ಕಲ್ಲಂಗಡಿ ವಿತರಣೆ

ಬೀದರ:ಮೇ.28: ತಥಾಗತ ಗೌತಮ ಬುಧ್ದರ 2565 ನೇ ಜಯಂತಿ ಪ್ರಯುಕ್ತ ಮಹಾತ್ಮ ಜೋತಿಬಾ ಫುಲೆ ಯುವಕ ಸಂಘದ ಅಧ್ಯಕ್ಷ ಪವನ ಮಿಠಾರೆ ನೇತೃತ್ವದಲ್ಲಿ ಕೋರೊನಾ ಸಂಧರ್ಭದಲ್ಲಿ ಕಲ್ಲಂಗಡಿ ಬೆಳೆದು ವ್ಯಾಪಾರ ಇಲ್ಲದೆ ಕಷ್ಟದಲ್ಲಿ ಇರುವ ರೈತರಿಂದ 3 ಟನ್ ಕಲ್ಲಂಗಡಿ ಖರಿದಿ ಮಾಡಿ ರೈತರಿಗೆ ಪೆÇ್ರೀತ್ಸಾಹ ನೀಡುವ ಮೂಲಕ ಮಾನವಿಯತೆ ಮೆರೆದರು.

ನಗರದಲ್ಲಿ ಕಾರ್ಮಿಕರಿಗೆ,ರೋಗಿಗಳಿಗೆ ಅಲೆಮಾರಿ ಸಮುದಾಯದ ಜನರಿಗೆ,ಹಾಗೂ ಪೆÇೀಲಿಸ್ ಸಿಬ್ಬಂದಿಯವರಿಗೆ ಕಲ್ಲಂಗಡಿ ಹಣ್ಣುಗಳನ್ನು ವಿತರಣೆ ಮಾಡಲಾಯಿತು

ನಗರ ಸಭೆ ಸದಸ್ಯ ದಿಗಂಬರ ಮಡಿವಾಳ ಚಾಲನೆ ನೀಡಿದರು, ಕಾಂಗ್ರೆಸ್ ಯುವ ಮುಖಂಡ ಜಾನ್ಸನ್ ಘೋಡೆ, ಬುಧ್ದ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್, ಮಹಿಳಾ ಹೋರಾಟಗಾರ್ತಿ ಲಕ್ಷ್ಮಿ ಬಾವುಗೆ, ಬಲ್ವಿರ್ ಸಿಂದ್ರೆ, ಸಚಿನ್ ಧಿಮಾಕೆ,ನವನಾಥ ಕಾಂಬಳೆ,ಸುನೀಲ್ ಶೇರಿಕರ್ ಇನ್ನಿತರರು ಉಪಸ್ಥಿತರಿದ್ದರು