ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧ: ಅಂಬಾರಾಯ ಅಷ್ಟಗಿ

ಕಲಬುರಗಿ,ಸೆ.13: ನಗರದ ರೇಷ್ಮೆ ಶಿಕ್ಷಣ ಸಂಸ್ಥೆಯಲ್ಲಿ ಇಂದು ನಡೆದ ವಿಮೋಚನಾ ಸಪ್ತಾಹ ಪ್ರಯುಕ್ತ ಚಿಂತನಾ- ಮಂಥನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅಂಬಾರಾಯ ಅಷ್ಟಗಿ ರವರು ಹೈದ್ರಾಬಾದ್ ಕರ್ನಾಟಕ ಹೆಸರು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ,ಕರ್ನಾಟಕ ಅಭಿವೃದ್ಧಿ ಹರಿಕಾರ ಮಾಜಿ ಮುಖ್ಯಮಂತ್ರಿ ಬಿ,ಎಸ್,ವೈ ರವರು ಈ ಭಾಗದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು,

   ಈ ಭಾಗದ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ ಅಲ್ಲದೇ ಕೆ,ಕೆ,ಆರ್,ಡಿ ಮಂಡಳಿಯ ಮೂಲಕ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಗಾಗಿ ಪತ್ರಿ ವರ್ಷ ಸಾವಿರಾರು ಕೋಟಿ ಅನುದಾನ ನೀಡುತ್ತಿವೆ ಎಂದು ಹೇಳಿದರು,

ಈ ಕಾರ್ಯಕ್ರಮದ ಉಪನ್ಯಾಸ ನೀಡಿ ಮತನಾಡಿ ಡಾ,ಸುಭಾಷಚಂದ್ರ ದೊಡ್ಡಮನಿ ರವರು ವಿಮೋಚನಾಗಾಗಿ ಈ ಭಾಗದ ಅನೇಕ ಹೋರಾಟಗಾರ ಬಲಿದಾನ ಮೂಲಕ ಸರ್ದಾರ ಪಟೇಲ್ ರವರ ನೇತೃತ್ವದಲ್ಲಿ ನಿಜಾಮರು ಅಖಂಡ ಭಾರತದಲ್ಲಿ ವಿಲೀನ ಗೊಳಿಸಲಾಯಿತು, ಅಲ್ಲದೇ ಈ ಭಾಗದ ಇತಿಹಾಸವನ್ನು ಮತ್ತು ವಿಮೋಚನಾ ಹೋರಾಟಗಾರ ಚಳವಳಿ ನಾಯಕರ ಮಾಹಿತಿ ಪಠ್ಯಪುಸ್ತಕಗಳಲ್ಲಿ ಮುದ್ರಣವಾಗಬೇಕು ಎಂದು ಹೇಳಿದರು,

ಈ ಕಾರ್ಯಕ್ರಮದ ಅಧ್ಯಕ್ಷತೆ ರೇಷ್ಮೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶರದ ರೇಷ್ಮೆ ವಹಿಸಿದರು, ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ಶ,ನಾಲವಾರಕರ್ ವಿಮೋಚನಾ ಚಿಂತನಾ- ಮಂಥನಾ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡಲು ಸಹಕಾರ ನೀಡಿ ಜಿಲ್ಲಾಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ,ಉಪನ್ಯಾಸಕರ ಸಹಕಾರಕ್ಕೆ ಅಭಿನಂದನೆಗಳು ಸಲ್ಲಿಸಿದರು,
ಒಕ್ಕೂಟ ಗೌರವಧ್ಯಕ್ಷರಾದ ಜಗನಾಥ ಸೂರ್ಯವಂಶಿ, ಒಕ್ಕೂಟದ ಕಾರ್ಯಾಧ್ಯಕ್ಷರಾದ ಸಚೀನ ಫರಹತಾಬಾದ, ಜಗನಾಥ ಪಟ್ಟಣಶೆಟ್ಟಿ, ಡಾ,ವೇದಮೂರ್ತಿ,ಮಲ್ಲಿಕಾರ್ಜುನ ಕಿಳ್ಳಿ,ಗೋಪಾಲ ನಾಟೀಕಾರ,ಆನಂದ ಕಪನೂರು,ಸಂತೋಷ ಚೌಧಿರಿ ಸೇರಿದಂತೆ ಅನೇಕ ಯುವಕರ ಭಾಗವಹಿಸಿದರು,