ಕಲ್ಯಾಣ ಕರ್ನಾಟಕ ರತ್ನ ಹಾಜಿಬಾಬಾಗೆ ಆತ್ಮೀಯ ಸನ್ಮಾನ

ಲಿಂಗಸುಗೂರು.ನ.೧೦- ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪಡೆದಿರುವ ಸಮಾಜಸೇವಕ ಮಹ್ಮದ್ ಹಾಜಿಬಾಬಾ ಕರಡಕಲ್ ಅವರನ್ನು ಸ್ಥಳೀಯ ಕೃಷಿ ಇಲಾಖೆ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಹಾಜಿಬಾಬಾರ ಸಮಾಜಸೇವೆ ಯುವಕರಿಗೆ ಮಾದರಿಯಾಗಿದ್ದು, ಜಾತ್ಯಾತೀತವಾಗಿ ಎಲ್ಲರೊಂದಿಗೂ ಒಡನಾಡಿಯಾಗಿರುವ ಇವರ ಕಾರ್ಯವನ್ನು ಪರಿಗಣಿಸಿ ಪ್ರಶಸ್ತಿ ಬಂದಿರುವುದು ಶ್ಲಾಘನೀಯವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಸಿದ್ದಪ್ಪ ಮಾತನಾಡಿದರು.
ಕೃಷಿ ಇಲಾಖೆ ಸಿಬ್ಬಂಧಿಗಳಾದ ಕಳಕಪ್ಪ, ಸಿದ್ದಪ್ಪ, ರಮೇಶ, ಸಬೀಲ್, ಈರಪ್ಪ ಸೇರಿ ಇತರರು ಇದ್ದರು.