ಕಲ್ಯಾಣ ಕರ್ನಾಟಕ ವಿಮೋಚನಾ ದಿನ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ 18: ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕು ಎಂಬ ಆಸೆಯದಿಂದ ಆರಂಭವಾದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಇಂದು ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ ಎಂದು ಸಂಘದ ನಿರ್ದೇಶಕ ಬಾಬುಲಾಲ್ ಜೈನ್ ಹೇಳಿದರು.
ಹೊಸಪೇಟೆಯಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ಸರ್ಕಾರವೇ ಮಾಡಬೇಕು ಎಂದರೆ ಆಗದು ಸಂಘ ಸಂಸ್ಥೆಗಳು ಸಹ ತಮ್ಮ ಸಹಕಾಯ ನೀಡಬೇಕು ಈ ಹಿನ್ನೆಲೆಯಲ್ಲಿಯೇ ನಮ್ಮ ಸಂಘ ಅನೇಕ ಮಾನವಸಂಪನ್ಮೂಲ ಅಭಿವೃದ್ಧಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು ಅವುಗಳ ಪ್ರಯೋಜವನ್ನು ನಾಗರಿಕರು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಶೇಖರಜಿ, ಅನಿಲ್ ಜೋಶಿ, ಪ್ರಾಂತ ಗ್ರಾಮವಿಕಾಸ ಸಂಯೋಜನೆಯ ಶಿವಕುಮಾರ, ನಾಗರಾಜ್ ಮಠಪತಿ, ಯಲ್ಲಪ್ಪ ತಿಮ್ಮರಾಜ್, ಚೆನ್ನಕೇಶವ, ವಿಜಯಕುಮಾರ ದೇಶಾಯಿ, ಪ್ರಶಾಂತ, ಅಕ್ಷತಾ ಉಪಸ್ಥಿತರಿದ್ದರು.