ಕಲ್ಯಾಣ ಕರ್ನಾಟಕ ಭಾಗಕ್ಕೆ ಇನ್ನೊಂದು ಡಿ ಸಿ ಎಂ ಸ್ಥಾನ ನೀಡಲಿ

ಸೇಡಂ, ಮೇ,19: ಕಲ್ಯಾಣ ಕರ್ನಾಟಕ ಭಾಗವು ಅತ್ಯಂತ ಹಿಂದುಳಿದ ಭಾಗವಾಗಿದ್ದು ಇದರ ಸಮಸ್ತ ಅಭಿರ್ವುದ್ದಿಗಾಗಿ ಈ ಭಾಗದ ಪ್ರಭಾವಿ ನಾಯಕರು ಹಾಗೂ ದಕ್ಷ ಮತ್ತು ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿರುವ,ಯುವಕರ,ರೈತರ,ಬಡವರಬಗ್ಗೆ ಕಾಳಜಿಹೊಂದಿರುವ,ಡಾ.ಶರಣಪ್ರಕಾಶ್ ಪಾಟೀಲ್ ಅವರನ್ನು ಡಿ ಸಿ ಎಂ ಮಾಡಿದರೆ, ಈ ಭಾಗದ ಅಭಿವೃದ್ಧಿಗೆ ಇನ್ನಷ್ಟು ಬಲ ಬರುತ್ತದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ನಾಗರಾಜ್ ಊಡಗಿ
ಕಾಂಗ್ರೆಸ್ ಯುವ ಮುಖಂಡರು ಸೇಡಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.