ಕಲ್ಯಾಣ ಮಂಟಪದಲ್ಲಿ ಗಮನ ಸೆಳೆದ ಮತದಾನದ ಜಾಗೃತಿ

ವಿಜಯಪುರ:ಮೇ.4: ತಾಲೂಕಿನ ಹಲಗಣಿ ಗ್ರಾಮ ಪಂಚಾಯತ ಕಾರ್ಯಲಯ ಹಾಗೂ ತಾಲೂಕ ಸ್ವೀಪ್ ಸಮಿತಿ ಬಬಲೇಶ್ವರ ಮತದಾನದ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮತದಾನ ಪ್ರಮಾಣ ಹೆಚ್ಚಿಸಲು ವಿನೂತನ ರೀತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದು ಕಲ್ಯಾಣ ಮಂಟಪzಲ್ಲಿ ಜರುಗಿದ ಮದುವೆ ಸಮಾರಂಭದಲ್ಲಿ ನೂತನ ದಂಪತಿಗಳ ಸಮ್ಮುಖದಲ್ಲಿ ಶುಭಾಶಯ ಕೋರಲು ಆಗಮಿಸಿದ ಬಂಧುಗಳಿಗೆ ಕರ-ಪತ್ರ ನೀಡಿ ಕಡ್ಡಾಯವಾಗಿ ಚುನಾವಣೆಯ ದಿನದಂದು ತಾವು ಯಾವುದೇ ಆಶೆ ಆಮಿಷಕ್ಕೆ ಒತ್ತಡಗಳಿಗೆ ಒಳಗಾಗದೇ ನಿರ್ಬೀತರಾಗಿ ಮತದಾನ ಮಾಡಿ ಅಂತ ಕೋರಲಾಯಿತು.ಪಿಡಿಓ ಅಧಿಕಾರಿ ಮುಕ್ಕನ್ನ ನಾಯಕ ತಾಲೂಕ ಐಇಸಿ ಸಯೋಜಕ ಶಾಂತಪ್ಪ ಇಂಡಿ, ಕಾರ್ಯದರ್ಶಿ ಶಾಂತು ಸಾವಳಗಿ ನಾರಾಯಣ ಬಡಿಗೇರ ಯಲ್ಲಪ್ಪ ವಾಲೀಕಾರ ಶಾರದಾ ಬಡಿಗೇರ ಇತರರು ಹಾಜರಿದ್ದರು.