ಬೀದರ,ಮೇ 28:ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಕಲ್ಯಾಣ ಕರ್ನಾಟಕದ ವೃತ್ತಿಪರ ವಕೀಲರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಲು 371(ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಅಶೋಕ ಮಾನೂರೆ ಅವರು ಮನವಿ ಮಾಡಿದ್ದಾರೆ.
ಕಲಂ 371(ಜೆ) ತಿದ್ದುಪಡಿಯಾಗಿ ಸುಮಾರು 10 ವರ್ಷಗಳು ಗತಿಸಿವೆ. ಅದರ ಸಮಗ್ರ ಅನುಷ್ಠಾನ ಆಗಿಲ್ಲ. ಈ ನಿಟ್ಟಿನಲ್ಲಿ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಮೊಟ್ಟ ಮೊದಲು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನಾಡ ಗೌಡ ವಕೀಲರನ್ನು ನೇಮಕ ಆಗಿದ್ದು, ಅವರ ಅವಧಿ ಮುಗಿದ ನಂತರ ಕಲ್ಯಾಣ ಕರ್ನಾಟಕ ಹೊರತುಪಡಿಸಿ ಹಾಗೂ ಕಲಬುರಗಿ ಪೀಠದಲ್ಲಿ ವಕೀಲ ವೃತ್ತಿ, ವೃತ್ತಿಪರ ವಕೀಲರನ್ನು ಕಡೆಗಣಿಸಿ, ರಾಜ್ಯದ ಬೇರೆ ಭಾಗದ ವಕೀಲರನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಿರುವುದು ಕಲ್ಯಾಣ ಕರ್ನಾಟಕ ಭಾಗದ ವಕೀಲರನ್ನು ಕಡೆಗಣಿಸಲಾಗಿದೆ ಹಾಗೂ ಕಲಂ 371 (ಜೆ)ದ ವಿಶೇಷ ಸ್ಥಾನಮಾನವನ್ನು ಸಂವಿಧಾನದಲ್ಲಿ ತಿದ್ದುಪಡಿ ಮಾಡಿ, ಈ 10 ವರ್ಷಗಳ ಕಾಲ ಗತಿಸಿರುತ್ತದೆ. ಆದರೂ ಕೂಡ ಇದರ ಸಮಗ್ರ ಅನುಷ್ಠಾನ ಮಾಡುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿರುತ್ತವೆ.
ಈ ಒಂದು ನಿಟ್ಟಿನಲ್ಲಿ ಈಗ ಮುಂದಾದರೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಹಾಗೂ ಕಲಂ 371(ಜೆ) ಸಮಗ್ರ ಅನುಷ್ಠಾನ ಮಾಡುವಲ್ಲಿ ಹಾಲಿ ಸರ್ಕಾರವು ಗಮನ ಹರಿಸಬೇಕು. ಕಲಬುರಗಿ ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪದನಾಮ ಹುದ್ದೆಯನ್ನು ಕಲ್ಯಾಣ ಕರ್ನಾಟಕದ ವಕೀಲರನ್ನು ನೇಮಕ ಮಾಡಿ, ಭಾಗಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಅಶೋಕ ಮಾನೂರೆಅವರು ಮನವಿ ಮಾಡಿದ್ದಾರೆ.