ಕಲ್ಲನಾಗರಕ್ಕೆ ಹಾಲು ಎರೆಯುವ ಬದಲು ಬಡವರಿಗೆ ನೀಡಿ

ಗಬ್ಬೂರು.ಆ.೦೨- ಕಲ್ಲನಾಗರಕ್ಕೆ ಪಂಚಮಿಯಂದು ಹಾಲನೆರೆಯುತ್ತಾರೆ.ಲಿಂಗಕ್ಕೆ ನಿತ್ಯ ನೀರೆರೆದು ಎಡೆಮಾಡುತ್ತಾರೆ.ದಿಟದ ನಾಗರ ಬಂದರೆ ಕೊಲ್ಲು ಎನ್ನುತ್ತಾರೆ. ಉಂಬ ಜಂಗಮ ಬಂದರೆ ನಡೆ ಎನ್ನುತ್ತಾರೆ. ತತ್ತಿಯಿಂದ ಜನ್ಮ ಪಡೆದ ಉರುಗ, ಕೀಟ, ಪಕ್ಷಿಗಳಿಗೆ ಅಂಡಜ ಎನ್ನುತ್ತಾರೆ.ಇವು ಹಾಲು ಕುಡಿಯುವುದಿಲ್ಲ.ಗರ್ಭದಿಂದ ಹೊರಬಂದ ಮನುಷ್ಯ ಇತರ ಪ್ರಾಣಿಗಳು ಮಾತ್ರ ಹಾಲು ಕುಡಿದು ಬದುಕುತ್ತವೆ.ಮನುಷ್ಯನಿಗೆ ಇದು ಗೊತ್ತಿದ್ದರೂ ಕಲ್ಲ ನಾಗರಕ್ಕೆ ಹಾಲು ಎರೆಯುತ್ತಾರೆ.ಇದು ಸಂಪ್ರದಾಯವಾಗಿದೆ ಏಕೆ ಎಂದು ಯಾರೂ ಕೇಳುವುದಿಲ್ಲ.
ತನ್ನನ್ನು ತಾ ಕೇಳಿಕೊಳ್ಳುತ್ತಿಲ್ಲ. ರಾಜ್ಯಾದ್ಯಂತ ನಾಗರಪಂಚಮಿ ಹಬ್ಬದಂದು ನಾಗರ ಹುತ್ತಕ್ಕೆ ಹಾಗೂ ನಾಗ ಪ್ರತಿಮೆಗಳಿಗೆ ಹಾಲು ಎರೆಯುವ ಮೌಢ್ಯಾಚರಣೆ ವಿರೋಧಿಸಿ, ಅದೇ ಹಾಲನ್ನು ಬಡ ಮಕ್ಕಳಿಗೆ ಮತ್ತು ಬಡ ರೋಗಿಗಳಿಗೆ ಹಾಲನ್ನು ಉಚಿತವಾಗಿ ನೀಡಿ.
ಕಾರ್ಯಕ್ರಮವನ್ನು ಹಬ್ಬದ ನೆಪದಲ್ಲಿ ಮತ್ತೆ ಹಾಲು ಎರೆಯುವುದು ಹಾವಿಗೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚೆಂದು ವೇದಿಕೆಯಿಂದ ವೈಜ್ಞಾನಿಕವಾಗಿ ಸಾಬೀತಾಗಿದೆ.ಈ ರೀತಿ ಅವೈಜ್ಞಾನಿಕವಾಗಿ ಪ್ರತಿವರ್ಷ ಆಚರಿಸುವ ಹಬ್ಬದ ಕಾರಣದಿಂದಾಗಿ ಕೋಟ್ಯಾಂತರ ರೂಪಾಯಿ ವೆಚ್ಚದ ಲೀಟರ್ ಹಾಲು ವ್ಯರ್ಥವಾಗುತ್ತೆ.ಅದೇ ಹೊತ್ತಿನಲ್ಲಿ ಕಾರ್ಯಕ್ರಮವಾಗಿ ರಾಜ್ಯದಲ್ಲಿ ಪ್ರತಿವರ್ಷ ೫೦ ಸಾವಿರಕ್ಕಿಂತ ಹೆಚ್ಚು ಮಕ್ಕಳು ಆಯೋಜಿಸುತ್ತಿದ್ದೆವು.
ಈ ಅಪೌಷ್ಟಿಕತೆಯಿಂದ ಮರಣ ಹೊಂದುತ್ತಿದ್ದಾರೆಂದು ನಾವು ಗಮನಿಸಬೇಕು.ನಾಡಿನ ಪ್ರಗತಿಪರ ಸ್ವಾಮೀಜಿಗಳು,ಹುತ್ತಗಳಿಗೆ ಹಾಲನ್ನು ಸುರಿಯುವ ಮೂಲಕ ಹಾವುಗಳ ವಿವಿಧ ಸಂಘಟನೆಗಳು,ಪ್ರಜ್ಞಾವಂತ ಪ್ರಾಣಕ್ಕೆ ಅಪಾಯ ತರುವ ಬದಲು ಅದೇ ಹಾಲನ್ನು ಜನರು ತಾವಿರುವ ಸ್ಥಳದಲ್ಲೇ ಬಡವರಿಗೆ, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅರಿವು ಮೂಡಿಸಬೇಕು.ಹಂಚುವ ಮೂಲಕ ಪೌಷ್ಟಿಕ ಆಹಾರ ಪೋಲಾಗುವುದನ್ನು ತಪ್ಪಿಸಬೇಕು.