ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04:  ಕಳೆದ 22 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಅವಿರತ ಸೇವೆ ಸಲ್ಲಿಸಿ, ಪಕ್ಷದ ಸೇವಾದಳದ ಜಿಲ್ಲಾಧ್ಯಕ್ಷರಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ ವಿವಿಧ   ಜವಾಬ್ದಾರಿಗಳನ್ನು ನಿರ್ವಹಿಸಿ,   ನಿಷ್ಟೆಯಿಂದ ಕೆಲಸ ಮಾಡಿದ ಕೊಳಗಲ್ಲು  ಅಂಜಿನಿಯವರು  ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ  ಲಕ್ಷ್ಮಿಅರುಣರವರ ಸಮ್ಮುಖದಲ್ಲಿ
ಇಂದು ಕಲ್ಯಾಣ ರಾಜ್ಯ ಪ್ರಗ ತಿಪಕ್ಷ ಸೇರ್ಪಡೆಯಾದರು
ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗೋನಾಳ ರಾಜಶೇಖರ ಗೌಡ, ಮಹಿಳಾಶಕ್ತಿ ಘಟಕದ ಅಧ್ಯಕ್ಷ ಹಂಪಿರಮಣ ಸಾಮಾಜಿಕ ಜಾಲತಾಣ ಅಧ್ಯಕ್ಷ ಮಲ್ಲಿಕಾರ್ಜುನ ಆಚಾರ್,   ಕೋನಂಕಿ ತಿಲಕ್, ಶ್ಳ ದರೂರ್ ಶಾಂತನಗೌಡ,   ಜಾಶ್ವ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಹಾಜರಿದ್ದರು