ಕಲ್ಯಾಣ ಬಾಗದಲ್ಲಿ ಕಲೆ ಸಾಂಸ್ಕøತಿಕ ಉಳಿಸುವುದು ನಮ್ಮ ಕರ್ತವ್ಯ :ವಿಶ್ವನಾಥರಡ್ಡಿ ದರ್ಶನಾಪೂರ

ಶಹಾಪೂರ: ಮಾ.9:ಶಹಾಪೂರ ಪಟ್ಟಣದ ಚಾಮುಂಡೇಶ್ವರಿ ನಗರದ ಮಾತೃಛಾಯ ಶಾಲೆಯ ಆವರಣದಲ್ಲಿ ಸ್ನೇಹ ಸಮ್ಮೇಳನ ಮತ್ತು ದೇಶಮಾನೋತ್ಸವ ಕಾರ್ಯಕ್ರಮವನ್ನು ಶಹಾಪೂರದ ಜಿಲ್ಲಾ ಸಹಕಾರ ಯುನಿಯಾನ್ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರಡ್ಡಿ ಎಸ್ ದರ್ಶನಾಪೂರ ಉದ್ಘಾಟನೆ ಮಾಡಿ ಮಾತಾನಾಡಿದ ಸಂದರ್ಭ ಕಲೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡುವುದರಿಂದ ಸಾಂಸ್ಕೃತಿಕ ಲೋಕ ಮತ್ತು ಮಕ್ಕಳ ಮೇಲೆ ಬೆಳವಣಿಗೆ ಆಗಲು ಸಾದ್ಯ ಮತ್ತು ಮಾತೃಛಾಯ ಶಿಕ್ಷಣ ಸಂಸ್ಥೆಯ ಇನ್ನೂ ಅನೇಕ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಕಾರ್ಯಗಳು ಮುಂದವರಲಿ ಎಂದು ಇದೆ ಸಂದರ್ಭದಲ್ಲಿ ಹಾರೈಸಿ ನುಡಿ ಮಾತುಗಳಾಡಿದರು
ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಡಾ ಶರಣು ಬಿ ಗದ್ದುಗೆ ಮಾತಾನಾಡಿದರು ಕನಕದಾಸ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯಲಿರುವ ಮಾತೃಛಾಯ ಶಾಲೆಯು ಇನ್ನೂ ಅನೇಕ ಗ್ರಾಮೀಣ ಪ್ರದೇಶದ ಮಕ್ಕಳು ಮುಂದಿನ ದಿನಗಳಲ್ಲಿ ಶಿಕ್ಷಣ ಪಡೆದು ಈ ಸಂಸ್ಥೆಯ ಕೀರ್ತಿ ತರಬೇಕು ಎಂದು ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಹೇಳಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೂರಯ್ಯಬೇಗಂ ಹಾದಿಮನಿ ಪ್ರಾಚಾರ್ಯರು ಕಿತ್ತೂರ ರಾಣೆ ಚನ್ನಮ್ಮ ವಸತಿ ಶಾಲೆ ಶಹಾಪೂರ ಇವರ ಮಾತಾಡಿ ಮಕ್ಕಳು ನಮ್ಮ ದೇಶದ ಎರಡು ಕಣ್ಣು ಇದ್ದಂತೆ ಮತ್ತು ಮುತ್ತುರತ್ನಗಳು ಇದ್ದಂತೆ ಮಕ್ಕಳಿಗೆ ಕಲಿಕೆಯ ಮುಖಾಂತರ ಮುಖ್ಯ ವಾಹಿನಿಗೆ ತರಲು ಈ ಶಿಕ್ಷಣ ಸಂಸ್ಥೆ ಮಾಡುತ್ತಿರುವುದರಿಂದ ಈ ಸಂಸ್ಥೆಗೆ ತುಂಬಾ ಶ್ಲಾಘನೀಯ ಎಂದು ಕಾರ್ಯಕ್ರಮದಲ್ಲಿ ಕಿವಿಮಾತು ಹೇಳಿದರು ಅದೇ ರೀತಿಯಾಗಿ ಮಲ್ಲಿಕಾರ್ಜುನ ಕಂದಕೂರು ಹಿಂದುಳಿದ ಘಟಕದ ಬಿಜೆಪಿ ಜಿಲ್ಲಾದ್ಯಕ್ಷರು ಮಾತಾನಾಡಿದ ಸಂದರ್ಭ ಸ್ನೇಹ ಮತ್ತು ಸಮ್ಮೇಳನ ಇವು ಎರಡು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಆದರಿಂದ ನಮ್ಮ ಮಕ್ಕಳಿಗೆ ಸ್ನೇಹ ಪ್ರೀತಿ ವಿಶ್ವಾಸ ಹಂತ ಹಂತವಾಗಿ ಗಳಿಸಲು ಸಾದ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಮುಂದೆಬರಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು ಈ ಕಾರ್ಯಕ್ರಮದಲ್ಲಿ ತಾಲೂಕು ಖಾಸಗಿ ಶಿಕ್ಷಣ ಸಂಘದ ಅಧ್ಯಕ್ಷರಾದ ಆರ್ ಚನ್ನಬಸು ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಯಾದ ರೇಣುಕಾ ಪಾಟೀಲ ಶರಣು ಎಸ್ ಕಾಡಂಗೇರಾ ಮಾಳಪ್ಪ ಪೂಜಾರಿ ಕನಕದಾಸ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಆರು ಜನರಿಗೆ ಕನಕದಾಸ ಸೇವಾ ಪ್ರಶಸ್ತಿಯನ್ನು ಪತ್ರಕರ್ತರಾದ ನಾರಾಯಣ ಆಚಾರ್ಯ ಸಗರ ಶಹಾಪೂರ ಜಿಲ್ಲಾ ಸಹಕಾರ ಯುನಿಯನ್ ಉಪಾಧ್ಯಕ್ಷ ಎಂ ನಾರಾಯಣ ಬುದ್ದಘೋಷ ದೇವಿಂದ್ರ ಹೇಗಡೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ವೆಂಕಟೇಶ ಬೋನೇರ್ ಶರಬಸವ ಸೈದಾಪೂರ ಬಸವರಾಜ ಕಲಾವಿದ ಕ್ಯಾತನಾಳ ಆರು ಜನರಿಗೆ ಸನ್ಮಾನ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಮತ್ತು ಮಾತೃಛಾಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ತಿಪ್ಪಣ್ಣ ಖ್ಯಾತನಾಳ ಈ ಕಾರ್ಯಕ್ರಮದ ಆಯೋಜನೆ ಮಾಡಿದರು ನ ಮಡಿವಾಳಪ್ಪ ಪಾಟೀಲ್ ಹೆಗ್ಗನದೊಡ್ಡಿ ಶಹಾಪೂರ ನಿರೂಪಣೆ ಮಾಡಿದರು
ಸ್ವಾಗತ ಶೋಭ ಕುಲ್ಕರ್ಣೆ ವಂದನಾಪರ್ಣೆ ಬಂಡೇಶ ಪಾಟೀಲ ಮಾತೃಛಾಯ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಮತ್ತು ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು