ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯಿಂದ ಕ್ರಿಸ್ಮಸ್ ಆಚರಣೆ

ಬೀದರ ಡಿ 23: ನಗರದ ಹೊಟೆಲ್ ಮಯೂರಾ ಬರೀದ್ ಶಾಹಿಯಲ್ಲಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಜಿಲ್ಲಾ ಸಮಿತಿಯಿಂದ ಅಡ್ವೆಂಟ್ ಕ್ರಿಸ್ಮಸ್ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಆಚರಿಸಲಾಯಿತು.
ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಗೌರವ ಅಧ್ಯಕ್ಷ ಶಶಿಕಾಂತ ಪೋಲಿಸ್‍ಪಾಟೀಲ ಚೌಳಿ ಅವರು 100 ಜನ ಸ್ವತಂತ್ರವಾಗಿ ದೇವರ ಸೇವೆ ಸಲ್ಲಿಸುವಸೇವಕರಿಗೆ ಬಟ್ಟೆ ವಿತರಣೆ ಮಾಡಿ, ಮಾತನಾಡುತ್ತಾತಮ್ಮಗಳ ಸೇವೆ ಅತೀ ಅಮೂಲ್ಯವಾಗಿದ್ದು, ಹಳ್ಳಿಹಳ್ಳಿಗಳಿಗೆ ಮನೆ ಮನೆಗಳಿಗೆ ಹೋಗಿ ಏಸು ಕ್ರಿಸ್ತರುಹೇಳಿದ ವಾಕ್ಯ ವಚನಗಳ ಮೂಲಕ
ಸಂದೇಶಗಳನ್ನು ಸಾರುತ್ತಾ ಜೀವನದಲ್ಲಿ ಶಾಂತಿಪ್ರಿಯರಾಗಿ ಜೀವಿಸುವುದು, ತ್ಯಾಗ ಮನೋಭಾವದಿಂದಒಬ್ಬರನ್ನೊಬ್ಬರು ಸಹೋದರರಂತೆತಿಳಿಹೇಳುತ್ತಿರುವುದು ಅತೀ ದೊಡ್ಡ ಕೆಲಸ ಮತ್ತುಕರ್ತವ್ಯವಾಗಿದೆ. ತಮ್ಮ ಸೇವೆ ಅಮೂಲ್ಯವಾದದ್ದುಹಾಗೆಯೇ ಸದಾ ತಮ್ಮ ಸೇವೆ ಮಾಡಲು ಯೇಸು ಸ್ವಾಮಿನಮಗೂ ಕೂಡ ಶಕ್ತಿ ತುಂಬಲು ಪ್ರಾರ್ಥಿಸಿರಿ ಎಂದುನುಡಿದರು. ಈ ಕಾರ್ಯಕ್ರಮದಲ್ಲಿ ಸೇನೆಯ ಸಂಸ್ಥಾಪಕಅಧ್ಯಕ್ಷ ಸ್ವಾಮಿದಾಸ ಕೆಂಪೆನೂರ, ಜಿಲ್ಲಾ ಉಪಾಧ್ಯಕ್ಷ ಸುರೇಶ ಎನ್. ದೊಡ್ಡಿ, ರಿಚರ್ಡ್ ಮಲ್ಕಾಪೂರೆ, ವಿಲ್ಸನ್‍ಕುಡುತೆನೂರ, ಸಂಗಮೇಶ ಏಣಕೂರ, ನವೀನಅಲ್ಲಾಪೂರ, ಅಮೀತ್ ಸ್ಟಾಲಿನ್, ತುಕಾರಾಮ ರಾಗಾಪೂರೆ,ಪಪ್ಪು ಯರನಳ್ಳಿ, ನಿಹಾಲ್, ನರೇಂದ್ರ ಹೊಸಮನಿ,
ಇಮಾನ್ವೇಲ್, ಜಾನಸನ್ ಧೂಪತಮಹಾಗಾಂವ ಹಾಗೂಸೇನೆಯ ನೂರಾರು ಕಾರ್ಯಕರ್ತರು
ಪಾಲ್ಗೊಂಡರುತ್ತಾರೆಂದು ಸಂಸ್ಥಾಪಕ ಉಪಾಧ್ಯಕ್ಷ ಸಂಗಮೇಶ ಏಣಕೂರ ತಿಳಿಸಿದ್ದಾರೆ.