ಕಲ್ಯಾಣ ಮಂಟಪ ಕಟ್ಟಡ ಭೂಮಿ ಪೂಜೆ

ಬಾದಾಮಿ, ಏ5: ತಾಲೂಕಾ ಜಂಗಮ ಸಮಾಜದ ವತಿಯಿಂದ ಆದಿಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತಿ ನಿಮಿತ್ತ ನಗರದ ಹೊರವಲಯದ ಬಾಗಲಕೋಟ ರಸ್ತೆಯ ಹೆರಿಟೇಜ ಹೊಟೆಲ್ ಎದುರಿಗೆ ತಾಲೂಕಾ ಜಂಗಮ ಸಮಾಜದ ವತಿಯಿಂದ ನೂತನ ಕಲ್ಯಾಣ ಮಂಟಪ ಕಟ್ಟಡದ ಭೂಮಿ ಪೂಜೆಯನ್ನು ಶ್ರೀ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಜಂಗಮ ಸಮಾಜದ ಹಿರಿಯರಾದ ಈಶ್ವರಯ್ಯಾ ಫಳಾರಿ, ಶಿವಯ್ಯ ಹಿರೇಮಠ, ಶಿವಕುಮಾರ ಹಿರೇಮಠ, ಚಂದ್ರಶೇಖರ ಹಿರೇಮಠ, ಶಂಕರಗೌಡ ಪಾಟೀಲ, ಶಿವಕುಮಾರ್ ಹಿರೇಮಠ, ಹೊನ್ನಯ್ಯ ಹಿರೇಮಠ, ಸುನಿಲ ಕಾರಡಗಿಮಠ, ಮಾಹಾಂತೇಶ ಚೌಕಿಮಠ, ಶರಣಗೌಡ ಪಾಟೀಲ, ಅಮರೇಶ ಯಮನೂರಮಠ, ಎಸ್.ಎಮ್.ಹಿರೇಮಠ, ಶೇಖಣ್ಣ ಹಂಗರಗಿ, ತೋಟಯ್ಯ ಹಿರೇಮಠ, ಮುದಕಯ್ಯ ಹಿರೇಮಠ, ಗುರುಸಿದ್ದಯ್ಯ ಹಿರೇಮಠ, ಗಂಗಾಧರ ಹಿರೇಮಠ, ಬಸಯ್ಯ ಹಿರೇಮಠ, ವಿಶ್ವನಾಥ ಪಾರ್ವತಿಮಠ,ಉಮೇಶ ಬಿಕ್ಷಾವತಿಮಠ, ಕಳಕನಗೌಡ ಪಾಟೀಲ, ಡಾ.ಆರ್.ಸಿ.ಬಂಡಾರಿ, ಬಸಯ್ಯ ಹಿರೇಮಠ, ದೊಡ್ಡಯ್ಯ ಭೂಸನೂರಮಠ, ಶಿವಮೂರ್ತಿ ಹಿರೇಮಠ, ಬಸಯ್ಯ ಕಲ್ಲಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.