ಕಲ್ಯಾಣ ಕಾಮಗಾರಿಗೆ ಭೈರತಿ ಶಂಕುಸ್ಥಾಪನೆ

ಕೆ.ಆರ್.ಪುರ,ನ.೫- ನಗರದ ಕೃಷ್ಣರಾಜಪುರಂನಲ್ಲಿರುವ ಮಹಾಬಲೇಶ್ವರ ಸ್ವಾಮಿ ಹಾಗೂ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲದ ಬಳಿ ಕಲ್ಯಾಣಿ ನಿರ್ಮಾಣ ಕಾಮಗಾರಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೈರತಿ ಬಸವರಾಜ್ ಅವರು ದೇವಲಯದ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಿದರು.
ದೇವಾಲಯದ ನಿರ್ಮಾಣಕ್ಕೆ ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು, ಹಂತಹಂತವಾಗಿ ದೇವಾಲಯ ನಿರ್ಮಾಣವಾಗಲಿದೆ ಎಂದು ನುಡಿದರು.
ದೇವಾಲಯದ ಸಮಗ್ರ ಅಭಿವೃದ್ಧಿಗೆ ನಾನು ಬದ್ದನಾಗಿದ್ದು, ಸಮಿತಿ ಸದಸ್ಯರ ಜೋತೆ ಚರ್ಚಿಸಿ ಅಗತ್ಯಗಳನ್ನು ಪೂರೈಸುವ ಕಾರ್ಯಮಾಡಲಾಗುವುದೆಂದು ಭರವಸೆ ನೀಡಿದರು.
ಕ್ಷೇತ್ರದ ವಿವಿಧೆಡೆ ಹಲವು ದೇವಾಲಯಗಳ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿದ್ದು, ಕ್ಷೇತ್ರದ ಜನತೆಯ ಸಲಹೆ ಹಾಗೂ ಮಾರ್ಗದರ್ಶನದಂತೆ ಕಾರ್ಯ ಮಾಡುವುದಾಗಿ ನುಡಿದರು.
ಕಾರ್ಯಕ್ರಮದಲ್ಲಿ ಮಹಾಬಲೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಅಮರಜ್ಯೋತಿ ರಾಜು, ಮಾಜಿ ಪಾಲಿಕೆ ಸದಸ್ಯ ಅಂತೋಣಿಸ್ವಾಮಿ, ಅಮರನಾಥ್,ಬಿಟಿಎಸ್ ಪ್ರಕಾಶ್, ಶಿವಪ್ಪ, ರವಿಕುಮಾರ್, ಡಿಸೇಲ್ ಮಂಜುನಾಥ್, ಶಮಂತ್,ಮೇಡಹಳ್ಳಿ ಜಗದೀಶ್, ಭಟ್ಟರಹಳ್ಳಿ ಮಂಜುನಾಥ್,ಕೆ.ಪಿ. ಕೃಷ್ಣ ಮತ್ತಿತರರು ಇದ್ದರು.
ಮಹಾಬಲೇಶ್ವರ ಸ್ವಾಮಿ ಹಾಗೂ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲದ ಬಳಿ ಕಲ್ಯಾಣಿ ನಿರ್ಮಾಣ ಕಾಮಗಾರಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅಧ್ಯಕ್ಷ ಶ್ರೀನಿವಾಸ್ (ರಾಜು) ಮತ್ತಿತರರು ಇದ್ದಾರೆ.