ಕಲ್ಯಾಣ ಕರ್ನಾಟಕ ಭಾಗದ ಏಕೈಕ ಶಿಲಾ ದೇವಸ್ಥಾನ: ತೋಟೆಂದ್ರಶ್ರೀ

ವಾಡಿ.ಮಾ.11: ಕಾವೇರಿಯಿಂದ ಗೋದಾವರಿಯವರೆಗೆ ತಮ್ಮ ರಾಜ್ಯವನ್ನು ವಿಸ್ತರಿಸಿದ್ದ ಮಳಖೇಡದ ರಾಷ್ಟ್ರಕೂಟರ ಅಧಿದೇವತೆ ಎಲ್ಲಾಂಬಿಕೆಯಾಗಿದ್ದು, ಅಧುನಿಕ ಯುಗದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಸಂಪೂರ್ಣ ಶಿಲೆಯಿಂದಲೇ ನಿರ್ಮಾಣವಾಗಿರುವ ಏಕೈಕ ದೇವಸ್ಥಾನ ಬಳವಡಗಿಯ ಎಲ್ಲಮ್ಮ ದೇವಿಯದಾಗಿದೆ ಎಂದು ನಾಲವಾರದ ಶ್ರೀಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಸುಕ್ಷೇತ್ರ ಬಳವಡಗಿಯ ಶ್ರೀ ಎಲ್ಲಾಂಬಿಕಾ ದೇವಿ ದೇವಸ್ಥಾನದ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿಯ ಪುನ: ಪ್ರತಿಷ್ಠಾಪನಾ ಕಾರ್ಯಕ್ರಮದ ಧರ್ಮ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಮಾತನಾಡಿ, ಈ ಶಿಲಾಮಯ ದೇವಸ್ಥಾನ ಮೋದಿ ನಿರ್ಮಿಸುತ್ತಿರುವು ಅಯೋಧ್ಯಾ ರಾಮಮಂದಿರದ ಸಣ್ಣ ಬಿಂಬ ರೂಪವನ್ನು ಎಲ್ಲಾಂಬಿಕೆ ದೇವಿ ನೂತನ ದೇವಾಲಯ ಕಂಡು ಬರುತ್ತದೆ ಎಂದು ಬಣ್ಣಿಸಿದರು. ಭಕ್ತರ ಭಕ್ತಿಯಲ್ಲಿ ಪಾರದರ್ಶಕತೆ ಇದ್ದಲ್ಲಿ ಮಾತ್ರ ಅಲ್ಲಿ ದೇವರ ಸಾನಿಧ್ಯ ಇರುತ್ತದೆ ಎಂದು ಹೇಳಿದರು.
ಕೊಂಚೂರನ ಸವಿತಾ ಪೀಠದ ಪೀಠಾಧಿಪತಿ ಶ್ರೀಧರಾನಂದ ಸ್ವಾಮಿಗಳು ಮಾತನಾಡಿ, ದೇವಸ್ಥಾನಗಳು ಪಂಚೇಂದ್ರಿಯ ಗಳನ್ನು ಜಾಗೃತ ಮಾಡುವ ಸ್ಥಳವಾಗಿವೆ, ಕಷ್ಟ ದು:ಖಗಳನ್ನು ಭಕ್ತ ಹೊತ್ತುಕೊಂಡು ಹೋಗುತ್ತಾನೆ. ದೇವಸ್ಥಾನದಲ್ಲಿ ಆಯು, ಆರೋಗ್ಯ, ಸಂತೃಪ್ತಿಯನ್ನು ಪಡೆದು ಬರುತ್ತಾನೆ ಎಂದು ಹೇಳಿದರು.
ಅಳ್ಳೊಳ್ಳಿಯ ಸಾವಿರ ದೇವರ ಮಠದ ಸಂಗಮೇಶ್ವರ ದೇವರು, ತೊನಸನಳ್ಳಿ (ಎಸ್) ಸಂಗೇಶ್ವರ ಸಂಸ್ಥಾನ ಮಠದ ಶ್ರೀ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಸೂಗೂರ(ಕೆ) ಚನ್ನಮಲ್ಲ ರುದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಹಲಕರ್ಟಿಯ ಸಿದ್ದಧ್ಯಾನಾಶ್ರಮದ ರಾಜಶೇಖರ ದೇವರು, ಕಟ್ಟಿಮನಿ ಹಿರೇಮಠದ ಅಭಿನವ ಮುನೀಂದ್ರ ಶಿವಾಚಾರ್ಯರು, ದಂಡಗುಂಡನ ಸಂಗನಬಸವ ಶಿವಾಚಾರ್ಯರು, ಹೊರನಾಡು ಅನ್ನಪೂಣೇಶ್ವರ ದೇವಸ್ಥಾನದ ಧರ್ಮದರ್ಶಿ ಭೀಮೇಶ ಜೋಶಿ, ಅಳ್ಳೊಳ್ಳಿ ನಾಗಪ್ಪಯ್ಯ ಸ್ವಾಮಿಗಳು, ಮುಖಂಡರಾದ ಲಿಂಗಾರೆಡ್ಡಿ ಬಾಸರೆಡ್ಡಿ, ಬೆಂಗಳೂರಿನ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ, ವೆಂಕಟಣ್ಣಗೌಡ ಪೊಲೀಸ್ ಪಾಟೀಲ, ಶರಣಗೌಡ ಪಾಟೀಲ ಮಾರಡಗಿ, ಸಂಗನಗೌಡ ಮಲ್ಹಾರ, ಬಸರೆಡ್ಡಿ ಗೌಡ ಬಿರಾಳ, ಲಿಂಗರಾಜ ಇಟಗಿ, ವಿಶ್ವನಾಥ ರೆಡ್ಡಿ ಮಾಲಿ ಪಾಟೀಲ, ಪಿ.ಜಿ.ಕುಲಕರ್ಣಿ, ವಿಠಲ ನಾಯಕ, ದಂಡಯ್ಯ ಸ್ವಾಮಿ, ಬಾಬುರಾವ ಕುಲಕರ್ಣಿ, ಈಶ್ವರಪ್ಪಗೌಡ ಹಾಬಾಳ, ಅಣ್ಣಾರಾವ ಬಾಳಿ, ಬಸವರಾಜ ಸಜ್ಜನ ವೇದಿಕೆ ಮೇಲೆ ಇದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಣ್ಣಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಈರಮ್ಮಾ ಕಲಬುರಗಿ ಮಠ ಅವರು ರಚಿಸಿ ಹಾಡಿರುವ ಎಲ್ಲಾಂಬಿಕಾ ದೇವಿ ಹಾಡುಗಳ ಸಿಡಿ ಬಿಡುಗಡೆ ಮಾಡಲಾಯಿತು. ಮಲ್ಲಿನಾಥ ಫರತಾಬಾದ್, ಈರಮ್ಮಾ ಸಂಗೀತ ಸೇವೆ ಸಲ್ಲಿಸಿದರು. ರವಿ ಸ್ವಾಮಿ ತಬಲಾ ಸಾಥ ನೀಡಿದರು. ಕು. ಸಹನಾ ಹಿರೇಮಠ ಭರತ ನಾಟ್ಯ ಮಾಡಿದಳು, ಮಲ್ಲಯ್ಯ ಸ್ವಾಮಿ ಇಟಗಿ ನಿರೂಪಿಸಿದರು.
ಕಾಂiÀರ್iಕ್ರಮದಲ್ಲಿ ಬಾಬುರಾವ ಕುಲಕರ್ಣಿ ಪ್ರಲ್ಹಾದರಾವ ಕುಲಕರ್ಣಿ, ಗ್ರಾಪಂ.ಮಾಜಿ ಸದಸ್ಯ ಶ್ರೀಧರ ಬಳವಡಗಿ, ಸತ್ಯನಾರಾಯಣ ಕುಲಕರ್ಣಿ, ಉದ್ಯಮಿ ಅಣವೀರ ಇಂಗಿನಶೆಟ್ಟಿ, ಸತ್ಯನಾರಾಯಣ ಕುಲಕರ್ಣಿ ರವೀಂದ್ರ ದೇಸಾಯಿ, ರಾಘವೇಂದ್ರ ದೇಸಾಯಿ, ದಿನಕರಾವ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಪ್ರಶಾಂತ ಮರಗೋಳ, ಕೃಷ್ಣಾ ಕುಲಕರ್ಣಿ ಸೇರಿದಂತೆ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದರು.