ಕಲ್ಯಾಣ ನಾಡಿನ ಮಹಿಮಾ ಪುರುಷರು ತೋಂಟದ ಸಿದ್ದೇಶ್ವರರು

ಕಲಬುರಗಿ,ಜು.4-ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಕ್ಷೇತ್ರ ಮಂಗಲಗಿ ಗ್ರಾಮದಲ್ಲಿ ತೋಂಟದ ಸಿದ್ದೇಶ್ವರ ತೊಟ್ಟಿಲ ಮಹೋತ್ಸವದ ಅಂಗವಾಗಿ ಸಿದ್ದೇಶ್ವರ ಮಠದಲ್ಲಿ ಪ್ರವಚನಕಾರಕ ಕಾರ್ಯಕ್ರಮ ಪ್ರಾರಂಭವಾಯಿತು.
ಕಾರ್ಯಕ್ರಮದ ಪಾವನ ಸಾನ್ನಿಧ್ಯವನ್ನು ವಹಿಸಿದ್ದ ರಾಯಕೋಡ ಕಟ್ಟಿಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು ಮತ್ತು ರಟಕಲ ಪೂಜ್ಯರು ಮಾತನಾಡಿ ತೋಂಟದ ಸಿದ್ದೇಶ್ವರರು ಕಲ್ಯಾಣ ನಾಡಿನ ಮಹಿಮಾ ಪುರುಷರು ಬೇಡಿದ ವರವನ್ನು ನೀಡಿದ ಕಲ್ಪವೃಕ್ಷ ಲೀಲಾ ಪುರುಷರು ಎಂದರು. ಪುರಾಣ ಪ್ರವಚನಕಾರರಾದ ಪ್ರವಚನ ರತ್ನ ಬಂಡಯ್ಯ ಶಾಸ್ತ್ರಿಗಳು ಸಂಸ್ಥಾನ ಹಿರೇಮಠ ಸುಂಟನೂರ ಅವರು ಮಾತನಾಡಿ, ಮನುಷ್ಯನ ಮನಸು ಹತೋಟಿಯಲ್ಲಿರಲು ಪ್ರವಚನವನ್ನು ಆಲಿಸಬೇಕು, ಶರಣರ ಸಂತರ ಸತ್ಪುರುಷರ ಜೀವನ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸವರಾಜ ಮಾಲಿ ಪಾಟೀಲ್ ಮಂಗಲಗಿ, ಬಸವರಾಜ್ ಪೆÇಲೀಸ್ ಪಾಟೀಲ್ ರಾಯಕೋಡ, ಸುಪುತ್ರಪ್ಪ ಸಾಹು ಕೊರ್ವಾರ, ತೋಟಪ್ಪ ರುದ್ನೂರ, ಮಠದ ಅಧ್ಯಕ್ಷರಾದ ಮೈನುದ್ದೀನ್ ನೀಲಂಗೆ ಸಂಗೀತ ಶಿಕ್ಷಕರು, ಗುಂಡಪ್ಪ ಭೂತಪುರ ಮಂಗಲಗಿ, ಮೋನಪ್ಪ ವಿಶ್ವಕರ್ಮ, ಯುವಕರಾದ ಅಂಬರೀಷ್ ಕೂರಿ, ಚಂದ್ರು ಕಲಶೆಟ್ಟಿ, ಶರಣಬಸಪ್ಪ ತಾಡ್ಪಳ್ಳಿ, ಸಿದ್ದಯ್ಯ ಟೆಕುರ್, ಶ್ರೀಮಂತ ಧೂಳುಗುಂಡಿ, ರಮೇಶ್ ಜಟ್ಟೂರು, ರಾಘವೇಂದ್ರ ಬಡಿಗೇರ ಉಪಸ್ಥಿತರಿದ್ದರು
ಕಲಾವಿದರ ಶಿವಾನಂದ ಮಂದೇವಾಲ ಸಂಗೀತ ನೀಡಿದರು ಮಡಿವಾಳಪ್ಪ ಚಿಂಚೋಳಿ ತಬಾಲ ಸೇವೆ ಸಲ್ಲಿಸಿದರು. ಮಲ್ಲಿನಾಥ ಕಲಶೆಟ್ಟಿ ನಿರೂಪಿಸಿದರು.