ಕಲ್ಲಹಳ್ಳಿಯಲ್ಲಿ ಸಿಡಿಲ ಅಬ್ಬರಕ್ಕೆ 12 ಕುರಿಗಳ ಬಲಿ.

ಹೊಸಪೇಟೆ ಜೂ 5: ಹೊಸಪೇಟೆ: ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ವೇಳೆ ಬಡಿದ ಸಿಡಿಲಿಗೆ ಕುರಿಗಾಯಿ ಕಣಿಮೆಪ್ಪ ಅವರ 12 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಶುಕ್ರವಾರ ಸಂಜೆ ಬಿರುಸಿನ ಮಳೆಯಾಗುವ ವೇಳೆ ಮೇಯಿಸಲು ಕರೆದೊಯ್ದಿದ್ದ 180 ಕುರಿಗಳನ್ನು ಪುನಃ ಹಟ್ಟಿಗೆ ತಲುಪಿಸುವ ವೇಳೆ 12 ಕುರಿಗಳು ಗುಂಪಾಗಿ ರಸ್ತೆಬದಿಯಲ್ಲಿ ಮೇವನ್ನು ತಿನ್ನುತ್ತಾ ಸಾಗುವ ವೇಳೆ ಬಂದ ಸಿಡಿಲಿಗೆ ಕುರಿಗಳು ಮರಣ ಹೊಂದಿವೆ.
ಘಟನೆಯನ್ನು ಪ್ರತ್ಯಕ್ಷ ಕಂಡ ಕುರಿಗಾಯಿಯ ತಮ್ಮ ಗಾಭರಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದು, ಉಳಿದ ಕುರಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಕಣಿಮೆಪ್ಪ ತಿಳಿಸಿದರು.