ಕಲ್ಯಾಣ ಕರ್ನಾಟಕ ಭಾಗಕ್ಕೆ ಸಾಮಾಜಿಕ ನ್ಯಾಯ:ಅಲ್ಲಮಪ್ರಭು ಬೆಟ್ಟದೂರು

ಕಲಬುರಗಿ,ಫೆ.25: ಹೈದರಾಬಾದ್ ಕರ್ನಾಟಕ ಹೆಸರು ಹೋಗಿ ಕಲ್ಯಾಣ ಕರ್ನಾಟಕ ಹೆಸರು ಬದಲಾದರೂ ನಾವು ಸಮಾಧಾನಪಡಬೇಕಿಲ್ಲ. ಈ ಭಾಗಕ್ಕೆ ಸಾಮಾಜಿಕ ನ್ಯಾಯ ದೊರೆಯಬೇಕು ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಪಾಟೀಲ ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಗುಲ್ಬರ್ಗ ವಿವಿ ಮಹಾತ್ಮಗಾಂಧಿ ಸಭಾಂಗಣದಲ್ಲಿ ಶನಿವಾರ ನಡೆದ ನೆಲ ಜಲ ದರ್ಶನ ಗೋಷ್ಠಿ-7 ರಲ್ಲಿ ಆಶಯ ಭಾಷಣ ಮಾಡಿದ ಅವರು, ಹೊಲದಲ್ಲಿ ಏಕ ಬೆಳೆ ಇರಬಾರದು. ಅದರಂತೆ ದೇಶದಲ್ಲೂ ಬಹು ಸಂಸ್ಕøತಿ ಇರಬೇಕು ಎಂದರು.
ಕಲ್ಯಾಣ ಕರ್ನಾಟಕದ ನೆಲ-ಜಲ ಮೂಲತಃ ಸಮೃದ್ಧವಾಗಿದ್ದರೂ ಇಂದು ಅವುಗಳು ಸಹ ಬಹಳಷ್ಟು ಕಲ್ಮಷವಾಗಿದ್ದು, ಇವುಗಳು ಸುರಕ್ಷಿತವಾಗಿರಬೇಕಾದರೆ ಒಕ್ಕಲುತನ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ನಂತರ ಉದ್ಯಮಕ್ಕೆ ಅದರಲ್ಲೂ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ತಿಳಿಸಿದರು.
ಕೃಷಿ ಕೇವಲ ರೈತರಿಗೆ ಸಂಬಂಧಿಸಿದ್ದಲ್ಲ ಅದು ಬದುಕಿಗೆ ಸಂಬಂಧಿಸಿದೆ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ರೈತರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ನೀರಾವರಿ ಯೋಜನೆಗಳನ್ನು ಅನುμÁ್ಠನಕ್ಕೆ ತರಬೇಕು ಎಂದರು.
ಕೃಷಿ ಮತ್ತು ನೀರಾವರಿ ವಿಷಯ ಕುರಿತು ಆದಿನಾಥ ಹೀರಾ, ಶಿಕ್ಷಣ ಮತ್ತು ಆರೋಗ್ಯ ಕುರಿತು ಡಾ. ಎಸ್. ಎಸ್. ಗುಬ್ಬಿ ವಿಜ್ಞಾನ ತಂತ್ರಜ್ಞಾನ ಕುರಿತು ಎನ್.ಎಸ್. ಮುಲಗಿ, ಜೈವಿಕ ವಿಜ್ಞಾನ ಕುರಿತು ಚಂದ್ರಕಾಂತ ಕೆಳಮನಿ ಪ್ರಬಂಧ ಮಂಡಿಸಿದರು.
ಡಾ. ಎ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ.ಸುನಿಲ ಜಾಬಾದಿ, ಮಹಾದೇವ ಪೂಜಾರಿ ನಿರೂಪಿಸಿದರು. ಡಾ. ಶಿವಂಗಾ ಬಿಲಗುಂದಿ ವಂದಿಸಿದರು.