ಕಲ್ಲಿದ್ದಲು ಕಳ್ಳತನ ತನಿಖೆಯಿಂದ ಸಾಬೀತುಸ್ಟೇಷನ್‌ಮಾಸ್ಟರ್, ಗುತ್ತಿಗೆದಾರನ ವಿರುದ್ಧ ಎಫ್‌ಐಆರ್

ರಾಯಚೂರು, ನ.೨೫:ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಸರಬರಾಜು ಮಾಡುವ ಕಲ್ಲಿದ್ದಲು ತನಿಖೆಯಿಂದ ಸಾಬೀತುಗೊಂಡ ಹಿನ್ನೆಲೆಯಲ್ಲಿ ಯರಮರಸ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಗುತ್ತಿಗೆದಾರ ಶ್ರೀನಿವಾಸುಲು ವಿರುದ್ಧ ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಫ್‌ಐಆರ್ ದಾಖಲಾಗಿದೆ.
ಇದೇ ನವೆಂಬರ್ ೧೯, ೨೦ರಂದು ಐದು ಲಕ್ಷ ಮೌಲ್ಯದ ೧೨೦ ಮೆಟ್ರಿಕ್ ಟನ್ ಕಚ್ಚಾ ಕಲ್ಲಿದ್ದಲು ಕಳ್ಳತನವಾಗಿರುವ ಕುರಿತು ಕೆಲ ಸಂಘಟನೆಗಳು ಆರೋಪ ಮಾಡಿದ್ದವು ಈ ಆರೋಪವನ್ನು ಗಂಭಿರವಾಗಿ ಪರಿಗಣಿಸಿದ ರೈಲ್ವೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಕಳ್ಳತನ ಪತ್ತೆಹಚ್ಚವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸೇರಿದ ಕಲ್ಲಿದ್ದಲು ಅಕ್ರಮ ಸಾಗಾಟ ಪ್ರಕರಣ ಸಂಬಂಧ ತನಿಖಾ ಸಮಿತಿ ಪರಿಶೀಲನೆ ವೇಳೆ ಕಲ್ಲಿದ್ದಲು ಕಳ್ಳತನ ಬಯಲಾಗಿದೆ. ಸದ್ಯ ಗುತ್ತಿಗೆದಾರ ಶ್ರೀನಿವಾಸುಲು ಹಾಗೂ ಯರಮರಸ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಸರಬರಾಜು ಮಾಡುವ ಕಲ್ಲಿದ್ದಲು ಅನಧಿಕೃತ ಜಾಗದಲ್ಲಿ ಸಂಗ್ರಹವಾಗಿದ್ದ ಸ್ಥಳಕ್ಕೆ ತನಿಖಾ ತಂಡದ ಅಧಿಕಾರಿ ಯತಿರಾಜ್ ರಘುನಾಥ, ಅಜಯ ಮತ್ತು ಕೃಷ್ಣಾಮೂರ್ತಿ ಅವರು ಭೇಟಿ ನೀಡಿ ಪರಿಶೀಲಿಸಿದ್ದು ಅಕ್ರಮ ಬಯಲಾಗಿದೆ.
ಯರಮರಸ್ ವಿದ್ಯುತ್ ಉತ್ಪಾದನಾ ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಂದ್ರ ಅವರು ರಾಯಚೂರು ಗ್ರಾಮೀಣ ಠಾಣೆಗೆ ಕಲ್ಲಿದ್ದಲು ಕಳ್ಳತನದ ಬಗ್ಗೆ ದೂರು ನೀಡಿದ್ದರು. ಇನ್ನು ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳಿಗೆ ಸರಬರಾಜು ಮಾಡುವ ಕಲ್ಲಿದ್ದಲು ಅನಧಿಕೃತ ಜಾಗದಲ್ಲಿ ಸಂಗ್ರಹವಾಗಿದ್ದ ಸ್ಥಳಕ್ಕೆ ತನಿಖಾ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು ಅಕ್ರಮ ಬಯಲಾಗಿದೆ. ಮತ್ತೊಂದೆಡೆ ಕಲ್ಲಿದ್ದಲು ಬೇರೆಡೆ ಮಾರಾಟದ ಬಗ್ಗೆ ಖುದ್ದು ಗುತ್ತಿಗೆದಾರ ಶ್ರೀನಿವಾಸುಲು ಒಪ್ಪಿಕೊಂಡಿದ್ದರು. ಇದೀಗ ರಾಯಚೂರು ತಾಲೂಕಿನ ಯರಮರಸ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್, ಗುತ್ತಿಗೆದಾರ ಶ್ರೀನಿವಾಸುಲು ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇನ್ನು ಶ್ರೀನಿವಾಸುಲು ಅವರು ರಾಘವೇಂದ್ರ ಎಂಟರ್ ಪ್ರೈಸಸ್ ಹೆಸರಿನ ಕಂಪನಿ ಮೂಲಕ ರೈಲ್ವೆ ವ್ಯಾಗನ್ ಸ್ಬಚ್ಛಗೊಳಿಸುವ ಗುತ್ತಿಗೆ ಪಡೆದಿದ್ದರು. ಇದೇ ನವೆಂಬರ್ ೧೯, ೨೦ರಂದು ಐದು ಲಕ್ಷ ಮೌಲ್ಯದ ೧೨೦ ಮೆಟ್ರಿಕ್ ಟನ್ ಕಚ್ಚಾ ಕಲ್ಲಿದ್ದಲು ಕಳ್ಳತನವಾಗಿದೆ. ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್?ಗೆ ಸೇರಿದ ಕಲ್ಲಿದ್ದಲನ್ನ ಕಳ್ಳತನ ಮಾಡಿ ಯರಮರಸ್ ರೈಲು ನಿಲ್ದಾಣದ ಹೊರ ಭಾಗದಲ್ಲಿ ಶೇಖರಣೆ ಮಾಡಿದ್ದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗುತ್ತಿಗೆದಾರ ಶ್ರೀನಿವಾಸುಲು ಹಾಗೂ ಯರಮರಸ್ ರೈಲು ನಿಲ್ದಾಣದ ರೈಲ್ವೆ ಸ್ಟೇಷನ್ ಮಾಸ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದೆ.