ಕಲ್ಯಾಣ ಕರ್ನಾಟಕ ಭಾಗ ಧರ್ಮ, ಸಂಸ್ಕತಿಯ ನೆಲೆವೀಡು : ಡಾ.ಮಹರ್ಷಿ ಆನಂದ ಗುರುಜಿ

ಹುಮನಾಬಾದ್: ನ.13:ಕಲ್ಯಾಣ ಕರ್ನಾಟಕ ಭಾಗ ಧರ್ಮ ಮತ್ತು ಸಂಸ್ಕತಿ ನೆಲೆವೀಡಾಗಿದ್ದು, ಈ ಭಾಗದ ಜನರು ಹೃದಯ ವೈಶಾಲೆತ್ತೆ ಉಳ್ಳವರಾಗಿದ್ದಾರೆ ಎಂದು ಬೆಂಗಳೂರಿನ ಆನಂದ ಸಿದ್ದಿ ಪೀಠದ ಡಾ.ಮಹರ್ಷಿ ಆನಂದ ಗುರುಜಿ ಹೇಳಿದರು.
ಚಿಟಗುಪ್ಪಾ ಪಟ್ಟಣದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಟ್ರಸ್ಟ್ನಿಂದ ನಡೆದ ಲಕ್ಷ ದೀಪೆÇೀತ್ಸವ ಮತ್ತು ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಮಹಾದ್ವಾರದ ಉದ್ಘಾಟನೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲಿಯೇ ಭಾರತೀಯ ಪರಂಪರೆ ಶ್ರೇಷ್ಟವಾಗಿದ್ದು, ಪ್ರತಿಯೂಬ್ಬರು ಭಾರತೀಯ ಧರ್ಮ, ಸಾಹಿತ್ಯ, ಸಂಸ್ಕತಿ, ಪರಂಪರೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರತಿಯೂಬ್ಬ ತಂದೆ, ತಾಯಿ ನಿಮ್ಮ ಮನೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಒಳ್ಳೆಯ ಸಂಸ್ಕಾರ ಕೊಡಬೇಕು. ಮಕ್ಕಳು ತಂದೆ, ತಾಯಿ, ಗುರುಹಿರಿಯರನ್ನು ಗೌರವ ಆದರ ಪೂರ್ವಕವಾಗಿ ಕಾಣಬೇಕು ಎಂದರು.
ನಾವೇಲ್ಲರು ಧರ್ಮ, ಸಂಸ್ಕತಿಯ ನೆಲೆಗಟ್ಟಿನ ಮೇಲೆ ನಡೆದು. ನಮ್ಮ ಆಚಾರ ವಿಚಾರಗಳನ್ನು ಬೇರೆಯವರಿಗೆ ಮಾದರಿಯಾಗುವ ನಿಟ್ಟಿನಲ್ಲಿ, ಜಾತಿ ಎಂಬ ಭೇದ ಭಾವ ಮಾಡದೆuಟಿಜeಜಿiಟಿeಜ ಎಲ್ಲರು ಕೂಡಿ ಬಾಳಬೇಕು ಎಂದು ಕರೆ ನೀಡಿದರು.
ಚಿಟಗುಪ್ಪಾ ಗುರುಲಿಂಗ ಶಿವಾಚಾರ್ಯ, ಮುರುಳಾರಾಧ್ಯ ಶಿವಾಚಾರ್ಯ, ಮಾಜಿ ಸಚಿವರು, ಹಾಲಿ ಶಾಸಕ ರಾಜಶೇಖರ್ ಪಾಟೀಲ, ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್, ಪಿಎಲ್‍ಡಿ ಬ್ಯಾಂಕ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಬಮ್ಮಣಿ, ಈರಪ್ಪಾ ಹೊಸಳ್ಳಿ, ಅಮಿತ್‍ಕುಮಾರ ತೋಗಲೋರು, ಶರಣಬಸವಪ್ಪಾ ಚನ್ನೂರು, ಗಣೇಶ್ ಐನಾಪುರೆ, ಉದಯಕುಮಾರ ಐನಾಪುರೆ, ರೇವಣಸಿದ್ದಯ್ಯಾ ಮಠಪತಿ, ಈರಪಣ್ಣಾ ಕಲ್ಲೂರು, ಜೀವನಬಾಬು ಹುಗ್ಗಿ, ಅನೀಲಕುಮಾರ ಸಿರಮುಂಡಿ, ಉಮೇಶ ಸೋಲಪುರೆ, ಹಣಮಂತ ನಿಪ್ಪಾಣಿ, ಓಂಕಾರ ಮಠಪತಿ, ಮಹಾರುದ್ರಪ್ಪಾ ಚನ್ನೂರು, ರಾಜಶೇಖರ್ ಪಾಟೀಲ, ಬಸವರಾಜ ಮಡಿವಾಳ, ಸಂಗಮೇಶ್ ಪಾಟೀಲ, ವೀರಶೆಟ್ಟಿ, ಚಳಕಾಪುರೆ, ಇದ್ದರು.
ಭವ್ಯ ಮೆರವಣಿಗೆ; ಪಟ್ಟಣದ ಶ್ರೀ ಗಣೇಶ್ ಮಂದಿರದಿದ ಗಾಂಧಿ ಚೌಕ, ಬಸವರಾಜ ಚೌಕ ಮಾರ್ಗವಾಗಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಸ್ವ, ರಾಮಣ್ಣ ಹುಗ್ಗಿ ಸಭಾ ಮಂಟಪದ ವರೆಗೆ ಡಾ.ಮಹರ್ಷಿ ಆನಂದ ಗುರುಜಿ ಶ್ರೀನಿವಾಸ ಗುರುಜಿ ಅವರ ಭವ್ಯ ಮೆರವಣಿಗೆ ಜರುಗಿತು.