ಕಲ್ಯಾಣ ಮಂಟಪಗಳಲ್ಲಿ ಹೆಚ್ಚು ಜನ ಸೇರಿದರೆ ಕಟ್ಟುನಿಟ್ಟಿನ ಕ್ರಮ

ಹರಿಹರ.ಏ.29; ನಗರದ ವಿವಿಧ ಕಲ್ಯಾಣ ಮಂಟಪಗಳಿಗೆ ತಹಶೀಲ್ದಾರ್ ವೃತ್ತ ನಿರೀಕ್ಷಕರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು ಲಕ್ಷಿ ಮಾಲ್ ,ಸಿದ್ದೇಶ್ವರ ಪ್ಯಾಲೇಸ್, ಗ್ರಾಮ ದೇವತೆ  ತುಕಾಮಣೆ ಸಾ ಮತ್ತು ವಿವಿಧ ಕಲ್ಯಾಣ ಮಂಟಪಗಳಲ್ಲಿ ಮದುವೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ತೆರಳಿ ಕಲ್ಯಾಣ ಮಂಟಪಗಳಲ್ಲಿ ಭೇಟಿ ನೀಡಿ ಮದುವೆಗೆ ಸಂಬಂಧಿಸಿದಂತೆ ಪೋಷಕರು ಮತ್ತೆ ಕಲ್ಯಾಣ ಮಂಟಪದ ಮಾಲೀಕರೊಂದಿಗೆ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು, ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪ ಮಾತನಾಡಿ
ಕೋವಿಡ ಮಾರ್ಗ ಸೂಚಿಗಳ ಅನ್ವಯದಂತೆ   ಮದುಮಗ ಮತ್ತು ಮದುಮಗಳ ಕಡೆಯವರು ಐವತ್ತು ಜನರ ಮೇಲ್ಪಟ್ಟು ಇದ್ದರೆ ಮದುವೆಗೆ ಸಂಬಂಧಿಸಿದವರಮತ್ತು ಕಲ್ಯಾಣ ಮಂಟಪದ ಮಾಲೀಕರಿಗೆ ಸೇರಿ ಮುಲಾಜಿಲ್ಲದೆ ಕಾನೂನು ರಿತ್ತಿ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಿ  ಪ್ರಕರಣವನ್ನು ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಸಿದರು ಮತ್ತು ಮದುವೆ ಕಲ್ಯಾಣ ಮಂಟಪಗಳಲ್ಲಿ ಬರುವಂತವರಿಗೆ ಸ್ಯಾನಿಟೈಜರ್ ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಿಕೊಂಡು ಬರಬೇಕು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಉಪಹಾರ ತಯಾರು ಮಾಡುವವರು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ  ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಮಹಾಮಾರಿ ವೈರಸ್  ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಗತ್ತನ್ನೆ ಆವರಿಸಿಕೊಂಡಿರುವ ಡೆಡ್ಲಿ ವೈರಸ್ ಮುಕ್ತ ಮಾಡುವುದಕ್ಕೆ ಕಂದಾಯ ಪೋಲಿಸ್ ನಗರಸಭೆ ಆರೋಗ್ಯ ಇಲಾಖೆಗಳು ಸೇರಿದಂತೆ ವೈದ್ಯ ಸಿಬ್ಬಂದಿಗಳೊಂದಿಗೆ ಸಹಕರಿಸಿ ವೈರಸ್ಸನ್ನ ಮುಕ್ತ ಮಾಡುವುದಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ನಗರ ಗ್ರಾಮ ಲೆಕ್ಕಾಧಿಕಾರಿ ಎಚ್ ಜಿ ಹೇಮಂತ್ ಕುಮಾರ್ .ಕಂದಾಯ ಇಲಾಖೆಯ ಸಿಬ್ಬಂದಿ ಸಂತೋಷ್ ಗ್ರಾಮ ಸಹಾಯಕ ರಂಗನಾಥ್ .ಪೊಲೀಸ್ ಸಿಬ್ಬಂದಿಗಳಾದ  ಲಿಂಗರಾಜ್. ಕರಿಯಪ್ಪ ಮುರುಳೀಧರ್ ವಿವಿ .ಇತರರು ಇದ್ದರು