಾಡಿದ ಪಿಎಸ್‍ಐ ಶಾಂತಪ್ಪ ಜಡೆಮ್ಮನವರ್, ಉತ್ತಮ ಶಿಕ್ಷಣದಿಂದ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ, ವಿದ್ಯೆ ಇದ್ದರೇ ಹಣ ತನಾಗಿಯೇ ಬರುತ್ತದೆ. ಇತ್ತಿಚೀನ ದಿನಗಳಲ್ಲಿ ಯುವ ಪೀಳಿಗೆ ಪೋನ್ ದುರ್ಬಳಕೆ, ಐಪಿಎಲ್ ಬೆಟ್ಟಿಂಗ್, ಮೋಜು ಮಸ್ತಿಗೆಂದು ಅಡ್ಡ ದಾರಿ ಹಿಡಿಯುತ್ತಿದ್ದಾರೆ. ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳು ಇಂಗ್ಲೀಷ್ ವಿಷಯದ ಬಗ್ಗೆ ನಕರಾತ್ಮಕವಾಗಿ ಯೋಚಿಸದೇ ಕೇವಲ ಸಾಧನೆಯತ್ತ ಗಮನಹರಿಸಬೇಕು ಆಗ ತನಾಗಿಯೇ ಯಶಸ್ಸು ಸಿಗುತ್ತದೆ ಎಂದರು.
ನಂತರ ವಾಣಿಜ್ಯ ತೆರೆಗೆ ಅಧಿಕಾರಿ ಬಿ.ಕೆ.ಹರೀಶ್ ಮಾತನಾಡಿ, ಸಾಧನೆಗೆ ಕಷ್ಟಗಳು ಸಹಜ ಆದರೇ ಜಗತ್ತು ಸಾಧಕರನ್ನು ಮಾತ್ರ ನೆನಪಿಡುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಧನೆಯ ದಾರಿಗಳನ್ನು ಹುಡುಕಿಕೊಡುವ ಕೆಲಸವನ್ನು ಸಿಇಟಿ ಕೇಂದ್ರಗಳು ಮಾಡುತ್ತವೆ. ತರಬೇತಿಗೆ ನಮ್ಮನ್ನು ಸಂಪೂರ್ಣವಾಗಿ ವಿದ್ಯೆ ಕಡೆಗೆ ತೊಡಗಿಸಿಕೊಂಡರೇ ಮಾತ್ರ ಮುಂದಿನ ದೊಡ್ಡ ಗುರಿ ತಲುಪಬಹುದು. ಈಗಿರುವ ಸ್ಪರ್ದಾ ಪರೀಕ್ಷೆಯಲ್ಲಿ ಮಾರ್ತ ಭಾಷೆಯನ್ನು ಸಹ ಬರೆಯಲು ಅವಕಾಶವಿದ್ದು ವಿದ್ಯಾರ್ಥಿಗಳು ಉಚಿತ ಸಿಇಟಿ ತರಬೇತಿ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಸಿಗುವಂತಾಗಲಿ ಎಂದು ಶುಭಕೋರಿದರು.
ಆಶಾಪುರ ವಾಗೀಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಕೆ.ಹೆಚ್.ಮಂಜುನಾಥ, ಮೇಘನಾ ಶಾಲೆ ಮುಖ್ಯಸ್ಥ ಬಿ.ಸಿದ್ದಪ್ಪ, ಪಿಡಿಒ ಅನೀಲ್ ಕುಮಾರ್, ಕಡ್ಲೆ ವಿರುಪಾಕ್ಷ ಶಿಕ್ಷಕರಾದ ಶಾಂತಲಾ ಅರುಣ್ ಕುಮಾರ್, ಬಸಟೆಪ್ಪ, ತಾಯಪ್ಪ, ಬಾಗ್ಲಿ ಮಲ್ಲಿಕಾರ್ಜುನ, ಜಾಕೀರ್ ಹುಸೇನ್, ಹಾಗೂ ಊರಿನ ಮುಖಂಡರು ಇದ್ದರು.