ಕಲ್ಯಾಣ ಕರ್ನಾಟಕ ಮೀಸಲು ಕ್ಷೇತ್ರದಲ್ಲಿ ಮಾದಿಗರಿಗೆ ಮಹಾ ವಂಚನೆ

ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಆಕ್ರೋಶ
ದುರುಗಪ್ಪ ಹೊಸಮನಿ
ಲಿಂಗಸುಗೂರ,ಏ.೧೬- ಕಲ್ಯಾಣ ಕರ್ನಾಟಕ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾದಿಗ ಸಮುದಾಯಕ್ಕೆ ಮಾಹ ವಂಚನೆ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾದಿಗ ಸಮುದಾಯ ಮುಖಂಡರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಇವರು ಮಾದಿಗ ಜನಾಂಗದವರನ್ನು ರಾಜಕೀಯವಾಗಿ ಸಂಪೂರ್ಣ ವಾಗಿ ತುಳಿಯುತ್ತಾ ಹೊರಟಿದ್ದಾರೆ ಎಂಬುದು ಈಗಾಗಲೇ ಎಲ್ಲಾಕಡೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಿರುದ್ಧ ಆಕ್ರೋಶದ ಮಾತುಗಳು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಹುಸಂಖ್ಯಾತ ಸಮುದಾಯದ ಜನರು ಮಾತನಾಡುತ್ತಿದ್ದಾರೆ.
ಕಲ್ಯಾಣ ಕರ್ನಾಟಕದ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಎಂಟು ಮೀಸಲು ಕ್ಷೇತ್ರಗಳು ಮೀಸಲಾಗಿದೆ ಆ ಎಂಟರಲ್ಲಿ ಒಬ್ಬರಿಗೂ ಕೂಡ ಯಾವುದೇ ಕ್ಷಣದಲ್ಲಿ ಮಾದಿಗ ಸಮುದಾಯಕ್ಕೆ ಟಿಕೆಟ್ ಘೋಷಣೆ ಮಾಡದೆ ಇದ್ದುದು ನೋಡಿದರೆ ಬಹುಶಃ ಮಾದಿಗ ಜನಾಂಗಕ್ಕೆ ರಾಜಕೀಯ ಸ್ಥಾನಮಾನ ನೀಡಲು ಕಾಂಗ್ರೆಸ್ ಪಕ್ಷವು ಮೀನಾಮೇಷ ಮಾಡುವ ಮೂಲಕ ದಲಿತರಿಗೆ ರಾಜಕೀಯ ಮೀಸಲಾತಿ ವಂಚಿಸುವ ಯತ್ನಕ್ಕೆ ಕೈಹಾಕಿ ಸಂಪೂರ್ಣವಾಗಿ ದಮನ ಮಾಡುವ ಮುಖಾಂತರ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಕಾಣಬಹುದು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಹು ಸಂಖ್ಯಾತ ರಾಗಿರುವ ಮಾದಿಗ ಸಮುದಾಯ ಜನರು ಬಹಳಷ್ಟು ಜನ ಸಮೂಹ ಇರುತ್ತದೆ.
ಆದರೆ ಈ ಜನಾಂಗವನ್ನು ಕಡೆಗಣಿಸಿ ಮಲ್ಲಿಕಾರ್ಜುನ ಖರ್ಗೆ ಇವರು ಸ್ವಜಾತಿ ಪ್ರೇಮದಿಂದ ಬಲಗೈ ಸಮುದಾಯದ ಹೆಚ್ಚಿನ ಆದ್ಯತೆ ನೀಡುವ ಮುಖಾಂತರ ಖರ್ಗೆ ಅವರ ಜಾತ್ಯತೀತ ಮುಖವಾಡ ಮತ್ತೊಮ್ಮೆ ಸಾಬೀತಾಗಿದೆ.
ಜಾತ್ಯತೀತ ಮುಖವಾಡ ನಾಯಕ ಖರ್ಗೆ ಇವರು ದಲಿತ ಅಸ್ಪುಶ್ಯರು ಜನಾಂಗದವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಭಾಗದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷದ ಟಿಕೆಟ್ ೧೬ ಕ್ಷೇತ್ರದಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್ ಹಂಚಿಕೆ ಮಾಡಿದ್ದು ಸ್ವಜಾತಿ ಪ್ರೇಮದಿಂದ ಹೊರತು ಬೇರೆ ಯಾವ ಉದ್ದೇಶಕ್ಕಾಗಿ ಅಲ್ಲಾ ಎಂಬುದು ಖರ್ಗೆ ಅವರು ತೋರಿಸಿದ್ದಾರೆ .
ಕಲ್ಯಾಣ ಕರ್ನಾಟಕದ ಮೀಸಲು ಕ್ಷೇತ್ರಕ್ಕೆ ಈಗಾಗಲೇ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ವೇಳೆ ಬಹು ನಾಟಕೀಯ ಬೆಳವಣಿಗೆ ನಡೆದಿದೆ ಎನ್ನಲಾಗಿದೆ ಇದರಿಂದಾಗಿ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿ ಹೈಕಮಾಂಡ್ ಮೇಲೆ ಒತ್ತಡ ಪ್ರಭಾವ ಬಳಸಿ ತಂತ್ರಗಾರಿಕೆ ಮುಂದುವರಿಸಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಮಾದಿಗ ಸಮುದಾಯಕ್ಕೆ ಸೇರಿದ ಪ್ರಬಲ ಟಿಕೆಟ್ ಆಕಾಂಕ್ಷಿ ಗಳನ್ನು ಕಡೆಗಣಿಸಿ ಔರಾದ್ ಬಲಗೈ ಗುಲ್ಬರ್ಗ ಗ್ರಾಮೀಣ ಬಂಜಾರ ಸಮಾಜದ ರೆವುನಾಯಕ ನಾಯಕ ಬೆಳಮಗಿ ಚಿತ್ತಾಪುರ ಕ್ಷೇತ್ರದಿಂದ ಪ್ರಿಯಾಂಕಾ ಖರ್ಗೆ ಕನಕಗಿರಿ ಕ್ಷೇತ್ರದಿಂದ ಶಿವರಾಜ್ ತಂಗಡಗಿ ಬಳ್ಳಾರಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಂಜಾರ ಸಮಾಜಕ್ಕೆ ಟಿಕೆಟ್ ಹಂಚಿಕೆ ಮಾಡಿದ್ದು ಜಗ್ಗಜಾಹಿರ ವಾಗಿದೆ ಇಷ್ಟೇಲ್ಲಾ ಟಿಕೆಟ್ ಹಂಚಿಕೆ ವಿಷಯಕ್ಕೆ ಸಂಬಂಧಿಸಿದ ಮಲ್ಲಿಕಾರ್ಜುನ ಖರ್ಗೆ ಇವರ ಕೈವಾಡವಿದೆ ಎನ್ನುವುದನ್ನು ಸಮಾಜದ ಮುಖಂಡರು ಮರೆಯಬಾರದು ಎಂದು ಸಮಾಜದಲ್ಲಿ ಆಕ್ರೋಶ ಬುಗಿಲು ಎದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಲಿಂಗಸುಗೂರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಮೂಲ ಅಸ್ಪುಶ್ಯರಿಗೆ ಎಡಗೈ ಸಮುದಾಯಕ್ಕೆ ಸೇರಿದ ನಾಯಕರಿಗೆ ಟಿಕೆಟ್ ನೀಡದೆ ರಾಜಕೀಯ ಮಾಡುತ್ತಿದ್ದಾರೆ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ಕಾಂಗ್ರೆಸ್ ಪಕ್ಷವು ಬೋವಿ ಸಮುದಾಯದ ನಾಯಕ ಹಾಲಿ ಶಾಸಕ ಡಿ ಎಸ್ ಹೂಲಗೇರಿ ಇವರಿಗೆ ಈ ಹಿಂದೆ ಟಿಕೆಟ್ ನೀಡಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
೨೦೨೩ ರೂಂ ವಿಧಾನಸಭಾ ಚುನಾವಣೆಯಲ್ಲಿ ಎಡಗೈ ಸಮುದಾಯಕ್ಕೆ ಸೇರಿದ ಎಚ್ ಬಿ ಮುರಾರಿ ಹಾಗೂ ಸಮುದಾಯದ ಮುಖಂಡರು ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಈ ಕ್ಷೇತ್ರದಲ್ಲಿ ಮೂಲ ಅಸ್ಪುಶ್ಯರ ಹೆಸರಿನಲ್ಲಿ ರಾಜಕಾರಣ ಮಾಡುವ ನಾಯಕರಿಗೆ ಮನುವಾದಿ ನಾಯಕರಿಗೆ ಟಿಕೆಟ್ ಘೋಷಣೆ ಮಾಡಿದರೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಹುಸಂಖ್ಯಾತ ಸಮುದಾಯದ ಮೂಲ ಅಸ್ಪುಶ್ಯರು ಅದರಲ್ಲಿ ಎಡಗೈ ಸಮುದಾಯದ ಜನರು ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆ ಮಾಡಲು ಯಾವುದೇ ಮುಲಾಜಿಲ್ಲದೆ ಕೆಲಸ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು ಹೈಕಮಾಂಡ್ ವಿರುದ್ಧ ಆಕ್ರೋಶದ ಮಾತುಗಳು ಹರಿದಾಡುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಾದಿಗ ಸಮಾಜದ ಬಹು ಸಂಖ್ಯಾತ ಜನರು ಇದ್ದಾರೆ ಜಿಲ್ಲೆಯಲ್ಲಿ ಮಾದಿಗ ಸಮುದಾಯ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ಮತದಾರರು ಇದ್ದಾರೆ ಒಂದು ವೇಳೆ ಕಾಂಗ್ರೆಸ್ ಪಕ್ಷವು ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಎಡಗೈ ನಾಯಕರಿಗೆ ಟಿಕೆಟ್ ನೀಡದೆ ಇದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪಣತೊಟ್ಟು ಕೆಲಸ ಮಾಡುವ ಮೂಲಕ ಚದುರಂಗದ ಆಟಕ್ಕೆ ಮುಂದಾಗಬೇಕಾಗುತ್ತದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.