ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದಿಂದ ಸಚಿವರಿಗೆ ಸನ್ಮಾನ ಮತ್ತು ಮನವಿ ಸಲ್ಲಿಕೆ

sಶಹಾಪೂರ:ಜೂ.15:ಕರ್ನಾಟಕ ಸರಕಾರದ ಪರಿಸರ, ಜೈವಿಕ, ಅರಣ್ಯ ಖಾತೆ ಸಚಿವರಾದ ಶ್ರೀ. ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವರಾದ ಶ್ರೀ. ರಹಿಂಖಾನ್ ಅವರಿಗೆ ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕುಟದವತಿಯಿಂದ ಬೀದರನ ಅಂಬೇಡ್ಕರ್ ವೃತ್ತದ ಬಳಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸನ್ಮಾರಂಭದಲ್ಲಿ ನೂತನ ಸಚಿವರಿಗೆ ಸನ್ಮಾನಿಸಿ ಒಕ್ಕುಟದ ಹಲವುದಿನಗಳ ಬೇಡಿಕೆಗಳನ್ನು ಇಡೆರಿಸಬೇಕೆಂದು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ನೇತೃತ್ವದಲ್ಲಿ ಸನ್ಮಾನಿಸಿ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಸರಕಾರದ ಹಲವಾರು ಟ್ರಸ್ಟ್ ಹಾಗೂ ಪ್ರತಿಷ್ಠಾನದ ಮಾದರಿಯಲ್ಲಿ ಬೀದರನಲ್ಲಿ ಜಯದೇವಿ ತಾಯಿ ಲಿಗಾಡೆ / ಕಲಬುರಗಿಯಲ್ಲಿ ಎಸ್.ಎಂ ಪಂಡೀತ / ಯಾದಗಿರಿಯಲ್ಲಿ ಎಂ.ಆರ್ ಬುಂದಿವಂತ ಶೇಟ್ಟರ್ / ರಾಯಚೂರುದಲ್ಲಿ ಪಂಡಿತ ಸಿದ್ದರಾಮ ಜಂಭಲದಿನ್ನಿ / ಕೊಪ್ಪಳದಲ್ಲಿ ಡಾ|| ಸಿದ್ದಯ್ಯ ಪುರಾಣಿಕ್ / ಬಳ್ಳಾರಿಯಲ್ಲಿ ಡಾ|| ಸುಭದ್ರಮ್ಮ ಮನಸುರು ಹಾಗೂ ವಿಜಯ ನಗರದಲ್ಲಿ ಎಂ.ಪಿ ಪ್ರಕಾಶ ಹೆಸರಿನಲ್ಲಿ ಸರಕಾರದಿಂದ ಟ್ರಸ್ಟ್ ಸ್ಥಾಪಿಸಬೇಕು ಹಾಗೂ ಪ್ರಸ್ತುತ ಅಸ್ಥಿತ್ವದಲ್ಲಿರುವ ಟ್ರಸ್ಟ್, ಪ್ರತಿಷ್ಠಾನ ಪದಾಧಿಕಾರಿಗಳನ್ನು ನೂತನವಾಗಿ ನೇಮಿಸಬೇಕು.
ಸರಕಾರ ನೂತವಾಗಿ ಪ್ರಾರಂಭಿಸಲು ಉದ್ದೆಶಿಸಿಸಿರುವ ಜಾನಪದ ಲೋಕವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕು.
ಆಂದ್ರ ಸರಕಾರದ ಮಾದರಿಯಲ್ಲಿ ಕರ್ನಾಟಕದ ಎಲ್ಲಾ ಕಲಾವಿಧರಿಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಲಾವಿಧರ ಗುರುತಿನ ಚೀಟಿ ನೀಡಬೇಕು.
ಕಲ್ಯಾಣ ಕರ್ನಾಟಕ ಭಾಗದಲ್ಲಿ, ಕರ್ನಾಟಕ ಸರಕಾರದಿಂದ “ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ” ಸ್ಥಾಪನೆಯಾಗಬೇಕು.
ಪ್ರಸ್ತುತ ಅಸ್ತಿತ್ವದಲ್ಲಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಸಾಂಸ್ಕೃತಿಕ ಉದ್ದೇಶಕ್ಕೆ ಕ್ರೀಯಾಯೋಜನೆ ರೂಪಿಸಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ, ಜಿಲ್ಲಾ ಉತ್ಸವಗಳನ್ನು ಆಚರಿಸಬೇಕು ಹಾಗೂ ಹಂಪಿಉತ್ಸವದ ಮಾದರಿಯಲ್ಲಿ ಈ ಭಾಗದ ಐತಿಹಾಸಿಕ ಕ್ಷೇತ್ರಗಳ ಉತ್ಸವ ನಡೆಸಬೇಕು.
ಸಂತ ಶಿಶುನಾಳ ಶರೀಫರ ಕ್ಷೇತ್ರದ ಅಭಿವೃದ್ಧಿ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ದ ತತ್ವಪದಕಾರ “ಕಡಕೋಳ ಮಡಿವಾಳಪ್ಪ” ನವರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು.
ಕರ್ನಾಟಕ ಸರಕಾರದಿಂದ ನಡೆಯುವ ಎಲ್ಲಾ ಉತ್ಸವಗಳಲ್ಲಿ ಹಾಗೂ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಮಾರಂಭಗಳಲ್ಲಿ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿಧರಿಗೆ ಅವಕಾಶ ನೀಡಬೇಕು.
ತೆಲಂಗಾಣ ಸರಕಾರದ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪುರಸ್ಕೃತ ಕಲಾವಿಧರಿಗೆ ನಿರಂತರವಾಗಿ ಸರಕಾರದಿಂದ ರೂ: 10,000/- ಮಾಶಾಸನ ನೀಡಬೇಕು.