ಕಲ್ಲಹಂಗರಗಾ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ!

ಜೇವರ್ಗಿ: ಜು.24:ತಾಲೂಕಿನ ಕಲ್ಲಹಂಗರಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 14 ಜನರ ಸಂಖ್ಯೆ ಬಲ ಹೊಂದಿರುವ ಈ ಪಂಚಾಯಿತಿಗೆ ಅಧ್ಯಕ್ಷರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಅಲ್ಲದೆ ಏಕ ಪಕ್ಷ ನಿರ್ಣಯಕ್ಕೆ ಮುಂದಾಗುತ್ತಿದ್ದಾರೆ. ಅನಗತ್ಯ ಹಸ್ತಕ್ಷೇಪ ಹಾಗೂ ತಮ್ಮ ತೊಗಲಕ್ ನೀತಿಯಿಂದಾಗಿ ಎಲ್ಲಾ ಚುನಾಯಿತ ಸದಸ್ಯರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.ಇದರಿಂದ ಬೇಸತ್ತ ಚುನಾಯಿತ ಹತ್ತು ಜನ ಪ್ರತಿನಿಧಿಗಳು ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದು ,ಜನಪ್ರತಿನಿಧಿಗಳ ಈ ನಡೆ ತಾಲೂಕಿನ ಇತರ ಗ್ರಾಮ ಪಂಚಾಯತಿಯ ಅಚ್ಚರಿ ಮೂಡಿಸಿದೆ.
ಮಾತು ತಪ್ಪಿದ ಅಧ್ಯಕ್ಷರು ಗತ್ತು ತೋರುತ್ತಿರುವ ಸದಸ್ಯರು,:ಒಳ ಹೊಂದಾಣಿಕೆ, ತಪ್ಪಿದ ಮಾತು ಅವಿಶ್ವಾಸ ನಿರ್ಣಯಕ್ಕೆ ಮುಂದಾದರೆ .
ಅಧ್ಯಕ್ಷರಾದ ಭಾಗಮ್ಮ ಗಂಡ ಬಸವರಾಜ್ ಕೊಳಕೂರ ಮೂಲತಹ ಮಾವನೂರಿವರು. ಬಹುಜನ ಪ್ರಾಬಲ್ಯ ಹೊಂದಿದ ಬಿ.ಜೆ.ಪಿ ಪಕ್ಷದ ಚುನಾಯಿತ ಎಂಟು ಜನ ಸದಸ್ಯರ ಬಹುಮತ ಹೊಂದಿದ್ದರು ಸದಸ್ಯರಿದ್ದರು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಾದ ಹಿಂದುಳಿದ ಮಹಿಳೆಯ ಸ್ಥಾನಕ್ಕೆ ಇವರನ್ನು ನೇಮಿಸಿದ್ದು ಮುಳುವಾಗಿ ಪರಿಣಮಿಸಿದೆ. ಅಧ್ಯಕ್ಷ ಸ್ಥಾನ ಪಡೆಯಲು ಈ ಮೂಲಕ ಪ್ರಾಬಲ್ಯ ಮೆರೆಯಬೇಕೆಂದಿದ್ದ ಬಿ.ಜೆ.ಪಿ ಪಾಳ್ಯಾದಲ್ಲಿ ನಾಯಕರಿಗೆ ಮುಜುಗರ ಉಂಟಾಗಿದೆ. ಅಲ್ಲದೆ ಕುಟುಂಬದ ಹಿತೈಷಿಗಳು ಹಾಗೂ ಸಂಬಂಧಗಳು ನಿರ್ಣಯಕ್ಕೆ ಬರುವಂತೆ ತಿಳಿಸಿದ್ದಾಗಿ ಜನವಲಯದಲ್ಲಿ ಚರ್ಚೆಗೆ ಕಾರಣವಾಗಿದೆ .ಇವರ ಪತಿ Àಂಚಾಯತ್ ಕಾರ್ಯದಲ್ಲಿ ತಲೆ ಹಾಕುತ್ತಿದ್ದು ಅನವಶ್ಯಕ ಹಸ್ತಕ್ಷೇಪ ಹಾಗೂ ಆಡಳಿತದಲ್ಲಿ ಅಜಾಗರುಕತೆ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಬಿ
ಜೆ.ಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಅಧ್ಯಕ್ಷರಾಗಲು ಅವಕಾಶ ಇದ್ದರೂ ಸಹ ಇಲ್ಲಿ ಪ್ರಾಬಲ್ಯ ಹೊಂದಿರುವ ತಮ್ಮ ಸದಸ್ಯರನ್ನು ಬಿಟ್ಟು ಪಕ್ಷಕ್ಕೆ ಸೇರಿರದ ಹಾಗೂ ಮುಂದೆ ಬೆಂಬಲ ನೀಡುವುದಾಗಿ ತಿಳಿಸಿ, ನಮಗೆ ಅಧ್ಯಕ್ಷ ಮಾಡಿ 13 ತಿಂಗಳು ನಂತರ ನಾವು ರಾಜೀನಾಮೆ ನೀಡುತ್ತೇವೆ ಎಂದು ಹೇಳಿ ಈಗ ಮಾತು ತಪ್ಪಿದ್ದು ಈ ಅವಿಶ್ವಾಸ ನಿರ್ಣಯಕ್ಕೆ ಮೂಲ ಕಾರಣ ಎಂದು ಗೊತ್ತಿದೆ.
ಆರು ತಿಂಗಳಿಂದ ಅಭಿವೃದ್ಧಿ ಕಾರ್ಯ ಕುಂಠಿತ :
ಸದರಿ ಕಲ್ಲಹಂಗರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಸಮಸ್ಯೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಹಾಗೂ ಆರು ತಿಂಗಳಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತ ಗೊಂಡಿವೆ.
ಅಧ್ಯಕ್ಷರು ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷಿಯ ನಿರ್ಣಯ ತೆಗೆದುಕೊಳ್ಳುತ್ತಿದ್ದು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ. ಎಂದು ಸದಸ್ಯರು ಹಾಗೂ ಉಪಾಧ್ಯಕ್ಷರು ಆರೋಪಿಸಿದ್ದಾರೆ.
ಆಯುಕ್ತರಿಗೆ ದೂರು :
ಈ ಕುರಿತಂತೆ ಇಂದು ಸಹಾಯಕರು ಆಯುಕ್ತರು ಉಪ ವಿಭಾಗ ಕಲ್ಬುರ್ಗಿಯವರಿಗೆ ಪತ್ರ ಬರೆದಿರುವ ಉಪಾಧ್ಯಕ್ಷರು ಸೇರಿದಂತೆ 10 ಜನ ಚುನಾಯಿತ ಪ್ರತಿನಿಧಿಗಳು ಅವಿಶ್ವಾಸ ನಿರ್ಣಯಕ್ಕೆ ದಿನಾಂಕ ನಿಗದಿಪಡಿಸಲು ಅವಲತ್ತುಕೊಂಡಿದ್ದಾರೆ. ಈ ಕುರಿತಂತೆ ಆಯುಕ್ತರು ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡಲು ಸಮಯಾವಕಾಶ ನೀಡಿ ಈ ಸಮಸ್ಯೆಯ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಜನ ಪ್ರತಿನಿಧಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪರಿಶೀಲನೆ ನಡೆಸಿ ಆದಷ್ಟು ಬೇಗನೆ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ದಿನಾಂಕ ನಿಗದಿಪಡಿಸಿ ಪುನಃ ಅಧ್ಯಕ್ಷರ ಬಹುಮತ ಸಾಬೀತು ಪಡಿಸುವಿಕೆಗೆ ಕರೆಯುತ್ತಾರೋ ? ಇಲ್ಲವೇ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಹಳ್ಳಿಯ ರಾಜಕೀಯ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಅನ್ನೋದನ್ನ ಮುಂದೆ ಕಾದು ನೋಡಬೇಕಿದೆ
ಪಂಚಾಯತ್ ಅವ್ಯವಹಾರದ ಆಗರ ! ಹಣಕಾಸಿನ ವ್ಯವಹಾರದಲ್ಲಿ ಭಾರಿ ಗೋಲ್ಮಾಲ್ !
ಕಲ್ಲಹಂಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಸರಿಯಾಗಿ ಗಮನಹರಿಸುತ್ತಿಲ್ಲಾ. ಪಂಚಾಯತ್ ಸದಸ್ಯರಿಗೆ ಯಾವುದೇ ರೀತಿಯಲ್ಲಿ ಬೆಲೆ ನೀಡದೆ ಅನಗತ್ಯವಾಗಿ ಅಧಿಕಾರ ಸೇರಿದಂತೆ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡು ಪಂಚಾಯತಿಯ ಹಣಕಾಸಿನ ವ್ಯವಹಾರದಲ್ಲಿ ಭಾರಿ ಗೋಲ್ಮಾಲ್ ಮಾಡುತ್ತಿದ್ದು, ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.