ಕಲ್ಯಾಣ ರಾಜ್ಯ ಪ್ರಗತಿ ಪರ ಪಕ್ಷದ
 ಯುವ ಸಂಕಲ್ಪ ಪಾದಯಾತ್ರೆ


(ಸಂಜೆವಾಣಿ ಪ್ರತಿನಿಧಿಯಿಂದ)
ಕಾರಟಗಿ ದಿ:25: ಕಲ್ಯಾಣ ರಾಜ್ಯ ಪ್ರಗತಿ ಪರ ಪಕ್ಷದ ವತಿಯಿಂದ ಜನರ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಹೆಜ್ಜೆ ಎಂಬ ವಾಕ್ಯಗೊಂದಿಗೆ ಯುವ ಸಂಕಲ್ಪ ಪಾದಯಾತ್ರೆಯನ್ನು ಹಮ್ಮಿಕೊಳ್ಳಗಿದೆ,
ಕಾರಟಗಿಯಿಂದ ಕನಕಗಿರಿ ವರೆಗೆ 54 ಕೆಎಂ ಪಾದಯಾತ್ರೆ ಇದಾಗಿದ್ದು,
ಇದೆ ದಿ 26 ರಂದು ಬೆಳಗ್ಗೆ ಕಾರಟಗಿಯಿಂದ ಶುರುವಾಗಿ , ಚಳ್ಳೂರು ಕ್ಯಾಂಪ್, ಚಳ್ಳೂರು ಹಗೇದಾಳ್ ಕ್ಯಾಂಪ್,
ತೊಂಡಿಹಾಳ್ ನಿಂದ 29 ನೇ ಕಾಲುವೆ ತಲುಪಿ, 12: 30 ಕ್ಕೆ ಸಭೆ ಮಾಡುವುದು, ನಂತರ ಮದ್ಯಾನ 29 ಕಾಲುವೆ ಇಂದ ಸಿಂಗನಾಳ್ ಅಲ್ಲಿಂದ ಹಿರೇ ಡಂಕಣಕಲ್ ವರೆಗೆ ಪಾದಯಾತ್ರೆ ಮತ್ತು ಪಕ್ಷದ ಸಭೆ ಮಾಡುವುದು,
ದಿ 27 ರಂದು ಬೆಳಗ್ಗೆ 7:30 ಕ್ಕೆ ಹಿರೇ ಡಂಕಣಕಲ್ ಗ್ರಾಮದಿಂದ ಪಾದಯಾತ್ರೆ ಶುರುವಾಗಿ ಚಿರ್ಚಿನಗುಡ್ಡ, ಬೈರಾಪುರು, ಅದಾಪೂರ ಗ್ರಾಮದಿಂದ ಮದ್ಯಾನ ನವಲಿ ಗ್ರಾಮ ತಲುಪಿ ಪಕ್ಷದ ಕಾರ್ಯಕರ್ತರ ಸಭೆ ಮಾಡುವುದು,  ನಂತರ ಸಂಜೆ ನವಲಿಯಿಂದ
ಕರಡೋಣ, ಕೆ. ಮಲ್ಲಾಪುರು, ಗುಡೂದೂರು ಗ್ರಾಮ ತಲುಪಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುವುದು,
ದಿ:28 ರಂದು ಗುಡುದುರು ಗ್ರಾಮದಿಂದ ಪಾದಯಾತ್ರೆ ಶುರುವಾಗಿ ಹಿರೇಖೆಡ, ನಿರೂಲೂಟಿ ಗ್ರಾಮದಿಂದ ಕನಕಗಿರಿ ತಲುಪಿ ಕಾರ್ಯಕರ್ತರನ್ನು ಉದ್ದೇಶೀಸಿ ಕನಕಗಿರಿ ಕ್ಷೇತ್ರದ ಕೆ ಆರ್ ಪಿ ಪಕ್ಷದ ಅಭ್ಯರ್ಥಿ ಡಾ ಚಾರಲ್ ವೆಂಕಟರಮಣ ದಾಸರಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ,