ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ಧಿಪರ ಸಂಘ ಬಲಪಡಿಸಲು ಕರೆ

ಕಲಬುರಗಿ,ನ.4- ನೆರೆಯ ಆಂಧ್ರಪ್ರದೇಶದ ಮಾದರಿಯಲ್ಲಿ ಇಲ್ಲಿನ ಗ್ರಾಮೀಣ ವೈದ್ಯರಿಗೆ
(ಪಿಎಂಪಿ) ಪ್ರಾವೀಟ್ ಮೆಡಿಕಲ್ ಪ್ರ‍್ಯಾಕ್ಟಿನ್ಸರ್ ಮಾನ್ಯತೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರದಿಂದ ಮಾನ್ಯತೆ ಪಡೆಯಲು ಐಕ್ಯತೆಯ ಅಗತ್ಯವಿದೆ, ಈ ಹಿನ್ನಲೆಯಲ್ಲಿ ಸಂಘವನ್ನು ಬಲಪಡಿಸಲು ಎಲ್ಲರೂ ಶ್ರಮಿಸಬೇಕು ಎಂದು ಸಂಘದ ಪ್ರಮುಖ ಅಮೃತ ಸಿ.ಪಾಟೀಲ ಸಿರನೂರ ಅವರು ಕರೆ ನೀಡಿದರು.
ನಗರದ ಜಗತ ವೃತ್ತ ಕಂದಾಯ ಭವನದಲ್ಲಿ ನಿನ್ನೆ ಸೇರಿದ ಸಂಘದ 7ನೇ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ಧಿಪರ ಸಂಘದ ನಿಯೊಗ ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ ಎಂದರು.
ರಾಜ್ಯದಲ್ಲಿ ಒಂದು ಅಂದಾಜಿನ ಪ್ರಕಾರ 1.5 ಲಕ್ಷ ಗ್ರಾಮೀಣ ಪ್ರದೇಶದ ವೈದ್ಯರಿದ್ದು,
ಇವರು ಅತಿ ಕಡಿಮೆ ಶುಲ್ಕದಲ್ಲಿ ಗ್ರಾಮೀಣರಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ.
ಹಲವಾರು ದಶಕಗಳಿಂದ ಪಾರಂಪರಿಕವಾಗಿ ಆರೋಗ್ಯ ಸೇವೆ ನೀಡುತ್ತಿರುವ ಗ್ರಾಮೀಣ ವೈದ್ಯರಿಗೆ ಸರ್ಕಾರದಿಂದ ಮಾನ್ಯತೆ ಕಲ್ಪಿಸಲು ನೆರೆಯ ಆಂಧ್ರಪ್ರದೇಶ ರಾಜ್ಯ ಸರ್ಕಾರ ನೀಡಿರುವ ಪಿಎಂಪಿ ಪರವಾನಿಗೆಯನ್ನು ಇಲ್ಲಿನ ಎಲ್ಲ ಗ್ರಾಮೀಣ ವೈದ್ಯರಿಗೆ ನೀಡಬೇಕು ಎಂದು ಸಂಘದ ಮುಖಂಡರಾದ ಡಾ.ಬಸವರಾಜ ಮರತೂರ ಒತ್ತಾಯಿಸಿದರು.
ಸಣ್ಣಪುಟ್ಟ ಕಾಯಿಲೆಗಳಿಗೆ ದೂರದ ನಗರ ಪ್ರದೇಶಕ್ಕೆ ಹೋಗಿ ಬರುವ ಸಾರಿಗೆ
ವೆಚ್ಚಕ್ಕಿಂತಲು ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡುವ ಗ್ರಾಮೀಣ ವೈದ್ಯರು, ಮಹಾಮಾರಿ
ಕೋವಿಡ ಸೋಂಕು ಸೇರಿದಂತೆ ಮಳೆ, ಚಳಿಗಾಳಿ ಎನ್ನದೇ ಗ್ರಾಮೀಣ ನಾಗರಿಕರ ಸೇವೆಯಲ್ಲಿ ತೊಡಗಿದ್ದಾರೆ. ಈ ವೃತ್ತಿಯನ್ನು ಅವಲಂಭಿಸಿರುವ ಈ ವೈದ್ಯರಿಗೆ ಮಾನ್ಯತೆ ನೀಡುವ ಮೂಲಕ ಅವರ ಸೇವೆಯನ್ನು ಮುಂದುವರೆಸಲು ಅವಕಾಶ ನೀಡಬೇಕು ಎಂದು ಡಾ.ಫಾರೂಖ ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಸಭೆಯಲ್ಲಿ ಡಾ.ಲೋಹಿತ, ಡಾ.ಶರಣಬಸಪ್ಪ ಪಾಟೀಲ, ಡಾ.ಮೊಹನ ಪವಾರ, ಡಾ.ರಾಹೂಲ, ಡಾ.ಬಸವರಾಜ ಅಣಕಲ, ಮಹಾಂತಪ್ಪ ಪಾಟೀಲ, ಡಾ.ಶಶಿಧರ, ಡಾ.ಗುರು ನಂದಿಕೂರ, ಡಾ.ಪ್ರಭುಲಿಂಗ ಸುತಾರ, ಡಾ.ಶರಣಬಸಪ್ಪ ಪಾಟೀಲ, ಡಾ.ಸಿದ್ದು ಕಣಮೂಡ, ಡಾ.ಸುರೇಶ ಕಲಕರ್ಣಿ, ಡಾ.ಗಫಾರ, ಡಾ.ಶಫಿವೂದ್ದಿನ, ಡಾ.ಅನೀಲ, ಡಾ.ಆನಂದ ಪರಿಟ್, ಡಾ.ಗೊವಿಂದ ಭಟ, ಡಾ.ರಾಹುಲ್ ಮಾನಕರ, ಸೇರಿದಂತೆ ಹಲವರಿದ್ದರು.