ಕಲ್ಲಯ್ಯ ಅಜ್ಜನವರಿಗೆ ತುಲಾಭಾರ

(ಸಂಜೆವಾಣಿ ವಾರ್ತೆ)
ಹಾವೇರಿ,ಸೆ7 : ಜಿಲ್ಲೆಯ ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಗ್ರಾಮದಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮ ಡಾ.ಪರಂ ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರ ತುಲಾಭಾರ ಕಾರ್ಯಕ್ರಮ ಜರುಗಿತು.
ಗ್ರಾಮದ ಹೊನ್ನಪ್ಪ – ಪಾರ್ವತಿ ಮರೆಮ್ಮನವರ ಕುಟುಂಬದವರಿಂದ 2105. ನೇ ತುಲಾಭಾರ ಕಾರ್ಯಕ್ರಮ ಜರುಗಿತು.
ತುಲಾಭಾರ ಸ್ವೀಕರಿದ ಬಳಿಕ ಕಲ್ಲಯ್ಯ ಅಜ್ಜನವರ ಮಾತನಾಡಿ, ತುಲಾಭಾರ ಸೇವೆಯಿಂದ ಶ್ರೀಮಠದ ಅಂಧ,ಅನಾಥ ಮಕ್ಕಳಿಗೆ ಸಹಾಯವಾಗುತ್ತೇ. ಮಠದಲ್ಲಿ ನಿತ್ಯ ಸಾವಿರಾರು ಜನರಿಗೆ ದಾಸೋಹ ನಡೆಯುತ್ತೇ. ಆ ಎಲ್ಲರ ಹಸಿವು ನೀಗಿಸುವ ಕೆಲಸವನ್ನು ಶ್ರೀಮಠದ ಭಕ್ತರು ಮಾಡುತ್ತಿದ್ದಾರೆ.ನಿತ್ಯ ಮಠದಲ್ಲಿ ದಾಸೋಹವು, ಮಠಕ್ಕೆ ಭಕ್ತರು ನೀಡುವ ಸಹಕಾರದಿಂದ ನಡೆಯುತ್ತೇ ಎಂದರು. ಇಂದು ಈ ಗ್ರಾಮದಲ್ಲಿ ನಡೆದಿರುವ 2105. ನೇ ತುಲಾಭಾರ ನನ್ನ ತುಲಾಭಾರ ಅಲ್ಲಾ, ಲಿಂಗಕೈ ಗುರುಗಳ ತುಲಾಭಾರ, ಪುಣ್ಯಾಶ್ರಮದ ವಿದ್ಯಾರ್ಥಿಗಳ ತುಲಾಭಾರ,ಅಂಧ ಅನಾಥರ ತುಲಾಭಾರ ನಾನು ಎನೀದ್ದರೂ ನೆಪ ಮಾತ್ರ.ಆಶ್ರಮದಲ್ಲಿ ದಾಸೋಹವನ್ನು ನಿಲ್ಲಿಸಿ ಎಂದು ಬಹಳಷ್ಟು ಜನರು ಹೇಳಿದ್ರು. ಆದ್ರೆ ನಾನು ಹೇಳಿದೆ, ಇನ್ನೂ ಒಂದು ಸಾವಿರ ಜನ ಹೆಚ್ಚಿಗೆ ಬರಲಿ, ಭಕ್ತರು ನೀಡಿದ್ದನ್ನು ಭಕ್ತರಿಗೆ ನೀಡುವುದರಲ್ಲಿ ತಪ್ಪೇನು ಎಂದೆ. ಇವತ್ತಿನವರೆಗೂ ನಮ್ಮಲ್ಲಿ ನಿತ್ಯ ಮೂರು ಬಾರಿ ಪ್ರಸಾದ ಸೇವೆ ಇರುತ್ತೆ. ನಮಗೆ ಸರಕಾರದಿಂದ ಎನೂ ಕೊಟ್ಟಿಲ್ಲ, ಕೊಟ್ಟಿಲ್ಲ ಎಂದುಕೊಂಡು ನಾವು ದಾಹೋಹ ಮಾಡುವುದು ಬಿಟ್ಟಿಲ್ಲ. ನಮಗೆ ಯಾವ ಧರ್ಮವಿಲ್ಲಾ, ಜಾತಿಯಿಲ್ಲಾ ಆಶ್ರಮ-ಪುಣ್ಯಾಶ್ರಮ ಮಾತ್ರವಿದೆ. ಒಂದೇ ಊಟ, ಒಂದೇ ಪಂಥಿ ಇರುವಂತ ಆಶ್ರಮ. ಇಲ್ಲಿ ಮೇಲು,ಕೀಳು ಯಾವುದು ಇಲ್ಲ, ಎಲ್ಲರೂ ಸಮಾನರು ಎಂದರು.
ಹಾವೇರಿ ಜಿಲ್ಲೆ ಪುಣ್ಯವಂತ ಭೂಮಿ:
ಹಾನಗಲ್ ಕುಮಾರಸ್ವಾಮಿಗಳು,ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು ಜನಿಸಿರುವ ಪುಣ್ಯಭೂಮಿ ಹಾವೇರಿ. ಅಂತಹ ಮಹಾನುಭಾವ ಜನ್ಮ ಕೊಟ್ಟಿರುವ ನೆಲದಲ್ಲಿ ಜನಿಸಿರುವ ನೀವು ಎಂತಾ ಪುಣ್ಯವಂತರು. ಇಲ್ಲಿ ಜನಿಸಿದ ಸಂತರನ್ನು ಗದಗ ಜಿಲ್ಲೆಗೆ ಕಳಿಸಿದ ಪರಿಣಾಮ ಇಡಿ ದೇಶದಲ್ಲಿ ಇರುವ ಕುರುಡ-ಕುಂಟರಿಗೆ ಸಂಗೀತ, ಸಾಹಿತ್ಯ ಕಲಿಸಿ ಅವರ ಜೀವನಕ್ಕೆ ಅರ್ಥ ಕೊಟ್ಟಂತ ಪುಣ್ಯವಂತರು ಜನಿಸಿದ ಭೂಮಿ ಎಂದರು. ತುಲಾಭಾರ ಸೇವೆಯ ಬಳಿಕ ಗ್ರಾಮದ ಹಲವರು ಪಾದಪೂಜೆ ಮಾಡಿ, ಆರ್ಶಿವಾದ ಪಡೆದುಕೊಂಡರು. ಈ ಸಮಯದಲ್ಲಿ ಗದಗ ವಿರೇಶ್ವರ ಪುಣ್ಯಾಶ್ರಮದ ವಿಜಯ ಅಜ್ಜರ, ಶಿವಯ್ಯ ಅಜ್ಜರ, ಸರಿಗಮಪ ಖ್ಯಾತಿಯು ರೇವಣ್ಣಸಿದ್ದಯ್ಯ, ಬಸಯ್ಯ, ಮೆಳ್ಳಾಗಟ್ಟಿ ಗ್ರಾಮದ ಗಂಗಯ್ಯ, ಗ್ರಾಮದ ಹಿರಿಯರಾದ ಹನುಮಂತಪ್ಪ ದಾಟನಾಳ,ಹನುಮಂತಪ್ಪ ಬಸವನಾಯ್ಕರ,ಚನ್ನಬಸನಗೌಡ ಹೊಸಗೌಡ್ರ,ಗುರುನಗೌಡ ತಿರಕನಗೌಡ,ರಾಮಣ್ಣ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.