ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಯ ಪ್ರಸ್ತಾವನೆ

ಕಲಬುರಗಿ ಜ 12: ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ನಿಯೋಗ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷಣ ದಸ್ತಿ ಅವರ ನೇತೃತ್ವದಲ್ಲಿ ಇಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘದ ಕಚೇರಿಗೆ ಭೇಟಿ ನೀಡಿ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಬಗ್ಗೆ ಮತು ್ತ371ನೇ(ಜೆ) ಕಲಮಿನ ಅನುಷ್ಠಾನದ ಕುರಿತು ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಸಾಂಸ್ಕೃತಿಕ ಸಂಘದ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹಮ್ಮಿಕೊಳ್ಳಬೇಕಾದ ಮಹತ್ವದ ಕಾರ್ಯಕ್ರಮಗಳ ಕುರಿತು ಚರ್ಚಿಸಿ ಅಧ್ಯಕ್ಷರಿಗೆ ಮಹತ್ವದ ವಿಷಯಗಳ ಪ್ರಸ್ತಾವನೆ ಸಲ್ಲಿಸಲಾಯಿತು.
ಸಮಿತಿ ಸಲ್ಲಿಸಿರುವ ಪ್ರಸ್ತಾವನೆಗಳ ಬಗ್ಗೆ ಸಂಘದ ಅಧ್ಯಕ್ಷ ಬಸವರಾಜ ಪಾಟೀಲಸೇಡಂ ಅವರು ಸಕರಾತ್ಮಕವಾಗಿ ಸ್ಪಂದಿಸಿ ಸಂಘದ ವ್ಯಾಪ್ತಿಗೆ ಸಂಬಂಧಪಟ್ಟ ಸಲಹೆಗಳುಮತ್ತು ಬೇಡಿಕೆಗಳನ್ನು ತಾವು ಈಡೇರಿಸುವುದಾಗಿ ಭರವಸೆ ನೀಡಿರುವುದಲ್ಲದೆ ರಾಜ್ಯ ಮತ್ತು ಕೇಂದ್ರಸರಕಾರಕ್ಕೆ ಸಂಬಂಧಿಸಿದ ನಮ್ಮ ಭಾಗದ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗೆ ಸಮಿತಿ
ಕೋರಿರುವಂತೆ ತಾವು ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ತರುವ ಎಲ್ಲಾ ಪ್ರಯತ್ನಗಳು
ಮಾಡುವುದಾಗಿ ಬಲವಾದ ಭರವಸೆ ನೀಡಿದರು.
371ನೇ (ಜೆ) ಕಲಮಿನಲ್ಲಿರುವ ದ್ವಂದ್ವ ಅರ್ಥದ ವಿಷಯಗಳ ನಿವಾರಣೆಯ ಬಗ್ಗೆ ಮತ್ತುನಿಯಮಗಳಲ್ಲಿ ಅನುಷ್ಠಾನಕ್ಕೆ ಆಗುತ್ತಿರುವ ದೋಷಗಳ ಬಗ್ಗೆ ಸರಿಪಡಿಸಲು ಮತ್ತು 371ನೇ(ಜೆ)ಕಲಂ ನಿಯಮದಲ್ಲಿ ಉಲ್ಲೇಖಿಸಿರುವಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುಕೂಲವಾಗುವ ರೀತಿಯಲ್ಲಿ ಹೊಸ ನಿಯಮಾವಳಿಗಳನ್ನು ರಚಿಸಿ ಸರಕಾರದ ಅನುಮೋದನೆಯ
ಮೇರೆಗೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ವಿವರಿಸಲಾಯಿತು.371ನೇ(ಜೆ) ಕಲಮಿನ ಪರಿಣಾಮಕಾರಿ ಅನುಷ್ಟಾನಕ್ಕೆ ಹೊಸ ನಿಯಮಗಳ ಕರಡು ಸಿದ್ಧಪಡಿಸಲುಕಲ್ಯಾಣ ಕರ್ನಾಟಕದ ಪರಿಣಿತ 3-4 ಹೋರಾಟಗಾರರನ್ನೊಳಗೊಂಡು ಕಾನೂನು ಮತ್ತುಡಿ.ಸಿ.ಎ.ಆರ್.ಕಾರ್ಯದರ್ಶಿಗಳನ್ನು ಸೇರಿಸಿ ಕರಡು ಸಮಿತಿಯನ್ನು ರಚಿಸಿ ಹೊಸ ನಿಯಮಗಳ ಕರಡು ಕಾಲಮಿತಿಯಲ್ಲಿ ರಚಿಸಲು ಸರಕಾರದಿಂದ ಅನುಮೋದನೆ ಪಡೆಯಲು ಪ್ರಸ್ತಾವನೆ
ಸಲ್ಲಿಸಲಾಯಿತು.371ನೇ (ಜೆ)ಕಲಮಿನ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ,ವಿಶೇಷ ಕೋಶ ಕಚೇರಿಯ ಪ್ರಾದೇಶಿಕ ಕಚೇರಿ ಕಲಬುರಗಿಯಲ್ಲಿ ಸ್ಥಾಪನೆ ಮಾಡಲು ಪ್ರಸ್ತಾವನೆ ಸಲ್ಲಿಸಿ ವಿವರಿಸಲಾಯಿತು.
371ನೇ(ಜೆ) ಕಲಂ ಖಂಡಿಕೆ 12, 13 ರಂತೆ ಸಂಬಂಧಿಸಿದ ಎಲ್ಲಾ ಕಚೇರಿಗಳುವಿಭಾಗಿಯ ಕೇಂದ್ರ ಕಲಬುರಗಿಯಲ್ಲಿ ಸ್ಥಳಾಂತರ ಮಾಡಲು, ಕಲ್ಯಾಣ ಕರ್ನಾಟಕೇತರ ಪ್ರದೇಶದಲ್ಲಿ ನೀಡಬೇಕಾದ ಮೀಸಲಾತಿ ಕಟ್ಟುನಿಟ್ಟಾಗಿನೀಡಲು ಆದೇಶಿಸಿರುವಂತೆ ತಕ್ಷಣ ಕ್ರಮ ಜರುಗಿಸಲು ಹಾಗೂ .ಕಲಬುರಗಿಯ ರೈಲ್ವೆ ವಿಭಾಗಿಯ ಕಚೇರಿ, ಏಮ್ಸ್, ನೀಮ್ಝ್ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕೇಂದ್ರದ ಮೇಲೆ ಒತ್ತಡ ತರಲುಮನವರಿಕೆ ಮಾಡಲಾಯಿತು.