ಕಲ್ಯಾಣ ಶ್ರೀಗಳ ಧರ್ಮ ಜಾಗೃತಿ‌ ಕಾರ್ಯ ಮಹತ್ತರವಾದುದು: ನಾಗೇಂದ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.24: ಸಮಾಜದಲ್ಲಿ ಕಲ್ಯಾಣ ಶ್ರೀಗಳು ನಡೆಸಿರುವ ಧರ್ಮ ಜಾಗೃತಿ ಮೂಡಿಸುವ ಕಾರ್ಯ ಮಹತ್ತರವಾದುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ  ಸಚಿವ  ಬಿ.ನಾಗೇಂದ್ರ ಹೇಳಿದ್ದಾರೆ.
ಅವರು ನಿನ್ನೆ ಸಂಜೆ ನಗರದ ಕಲ್ಯಾಣ ಸ್ವಾಮಿ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀದೇವಿ ಪುರಾಣ ಪ್ರವಚನ ಹಾಗೂ ದಸರಾ ಉತ್ಸವದಲ್ಲಿ    ಭಾಗವಹಿಸಿ ಮಾತನಾಡುತ್ತಿದ್ದರು.  ಹಲವಾರು ಸಮುದಾಯ ವಾಸ ಮಾಡುವಂತ ಈ ಭಾಗದಲ್ಲಿ ಕಲ್ಯಾಣ ಶ್ರೀಗಳು ಮಠವನ್ನ ಕಟ್ಟಿ ಬೆಳಸುವಲ್ಲಿ ಬಹಳ ಶ್ರಮ ಪಟ್ಟಿದ್ದಾರೆ.  ನವರಾತ್ರಿ ಉತ್ಸವ ನಡೆಸುವ ಮೂಲಕ ಮಹಿಳೆಯರಲ್ಲಿ, ಮಕ್ಕಳಲ್ಲಿ  ಧರ್ಮ ಜಾಗೃತಿ ಮೂಡಿಸುವಂತ ಕಾರ್ಯಗಳನ್ನ ನಡೆಸಿಕೊಂಡು ಬಂದಿದ್ದಾರೆ. ಇದೇ ವೇಳೆ  ಕಲಾ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹವಾದುದು.ಈ  ಮಠಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ಕೊಡಿಸುವ ಕೆಲಸ ಮಾಡುವುದಲ್ಲದೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದರು.
ಕಲ್ಬುರ್ಗಿಯ  ಸಿದ್ದಲಿಂಗ ಜಗದ್ಗುರುಗಳು ಅಶೀರ್ವಚನ ನೀಡಿದರು.  ಮಠಾಧೀಶರ ಪರಿಷತ್ತಿನ ಅಧ್ಯಕ್ಷ ಕಲ್ಯಾಣ ಸ್ವಾಮಿಗಳ ನೇತೃತ್ವವಹಿಸಿದ್ದರು.
ವಿವಿಧ ಮಠಾಧೀಶರು, ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್, ಮುಲಕಂಡರಾದ ಬಿ.ವೆಂಕಟೇಶ್ ಪ್ರಸಾದ್, ಬಿ.ಆರ್.ಎಲ್.ಸೀನಾ ಮೊದಲಾದವರು ವೇದಿಕೆಯಲ್ಲಿದ್ದರು.