ಕಲ್ಲಿದ್ದಲು ಸಂಪನ್ಮೂಲದ ಸಮರ್ಥ ಬಳಕೆಯಿಂದ ವಿದ್ಯುತ್ ಸ್ವಾವಲಂಬನೆ

ಧಾರವಾಡ, ಜು 30: ಕಲ್ಲಿದ್ದಲು ಗಣಿಗಳ ಸಮರ್ಪಕ ಬಳಕೆಯಿಂದ ದೇಶದಲ್ಲಿ ವಿದ್ಯುತ್ ಸ್ವಾವಲಂಬನೆ ಸಾಧ್ಯವಾಗಿದೆ.ಹುಬ್ಬಳ್ಳಿ ಧಾರವಾಡ ಭೂ ಅಂತರ್ಗತ ವಿದ್ಯುತ್ ಕೇಬಲ್ ಅಳವಡಿಸುವ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿದೆ.ಸರ್ಕಾರ ಅಗತ್ಯ ಅನುದಾನ ನೀಡಲಿದೆ.ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರ ನೆರವು ನೀಡುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಭಾರತ ಸರ್ಕಾರದ ವಿದ್ಯುತ್ ಸಚಿವಾಲಯ,ಇಂಧನ ಇಲಾಖೆ,ಜಿಲ್ಲಾಡಳಿತ ,ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮ ನಿಯಮಿತ ಹಾಗೂ ಹೆಸ್ಕಾಂ ಸಹಯೋಗದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಪು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿದ್ಯುತ್ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಭಾರತಿ ಡಿ ಮಾತನಾಡಿ,ಉಜ್ವಲ ಭಾರತ ಉಜ್ವಲ ಭವಿಷ್ಯ ಪವರ್ @2047 ಶೀರ್ಷಿಕೆಯಡಿ ಜುಲೈ 25 ರಿಂದ 30 ರವರೆಗೆ ದೇಶದಾದ್ಯಂತ ವಿದ್ಯುತ್ ಮಹೋತ್ಸವ ಜರುಗುತ್ತಿದೆ.ಇಂಧನ ಇಲಾಖೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ,ಬಡತನ ರೇಖೆಗಿಂತ ಕೆಳಗಿರುವ ಹಾಗೂ ಪರಿಶಿಷ್ಟ ಜಾತಿ ,ಪರಿಶಿಷ್ಠ ಪಂಗಡದ ಜನರಿಗಾಗಿ ವಿವಿಧ ಯೋಜನೆಗಳನ್ನು ಅನುμÁ್ಠನ ಮಾಡುತ್ತಿದೆ.ಯೋಜನೆಗಳ ಕುರಿತು ಫಲಾನುಭವಿಗಳ ಅನಿಸಿಕೆ ಸಂಗ್ರಹಿಸಲಾಗುತ್ತಿದೆ.ನೀರಾವರಿ ಪಂಪ್‍ಸೆಟ್ ಹೊಂದಿರುವ ರೈತರು ಎದುರಿಸುತ್ತಿದ್ದ ವಿದ್ಯುತ್ ಪರಿವರ್ತಕಗಳ ಸಮಸ್ಯೆ ನಿವಾರಿಸಲು ಟಿ.ಸಿ.ಬ್ಯಾಂಕ್‍ಗಳ ಮೂಲಕ ಕೃಷಿಕರಿಗೆ ತ್ವರಿತ ಸ್ಪಂದನೆ ನೀಡಲಾಗುತ್ತಿದೆ.ಗ್ರಾಮೀಣ ಭಾಗಕ್ಕೆ ಹೆಸ್ಕಾಂ ಅಧಿಕಾರಿಗಳು ಪ್ರತಿ ತಿಂಗಳು ಮೂರನೇ ಶನಿವಾರ ಭೇಟಿ ನೀಡಿ ವಿದ್ಯುತ್ ಅದಾಲತ್ ಮೂಲಕ ಜನಸ್ಪಂದನೆ ನೀಡಿ ಇಂಧನ ಇಲಾಖೆಯನ್ನು ಗ್ರಾಹಕ ಹಾಗೂ ಜನಸ್ನೇಹಿಯನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಹೆಸ್ಕಾಂ ಅಧಿಕಾರೇತರ ನಿರ್ದೇಶಕ ಸುನೀಲ ಸರೂರ ಮಾತನಾಡಿದರು. ಪ್ರಕಾಶ ಪಾಟೀಲ, ರಮೇಶ ಬೆಂಡಿಗೇರಿ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ವಿನಾಯಕ ಪಾಲನಕರ್, ವೆಂಕಟರೆಡ್ಡಿ, ವಿಚಕ್ಷಣಾ ದಳದ ಎಸ್.ಪಿ.ಶಂಕರ ಮಾರಿಹಾಳ ಮತ್ತಿತರರು ವೇದಿಕೆಯಲ್ಲಿದ್ದರು.