ಕಲ್ಯಾಣ ಕರ್ನಾಟಕ ಸಂಗೀತ ಕಲಾವಿದರಿಗೆ ಅವಕಾಶ ಕೊಡಿ: ವಡಗಾಂವ

ಆಳಂದ:ನ.12: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಸಂಗೀತ ಕಲಾವಿದರಿಗೆ ಸಂಗೀತ ಸಾರಸತ್ವ ಲೋಕದ ದಿಗ್ಗಜರಾಗಿ ಹೊರಹೊಮ್ಮಲು ರಾಜ್ಯ ಮಟ್ಟದ ಸಭೆ, ಸಮಾರಂಭಗಳಲ್ಲಿ ಮುಕ್ತವಾಗಿ ಅವಕಾಶ ಕಲ್ಪಿಸಿಕೊಡಬೇಕು ಎಂದು ಪತ್ರಕರ್ತ ಮಹಾದೇವ ವಡಗಾಂವ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಪಟ್ಟಣದ ಭಕ್ತಮಾರ್ಕಂಡೇಶ್ವರ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಕಲಬುರಗಿ ಹಾಗೂ ಆಳಂದದ ಗಾನಯೋಗಿ ಸಾಂಸ್ಕøತಿಕ ಕಲಾವಿದರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿವರ್ಷ ಮೈಸೂರಿನಲ್ಲಿ ನಡೆಯುವ ವಿಶ್ವ ವಿಖ್ಯಾತಿ ದಸರಾ ಉತ್ಸವದಲ್ಲಿ ಈ ಭಾಗದ ಕಲಾವಿದರು ಪಾಲ್ಗೊಳ್ಳಲು ಪರದಾಡುತ್ತಿದ್ದಾರೆ. ಕಲೆ ಪ್ರದೇಶನಕ್ಕೆ ಅವಕಾಶ ದೊರೆಯುತ್ತಿಲ್ಲ. ಎಲೆ ಮರೆಯ ಕಾಯಿಯಂತ್ತಿರುವ ಹೊಸ ಕಲಾವಿದರನ್ನು ಅವಕಾಶ ಕೊಡಬೇಕು ಎಂದರು.

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಂಗೀತದ ಬಹುಮುಖ್ಯಪಾತ್ರ ಅಡಗಿದೆ. ಸಂಗೀತ ಕಲಾವಿದರ ಸಂಖ್ಯೆ ಇಂದು ಹೆಚ್ಚಾದಂತೆ, ಕೇಳುಗರ ಸಂಖ್ಯೆಯೂ ಹೆಚ್ಚಾಗಬೇಕು. ಆಗ ಮಾತ್ರ ಸಂಗೀತ ಉಳಿಸಿ ಬೆಳೆಲು ಸಾಧ್ಯವಿದೆ. ಮೊದಲು ಈ ಭಾಗದ ಪ್ರತಿಭೆಗಳನ್ನು ಹೊರತರುವ ಮೂಲಕ ಅವರ ಸೇವೆಯನ್ನು ಸದ್ಭಳಕೆ ಆಗಬೇಕು. ಹಿಂದೆ ಸಂಗೀತವು ಕೇವಲ ರಾಜ ಮಹಾರಾಜರ ಸಂಸ್ಥಾನಿಕರ, ಶ್ರೀಮಂತ ಮತ್ತು ಮೇಲ್ವರ್ಗದ ಸ್ವತ್ತಾಗಿತ್ತು. ಆದರೆ ಇಂದು ಇದೆಲ್ಲದರ ಗಡಿದಾಟಿ ಬೆಳೆಯುತ್ತಿರುವುದು ಕಲೆ ಯಾರ ಸ್ವತ್ತಲ್ಲ ಎನ್ನುವುದಕ್ಕೆ ಜೀವಂತ ನಿದರ್ಶನವಾಗಿದೆ. ಜನರು ಸಹ ಒತ್ತಡದ ಬದುಕು ನಿವಾರಣೆಗೆ ಸಂಗೀತ ಕರಗತ ಮಾಡಿಕೊಳ್ಳಿ ಇಲ್ಲ ಆಲಿಸುವುದನ್ನಾದರು ರೂಢಿಸಿಕೊಳ್ಳುವುದು ಒಳಿತಾಗಿದೆ ಎಂದರು.

ಆರ್.ಬಿ.ಎಸ್.ಕೆ ವೈದ್ಯ ಡಾ. ವಿನಾಯಕ ತಾಟಿ ಮಾತನಾಡಿ, ಸಂಗೀತವು ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ ಎಂದರು.

ಭಕ್ತ ಮಾರ್ಕಂಡೇಶ್ವರ ಮಂದಿರದ ಕಮಿಟಿ ಅಧ್ಯಕ್ಷ ಅರವಿಂದ ಆರ್. ಶಹಾಪೂರ ಕಾರ್ಯಕ್ರಮ ಉದ್ಘಾಟಿಸಿದರು. ರಮೇಶ ಆರ್. ಸಂಗಾ ಅಧ್ಯಕ್ಷತೆ ವಹಿಸಿದ್ದರು. ರಾಜೇಶ ಆರ್. ಕಡಪಾ ಜ್ಯೋತಿ ಬೆಳಗಿಸಿದರು. ದಿಲೀಪ ಕಡಪಾ, ಶಶಿ ಕಡಪಾ, ಸೀತರಾಮ ಯಂಗಲ ಇನ್ನಿತರು ಇದ್ದರು.

ವೇದಿಕೆಯಲ್ಲಿ ಕಾಶಿನಥ ಬಿರಾದಾರ, ವಿಜಯಕುಮಾರ ಸುಗಮ ಸಂಗೀತ, ಸುಭಾಷ ಎನ್. ಮೋಘಾ, ಬಸವರಾಜ ಕಟ್ಟಿಮನಿ, ಹುಸೇನಕುಮಾರ ಜಾನಪದ ಗೀತೆ, ನಾಗೇಶ ಬಿ. ತೇಲಿ, ಹಾರ್ಮೋನಿಯಂ ಸಾಥ, ಬಸವರಾಜ ಮತ್ತು ಸುರೇಶ ಆಳಂದ ತಬಲ ಸಾಥದಿಂದ ಕೂಡಿದ ರಸಬರೀತ ಸಂಗೀತವು ಕಲಾರಸಿಕರ ಮನತಣಿಸಿತು. ಸೂರಜ್ ಪತಂಗೆ ನಿರೂಪಿಸಿದುರ. ಅಶೋಕ ಬಿ. ಆಳಂದ ಸ್ವಾಗತಿಸಿದರು. ಕಾಶಿನಾಥ ಬಿರಾದಾರ ವಂದಿಸಿದರು.