ಕಲ್ಯಾಣ ಕರ್ನಾಟಕ – “ಗಣಿತ” ಕ್ರಾಂತಿ ಮಾಡಿದ ಆರ್.ಜೆ

ಕಲಬುರಗಿ:ಎ.23:ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಕಲಬುರಗಿ ನಗರದ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ 19 ವಿದ್ಯಾರ್ಥಿಗಳು ‘ಗಣಿತ’ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದು ಕಲ್ಯಾಣ ಕರ್ನಾಟಕ ವಿಭಾಗದಲ್ಲಿಯೇ ಗಣಿತ ಕ್ರಾಂತಿಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಾದ ಜಿ,ಕೆ ಮಹಿತಾ ರೆಡ್ಡಿ, ಭಾಗ್ಯಶ್ರೀ ಮಾಲಿಪಾಟೀಲ, ಪದ್ಮಜಾ ಜಿ, ಪ್ರಣತಿ ಎ.ಪಿ, ರೂಪೇಶ ಡಿ, ಸ್ನೇಹಲತಾ ರೆಡ್ಡಿ, ಕಿರಣ ಕಾಶೀನಾಥ, ಅರುಂಧತಿ ಎನ್, ಖುಷಿ ಶರ್ಮಾ, ಭಾಗ್ಯಶ್ರೀ ಸಡಕಿನ್, ಸಂಜನಾ ಕೆ.ಜಿ, ಅಂಕಿತಾ ಬಸವರಾಜ, ಸೃಜನ್ ಕುಲಕರ್ಣಿ, ದೀಕ್ಷಿತಾ ಎಮ್, ಆಬಿರ್ ಶಹಾ, ಅಂಕಿತ್ ಶಿವರಾಜ, ನಂದಿನಿ ಡಿ, ಶರದ್ ಕುಲಕರ್ಣಿ, ನೀರಜ್ ಜೋಶಿ.ಸಾಮಾನ್ಯವಾಗಿ ಕಬ್ಬಿಣ ಕಡಲೆಯಾದ ಗಣಿತವನ್ನು ವಿದ್ಯಾರ್ಥಿಗಳಿಗೆ ತರಬೇತಿಗೊಳಿಸಿರುವಂತಹ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ. ವೈಶಾಲಿ ದೇಶಪಾಂಡೆ ಹಾಗೂ ಉಪನ್ಯಾಸಕರುಗಳಾದ ಚಂದ್ರಭಾನು, ಶಾಂತೇಶ ಹುಂಡೇಕಾರ, ಗೋವಿಂದರಾವ್ ಡಿ. ಅವರಿಗೆ ಪ್ರಾಚಾರ್ಯರಾದ ಡಾ|| ಭುರ್ಲಿ ಪ್ರಹ್ಲಾದ ರವರು ವಿಶೇಷ ಸನ್ಮಾನಿಸಿ ಶ್ಲಾಘಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಲಾಯಿತು.