ಕಲ್ಯಾಣ ಕರ್ನಾಟಕ ಭಾಗಕ್ಕೆ ಅಸಮಾನತೆ ಸಲ್ಲದು :ಅಟ್ಟೂರ

ಕಲಬುರಗಿ:ನ.20:ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಸಾಯನಿಕ ಲ್ಯಾಬ್ ಟೆಸ್ಟಿಂಗ್ ಹಾಗೂ ರಸಗೊಬ್ಬರ ಇಂಡಸ್ಟ್ರೀಸ್ ಸ್ಥಾಪಿಸಬೇಕೆಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾದ ಶ್ರೀ ಭಗವಂತ ಖುಬಾ ಅವರಿಗೆ ಇಂದು ಕಲಬುರಗಿ ನಗರದಲ್ಲಿ ಅಖಿಲ ಭಾರತ ಯುವಜನ ಒಕ್ಕೂಟ ಎಐವೈಎಫ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ನೇತೃತ್ವದಲ್ಲಿ ಮನವಿ ಪತ್ರ ನೀಡಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಹಲವಾರು ಯೋಜನೆಗಳು ಈ ಭಾಗದಿಂದ ಕೈಬಿಟ್ಟಿದ್ದು ಈ ಭಾಗದ ಅಸಮಾನತೆ ಎತ್ತಿ ತೋರಿಸುತ್ತದೆ.ತಮ್ಮ ಅಧೀನಕ್ಕೆ ಬರುವ ಈ ಈ ಭಾಗದಲ್ಲಿ ರಾಸಾಯನಿಕ ಲ್ಯಾಬ್ ಇಂಡಸ್ಟ್ರೀಸ್ ಹಾಗೂ ರಾಸಾಯನಿಕ ಇಂಡಸ್ಟ್ರಿಸ ಸ್ಥಾಪಿಸಬೇಕೆ0ದು ಒತ್ತಾಯಿಸಿದರು.ಈಗಾಗಲೇ ಶಹಬಾದ ಭಾಗದಲ್ಲಿ ಕ್ಯಾಲ್ಸಿಯಂ ಹೇರಳವಾಗಿ ದೊರೆತದೆ. ಕೆಮಿಕಲ್ ಇಂಡಸ್ಟ್ರಿ ಸ್ಥಾಪಿಸಲು ತಮಗೆ ಅನುಕೂಲವಾಗುತ್ತದೆ ಅಲ್ಲದೆ ಈ ಭಾಗದಲ್ಲಿ ಕೇಂದ್ರ ಸರಕಾರದಿಂದ ಹಲವಾರೂ ಇಂಡಸ್ಟ್ರೀಜ್ ಗಳನ್ನು ಸ್ಥಾಪಿಸುವ ಮೂಲಕ ನಿರುದ್ಯೊ?ಗಿಗಳಿಗೆ ಉದ್ಯೊ?ಗ ದೊರಕಿದಂತಾಗುತ್ತದೆ ಜೊತೆಗೆ ಈ ಭಾಗದ ಅಸಮಾನತೆ ಹೋಗಲಾಡಿಸಿದ0ತೆ ಆಗುತ್ತದೆ.ರಸಗೊಬ್ಬರ ಬೆಲೆ ಗಗನಕ್ಕೆ ಮುಟ್ಟಿದ್ದು ಸಣ್ಣ ರೈತರಿಗೆ ಖರಿದಿಸಲು ಕಷ್ಟವಾಗುತ್ತಿದೆ ರಸಗೊಬ್ಬರ ಬೆಲೆಯನ್ನು ಸಾಮಾನ್ಯ ರೈತನ ಕೈಗೆಟುಕುವಂತೆ ಮಾಡಬೇಕು.ಬೀದರ ನಗರದಿಂದ ಬೆಂಗಳೂರಿಗೆ ಹೋಗುವ ರೈಲುಗಳು ಕಲ್ಬುರ್ಗಿಯಿಂದ ಹಾದುಹೋಗುವಂತೆ ಮಾಡಬೇಕೆಂದು ಕೇಂದ್ರ ರೈಲ್ವೆ ಸಚಿವರಿಗೆ ಮಾತನಾಡಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೆuಟಿಜeಜಿiಟಿeಜಡಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲಿ?ಸಿದರು. ನಂದೀಶ್ವರ ಜೆ. ಪಾಟೀಲ ಭೀಮಾಶಂಕರ ತಳವಾಡೆ, ಶರಣಬಸಪ್ಪ ಮಂಗಲಗಿ, ಅಶೋಕ ತಳವಾಡೆ, ಶಿವರಾಜ ಭಾಸಗಿ, ಪ್ರಭು ಇತರರು ಇದ್ದರು.