ಕಲ್ಯಾಣ ಕರ್ನಾಟಕ ಪ್ರತ್ಯೇಕರಾಜ್ಯಕ್ಕೆ ಆಗ್ರಹ

ಕಲಬುರಗಿ ಸ 16: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371(ಜೆ) ಕಲಂ ಜಾರಿಯಾಗಿ ಏಳೆಂಟು ವರ್ಷ ಕಳೆದರೂ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಆದ್ದರಿಂದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಂವಿಧಾನದ ತಿದ್ದುಪಡಿ 371(ಜೆ) ಕಲಂ ಜಾರಿಯಾದರೂ ಇಲ್ಲಿ ಒಂದೂ ಕಾರ್ಖಾನೆ ಬರಲಿಲ್ಲ. ರೈತಾಪಿ ಜನ ಕಂಗಾಲಾಗಿದ್ದಾರೆ .ನಿರುದ್ಯೋಗ ಹೆಚ್ಚಾಗಿದೆ.ರಸ್ತೆ ನಿರ್ಮಾಣ,ಶಿಕ್ಷಣ,ನೀರಾವರಿ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದರು.
371(ಜೆ) ಕಲಂ ಬೇಡವೇ ಬೇಡ. ನಮಗೆ ಪ್ರತ್ಯೇಕ ರಾಜ್ಯ ಬೇಕು ಎಂಬ ಹೋರಾಟಕ್ಕೆ ಈ ಭಾಗದ ಸಾಹಿತಿಗಳು, ಚಿಂತಕರು, ಹೋರಾಟಗಾರರು, ವೃತ್ತಿ ನಿರತರು, ರೈತರು, ಕಾರ್ಮಿಕರು, ಯುವಕರು. ಮಹಿಳೆಯರು, ವಿದ್ಯಾರ್ಥಿಗಳು ಒಟ್ಟಾಗಿ ಕೈ ಜೋಡಿಸಿ ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ನಾಗಪ್ಪ ಹೋಳ್ಕರ್, ದಿಗಂಬರ ಕಾಂಬಳೆ,ಲಕ್ಷ್ಮೀಕಾಂತ ಪಾಟೀಲ,ಶಿವಮೂರ್ತಿ ಪಾಟೀಲ ,ಮಖಬೂಲಖಾನ್ ಹೀರಾಪುರ ಉಪಸ್ಥಿತರಿದ್ದರು.