ಕಲ್ಲಂಗಡಿ ಬೆಳೆಯ ಕ್ಷೇತ್ರೋತ್ಸವ

ಗುರುಮಠಕಲ್:ಮಾ.19: ಕಲಿಕೆಟಾಟ ಟಾಟಾ ಟ್ರಸ್ಟ್ ಹಾಗೂ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಗುರುಮಠಕಲ್ ತಾಲೂಕ ಕಂದಕೂರ ಗ್ರಾಮದಲ್ಲಿ ಶ್ರೀ ಯುತ ಲಕ್ಷ್ಮಣ ತಂದೆ ಹಣಮಂತ ಎಲೆಬೊಯಿನ್ ಸರ್ವೇ ನಂಬರ್ 157 ಇದ್ದು ಇವರ ಹೊಲದಲ್ಲಿ ಕಲ್ಲಂಗಡಿ ಬೆಳೆಯಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಗುರುಮಠಕಲ್ ಶ್ರೀಯುತ ಪವನ ಕುಮಾರ ಆಗಮಿಸಿ ಮಾತನಾಡಿದ ಅವರು ತಮ್ಮ ಇಲಾಖೆಯಲ್ಲಿ ರೈತರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾತನಾಡಿದರು. ನಂತರ ರೈತರಾದ ಶ್ರೀಯುತ ಲಕ್ಷ್ಮಣ ತಂದೆ ಹಣಮಂತ ಎಲೆಬೊಯಿನ್ ಅವರು ಮಾತನಾಡಿ ತಮ್ಮ ಕಲ್ಲಂಗಡಿಯ ಬೆಳವಣಿಗೆ ಕುರಿತು ಮತ್ತು ಬೆಳೆಯುವ ವಿಧಾನಗಳ ಬಗ್ಗೆ ಹಾಗೂ ತಾವು ತಮ್ಮ ನಿಜ ಜೀವನದಲ್ಲಿ ಪಟ್ಟಿರುವ ಶ್ರಮ. ಅನುಭವಗಳನ್ನು ಹಾಗೂ ಎಲ್ಲಾ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೆಲು ಅನ್ನುವ ಸೂಕ್ತಿಯಂತೆ ತಾನು ಕೃಷಿಯಲ್ಲಿ ಪಡೆದಿರುವ ತೃಪ್ತಿಯನ್ನು ರೈತರೊಂದಿಗೆ ಹಂಚಿಕೊಂಡರು. ಕಲಿಕೆ ಟಾಟಾ ಟ್ರಸ್ಟ್ ಜೀವನೋಪಾಯ ಕಾರ್ಯಕ್ರಮದ ಕೃಷಿ ಅಧಿಕಾರಿಗಳು ಯಾದಗಿರಿ ಶ್ರೀ ಯುತ ಅಶೋಕ ಬಿರಾದಾರ ಮಾತನಾಡಿ ಬೆಳೆಯ ಸಂಪೂರ್ಣ ಮಾಹಿತಿ ನೀಡುವದರ ಜೋತೆಗೆ ಸಂಸಾರ ನೋಡಿ ಸಂಸತ್ತು ಮಾಡಿದರೆ ಒಂದಕ್ಕೆ ಸಾವಿರ ಪಟ್ಟು ಹೊಲದಲ್ಲಿ ಬರುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಸ್ವಾಗತ ಕಲಿಕ ಟಾಟಾ ಟ್ರಸ್ಟ್ ನಾ ಸಂಯೋಜಕರು ಶ್ರೀಯುತ ಮಂಜುನಾಥ ನೆರವೇರಿಸಿದರು. ವಂದನಾರ್ಪಣೆ ಗ್ರಾಮ ಸಂಪನ್ಮೂಲ ವ್ಯಕ್ತಿ ಶ್ರೀಯುತ ಯಲ್ಲಪ್ಪ ಕಂದಕೂರ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಶ್ರೀಯುತ ಆನಂದ ವಿಶ್ವಕರ್ಮ ಕೊಂಕಲ್. ಮಹೇಶ್. ನಾಗಪ್ಪ. ಪ್ರಕಾಶ್. ಹಣಮಂತ್ರಯ. ಹಾಗೂ ಸುಮಾರು ನೂರಕ್ಕೂ ಹೆಚ್ಚು ರೈತರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು..