ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಕೊಲೆ

ಬೆಂಗಳೂರು,ನ.16-ಕಲ್ಲಿನಿಂದ ಜಜ್ಜಿ ವ್ಯಕ್ತಿವೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಿಡಗುಂದಿಯ ವಿಜಯಲಕ್ಷ್ಮಿ ವೈನ್ ಶಾಪ್ ಬಳಿ ನಡೆದಿದೆ.
ನಿಡಗುಂದಿಯ ತಿಪ್ಪಣ್ಣ ಗೊಂದಳಿ (36) ಕೊಲೆಯಾದವರು,ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಇಸ್ಪೀಟ್ ಆಟದಲ್ಲಿ ತಿಪ್ಪಣ್ಣ
ಹಣ ಗೆದ್ದಿದ್ದು ಈ ವಿಚಾರವಾಗಿ ಜಗಳ ನಡೆದಿದೆ.
ಜಗಳ‌ ವಿಕೋಪಕ್ಕೆ ತಿರುಗಿದಾಗ ತಿಪ್ಪಣ್ಣನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಜೊತೆಯಲ್ಲಿದ್ದವರು ಪರಾರಿಯಾಗಿದ್ದಾರೆ. ನಿಡಗುಂದಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.