
ಕಲಬುರಗಿ :ಮಾ.03: ಕಲ್ಯಾಣ ಕಹಳೆ ಮಾಸಪತ್ರಿಕೆ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತವಾಗಿ ನೀಡಲ್ಪಡುವ “ಕಲ್ಯಾಣ ಕಹಳೆ” ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪ ಸಂಪಾದಕರಾದ ಶ್ರೀ ಪ್ರಭುಲಿಂಗ.ಜಿ ನಿಲೂರೆ,ಜೇವರ್ಗಿಯ ಉದಯವಾಣಿ ಪತ್ರಿಕೆಯ ವರದಿಗಾರರಾದ ಶ್ರೀ ವಿಜಯಕುಮಾರ ಕಲ್ಲಾ,ಚಿಂಚೋಳಿಯ ಪ್ರಜಾವಾಣಿ ಪತ್ರಿಕೆ ವರದಿಗಾರರಾದ ಶ್ರೀ ಜಗನ್ನಾಥ ಶೇರಿಕಾರ, ಟಿವಿ5 ನ ವರದಿಗಾರರಾದ ಶ್ರೀ ಅರುಣ ಕುಮಾರ ಕದಂ, 93.5 ರೆಡ್.ಎಫ್ ಎಂ.ನ ಶ್ರೀಮತಿ ವಾಣಿಶ್ರೀ ಮಾಳಗೆ ಅವರನ್ನು ಆಯ್ಕೆ ಮಾಡಲಾಗಿದೆ. ಎಂದು ಕಲ್ಯಾಣ ಕಹಳೆ ಮಾಸಪತ್ರಿಕೆ ಸಂಪಾದಕರಾದ ಶ್ರೀ ಶರಣಗೌಡ ಪಾಟೀಲ್ ಪಾಳಾ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾರ್ಚ್ 2 ನೇ ವಾರದಲ್ಲಿ ನಡೆಯುವ ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.