ಕಲ್ಯಾಣ ನಡೆಗೆ ತಾತ್ಕಾಲಿಕ ಬ್ರೆಕ್, ಕೊರೊನಾ ವಿರುದ್ಧ ಅಭಿಯಾನ ಶುರು

ಕಲಬುರಗಿ :ಎ.20: ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಸಂಬಂಧಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ, ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನ ಹಮ್ಮಿಕ್ಕೊಂಡು ಬಹಳಷ್ಟು ಜನ ಜನಪ್ರತಿನಿಧಿಗಳ ನಿವಾಸಕ್ಕೆ ಭೇಟಿ ನೀಡಿ ಅಭಿಯಾನ ನಡೆಸಿತ್ತು. ಈ ಮಧ್ಯೆ ಕೊರೊನಾ ಮಹಾಮಾರಿ ವ್ಯಾಪಕ ಸ್ವರೂಪದಿಂದ ಹಬ್ಬುತ್ತಿರುವ ಹಿನ್ನಲೆಯಲ್ಲಿ ಅಭಿಯಾನದಲ್ಲಿ ತೊಡಗಿಸಿಕೊಂಡ ಕೆಲವಷ್ಟು ಜನರಿಗೆ ಕೊರೊನಾ ಮಹಾಮಾರಿ ಸೊಂಕು ಬಂದಿರುವುದರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತ ಘಟನೆಗಳನ್ನು ಗಮನದಲ್ಲಿಟ್ಟು ಕೊಂಡು ಸಾಮಾಜಿಕ ಅಂತರ ಕಾಪಾಡುವುದರ ದೃಷ್ಟಿಯಿಂದ ಮತ್ತು ಕೊರೊನಾದಿಂದ ಬದುಕುವುದರ ಜೊತೆಗೆ ಹೋರಾಟ ಮುಂದುವರಿಸುವುದು ಅನಿವಾರ್ಯವಾಗಿದೆ. ಪ್ರಯುಕ್ತ ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಈಗ ಕೊರೊನಾ ಮಹಾಮಾರಿ ವಿರುದ್ಧ ವ್ಯಾಪಕ ಸ್ವರೂಪದ ವಿವಿಧ ವಿನೂತನ ಮಾದರಿಯಲ್ಲಿ ಇದರ ವಿರುದ್ಧ ಅಭಿಯಾನ ನಡೆಸಲು ಸಮಿತಿ ನಿರ್ಧರಿಸಿದೆಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ಸಮಿತಿಯ ಈ ನಿರ್ಧಾರಕ್ಕೆ ಅಭಿಯಾನದಲ್ಲಿ ತೊಡಗಿಸಿಕೊಂಡ ಆಯಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಪರಿಣಿತರು, ಸಮಿತಿಯ ಕ್ರಿಯಾಶೀಲ ಸದಸ್ಯರು, ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಲು ಕೋರುತ್ತದೆ. ಕೊರೊನಾ ಮಹಾಮಾರಿಯ ಸ್ಥಿತಿಗತಿಯನ್ನು ನೋಡಿಕೊಂಡು ಕಲ್ಯಾಣ ಅಭಿಯಾನ ಯಥಾ ಪ್ರಕಾರ ಮುಂದುವರಿಸಲು ನಿರ್ಧರಿಸಲಾಗುವುದು. ಪ್ರಸ್ತುತ ದಿನಗಳಲ್ಲಿ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುವುದು ಅತೀ ಅವಶ್ಯವಾಗಿರುವುದರಿಂದ ಇದಕ್ಕೆ ಎಲ್ಲರೂ ಸಹಕರಿಸಿ ಬೆಂಬಲಿಸಬೇಕೆಂದು ಸಮಿತಿ ಕೋರಿದೆ. ಅಷ್ಟೇ ಅಲ್ಲದೇ ಕೊರೊನಾ ತಡೆಗಟ್ಟಲು ಸಮಿತಿ ಕಲ್ಯಾಣ ಕರ್ನಾಟಕದ ಎಲ್ಲಾ ಕ್ಷೇತ್ರದ ಪರಿಣಿತ ಮುಖಂಡರೊಂದಿಗೆ ಚರ್ಚಿಸಿ ಸರಕಾರಕ್ಕೆ ತನ್ನದೇ ಆದ ಮಾನದಂಡದಂತೆ ಸಲಹೆ ಸೂಚನೆಗಳನ್ನು ಸಲ್ಲಿಸುವುದು. ಸರಕಾರ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ವಿನಾಕಾರಣ ಮೀನಾಮೇಷ ಎನಿಸುತ್ತ ನಾಟಕವಾಡುವ ಡೊಂಗಿತನ ಬಿಟ್ಟು ಜನರ ಜೀವ ರಕ್ಷಣೆಗೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಸಮಿತಿ ಒತ್ತಾಯಿಸುತ್ತದೆ. ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಕೈಗೊಳ್ಳುತ್ತಿಲ್ಲ. ಇದು ಆಯಾ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಪ್ರಯುಕ್ತ ಇನ್ನುಮುಂದಾದರೂ ಎಚ್ಚೆತ್ತು ಕೊಳ್ಳಲು ಜಿಲ್ಲಾಡಳಿತಗಳಿಗೆ ಒತ್ತಾಯಿಸುತ್ತದೆ ಎಂದಿದ್ದಾರೆ.