ಕಲ್ಯಾಣ ಕರ್ನಾಟಕ ವೇದಿಕೆಯು ನಾಡು, ನೆಲ, ಜಲ, ಸಾರ್ವಜನಿಕರ ಅಭಿವೃದ್ದಿಗಾಗಿ ಶ್ರಮಿಸುತ್ತಿರುವದು ಶ್ಲಾಘಿಸಿದ ಪಿಡಿಓ ಸುರೇಶ ಕಳ್ಳಿಮನಿ

ವಿಜಯಪುರ, ಮಾ.20-ಕಲ್ಯಾಣ ಕರ್ನಾಟಕ ವೇದಿಕೆ ವಿಜಯಪುರ ಜಿಲ್ಲಾ ಸಮಿತಿ ಆಫೀಸ್ ಉದ್ಘಾಟನಾ ಸಮಾರಂಭ ವಿಜಯಪುರ ನಗರದದಲ್ಲಿ ನೆರವೇರಿತು.
ಕಚೇರಿಯ ಉದ್ಘಾಟನೆಯನ್ನು ತೊರವಿ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ಸುರೇಶ ಕಳ್ಳಿಮನಿ ಉದ್ಘಾಟಿಸಿ ಮಾತನಾಡುತ್ತ, ಕಲ್ಯಾಣ ಕರ್ನಾಟಕ ವೇದಿಕೆಯು ನಾಡು, ನೆಲ, ಜಲ, ಸಾರ್ವಜನಿಕರ ಅಭಿವೃದ್ದಿಗಾಗಿ ಶ್ರಮಿಸುತ್ತಿರುವದು ಶ್ಲಾಘನೀಯ ಹಾಗೂ ಸಂಘಟನೆಯನ್ನು ಸಮಾಜದ ಕಡುಬಡವರ, ದೀನದಲಿತರ, ಮಹಿಳೆಯರ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲಸಗಳನ್ನು ಮಾಡುತ್ತಾ, ಸಂಘಟನೆಯನ್ನು ನೀವೆಲ್ಲರೂ ಒಳ್ಳೆಯ ರೀತಿಯಿಂದ ಮುನ್ನಡೆಸಿಕೊಂಡು ಸಮಾಜದ ಎಲ್ಲ ವರ್ಗದವರ ಹಿತಕ್ಕಾಗಿ ದುಡಿಯುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಅದೇ ರೀತಿ ಯಾವುದೇ ತರಹದ ದೌರ್ಜನ್ಯಗಳು ನಡೆದಲ್ಲಿ ಸಂಘಟನೆಯು ಒಂದು ಹೆಜ್ಜೆ ಮುಂದೆ ಇದ್ದು ಅನ್ಯಾಯಕ್ಕೊಳಗಾಗಿ ಜನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವೇದಿಕೆಯ ಅಧ್ಯಕ್ಷರಾದ ರಾಘವೇಂದ್ರ ದೊಡಮನಿ, ಉಪಾಧ್ಯಕ್ಷ ಅಶೋಕ ಗಚ್ಚಿನಮನಿ, ಪ್ರಧಾನ ಕಾರ್ಯದರ್ಶಿ ಅಮೋಘಸಿದ್ದ ಕಾಂಬಳೆ, ನಗರ ಘಟಕ ಅಧ್ಯಕ್ಷರಾದ ಪ್ರಶಾಂತ ಬಬಲೇಶ್ವರ, ವಿಜಯ ಕುಮಾರ್ ಪಡಗಾನೂರ, ಗಂಗಾಧರ ಹಾದಿಮನಿ, ರವಿ ಗರಸಂಗಿ, ದಾದಾಪೀರ್ ಫಡಕಲ, ವಿನಾಯಕ್ ಸರಸಂಗಿ, ಗಿರಿ ಕಳಕಿ, ಸುಭಾಸ ತಿಕೋಟಾ, ಇನ್ನಿತರರು ಉಪಸ್ಥಿತರಿದ್ದರು.