ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದಿಂದ ಉಸ್ತುವಾರಿ ಸಚಿವರಿಗೆ ಮನವಿ

ಶಹಾಪೂರ:ಆ.18:ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದಿಂದ ಯಾದಗಿರಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಶರಣಬಸಪ್ಪ ದರ್ಶನಾಪೂರ ಅವರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಪ್ರಕಾಶ ಅಂಗಡಿ ಕನ್ನೆಳ್ಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಗಡಿ ಅಗಸ್ಟ್-15 ರ ಭಾರತ ಸ್ವಾತಂತ್ಯ್ರೋತ್ಸವದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ 7 ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ 41 ತಾಲೂಕುಗಳಲ್ಲಿ ಕ್ಷೇತ್ರದ ಶಾಸಕರುಗಳಿಗೆ ಏಕ ಕಾಲದಲ್ಲಿ ಮನವಿ ಸಲ್ಲಿಸುತ್ತಿದ್ದೆವೆ ಎಂದ ಅವರು, ಕಳೆದ ಹಲವು ವರ್ಷಗಳಿಂದ ಈ ಭಾಗದ ರಂಗಭೂಮಿ, ಜನಪದ, ಸಂಗೀತ, ನೃತ್ಯ, ಬಯಲಾಟ, ಬುಡಕಟ್ಟು ಸೇರಿದಂತೆ ಇತರೆ ಪ್ರಕಾರದ ಕಲಾವಿಧರು ನಿರಂತರವಾಗಿ ಸರಕಾರದ ಸೌಲಭ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಅವಕಾಶ ವಂಚಿತರಾಗುತ್ತಾ ಬರುತ್ತಿದ್ದಾರೆ, ಆ ಕಾರಣದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಜನ ಪ್ರತಿಭಾವಂತ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕಲಾವಿದÀರಿದ್ದರೂ ಕೂಡ, ಸರಕಾರ ಮಾತ್ರ ಗುರುತಿಸುವಲ್ಲಿ ವಿಫಲವಾಗುತ್ತಲೇ ಬಂದಿದೆ. ಈ ಎಲ್ಲಾ ಕಾರಣಗಳಿಂದ ನಮ್ಮ ಒಕ್ಕೂಟದ ಮೂಲಕ ತಮ್ಮಲ್ಲಿ ಮನವಿ ಸಲ್ಲಿಸುತ್ತಿದ್ದು ತಾವುಗಳು, ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧÀಪಟ್ಟ ಇಲಾಖೆಯ ಸಚಿವರಿಗೆ ಮನವಿಮಾಡುವ ಮೂಲಕ ಈ ಕೆಳಕಂಡ ಬೇಡಿಕೆಗಳನ್ನು ಇಡೇರಿಸಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಸರಕಾರದ ಹಲವಾರು ಟ್ರಸ್ಟ್ ಹಾಗೂ ಪ್ರತಿಷ್ಠಾನದ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆಯ ಕನ್ನಡದ ಕಟ್ಟಾಳು ದಿ. ಎಂ.ಆರ್.ಬುದ್ದಿವಂತ ಶೇಟ್ಟರ್ ಹೆಸರಿನಲ್ಲಿ ಸರಕಾರದಿಂದ ಟ್ರಸ್ಟ್ ಸ್ಥಾಪಿಸಬೇಕು ಹಾಗೂ ಹಲಸಂಗಿ ಪರಿಸರದ ಜನಪದ ಕವಿಗಳ ಪ್ರತಿಷ್ಠಾನ ಮಾದರಿಯಲ್ಲಿ "ಅಮ್ಮಾಪೂರ ಪರಿಸರದ ಜನಪದ ಕವಿಗಳ" ಪ್ರತಿಷ್ಠಾನ ಸ್ಥಾಪಿಸಬೇಕು ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಾಧಕ ಕಲಾವಿಧರ ಹೆಸರಿನಲ್ಲಿ ಸರಕಾರದಿಂದ ಎಲ್ಲಾ ಜಿಲ್ಲೆಗಳಲ್ಲಿಯು ಟ್ರಸ್ಟ್ ಸ್ಥಾಪಿಸಬೇಕು.
ಸಂತ ಶಿಶುನಾಳ ಶರೀಫರ ಕ್ಷೇತ್ರದ ಅಭಿವೃದ್ಧಿ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ದ ತತ್ವಪದಕಾರ "ಕಡಕೋಳ ಮಡಿವಾಳಪ್ಪ" ನವರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು.
ಹಂಪಿ ಉತ್ಸವದ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಸಗರನಾಡು ಉತ್ಸವವನ್ನು ಸರಕಾರದಿಂದ ಆಯೋಜಿಸಬೇಕು.
ಕರ್ನಾಟಕ ಸರಕಾರದ ಮೂಲಕ ಈಗಾಗಲೇ ಮೈಸೂರು ಮತ್ತು ಬೆಂಗಳೂರು ವಿಭಾಗದ ಕಲಾವಿಧರಿಗೆ ಸರಕಾರದಿಂದ ನಿಡುತ್ತಿರುವ ಗುರುತಿನ ಚೀಟಿಯನ್ನು ಕಲ್ಯಾಣ ಕರ್ನಾಟಕ ಭಾಗದ ಕಲಾವಿಧರಿಗು ಗುರುತಿನ ಚೀಟಿ ವಿತರಿಸಬೇಕು
ಕಲ್ಯಾಣ ಕರ್ನಾಟಕ ಭಾಗದಲ್ಲಿ, ಕರ್ನಾಟಕ ಸರಕಾರದಿಂದ "ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ" ಸ್ಥಾಪನೆಯಾಗಬೇಕು.
ಪ್ರಸ್ತುತ ಅಸ್ತಿತ್ವದಲ್ಲಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಸಾಂಸ್ಕೃತಿಕ ಉದ್ದೇಶಕ್ಕೆ ಕ್ರೀಯಾಯೋಜನೆ ರೂಪಿಸಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ, ಜಿಲ್ಲಾ ಉತ್ಸವಗಳನ್ನು ಆಚರಿಸಬೇಕು. 


ತೆಲಂಗಾಣ ಸರಕಾರದ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪುರಸ್ಕೃತ ಕಲಾವಿಧರಿಗೆ ನಿರಂತರವಾಗಿ ಸರಕಾರದಿಂದ ರೂ: 10,000/- ಮಾಶಾಸನ ನೀಡಬೇಕು.

ರಾಜ್ಯದ ಕಲಾವಿಧರ ಮಾಶಾನದ ವಯೋಮಾನ 58 ರಿಂದ 50 ಕ್ಕೆ ಇಳಿಸಬೇಕು ಹಾಗೂ ಮಾಶಾನದ ಮೊತ್ತ ರೂ: 2000/- ರಿಂದ 5000/- ಕ್ಕೆ ಹೆಚ್ಚಿಸಬೇಕು.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಚಿತ್ರಕಲಾ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರ ಮಾದರಿಯಲ್ಲಿ ರಂಗ ಶಿಕ್ಷಕರು ಹಾಗೂ ಸಂಗೀತ ಶಿಕ್ಷಕರನ್ನು ನೇಮಿಸಬೇಕು, ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ನಡೆಯುತ್ತಿರುವ ರಾಜ್ಯದ ಎಲ್ಲಾ ವಸತಿಶಾಲೆಗಳಲ್ಲಿ ಜನಪದ ಶಿಕ್ಷಕರನ್ನು ಸರಕಾರ ನೇಮಿಸಬೇಕು.

ಪದವಿಧರರು ಹಾಗೂ ಶಿಕ್ಷಕರ ಕ್ಷೇತ್ರಗಳಂತೆ ಕಲಾವಿದÀರಿಗಾಗಿಯೇ ಪ್ರತ್ಯೇಕವಾಗಿ ವಿಧಾನಪರಿಷತ್ ಕ್ಷೇತ್ರ ರಚನೆಮಾಡಬೇಕು.
ರಾಜ್ಯದ ಕಲಾವಿಧರಿಗೆ ಸರಕಾರದಿಂದ ಬಸ್ ಪಾಸ್ ವಿನಾಯಿತಿ ನೀಡಬೇಕು, ವಿಮಾ ಯೋಜನೆ ರೂಪಿಸಬೇಕು.
ಈ ಸಂದರ್ಭದಲ್ಲಿ ಯಾದಗಿರಿ ಮತಕ್ಷೇತ್ರದ ಶಾಸಕರಾದ ಚನ್ನರೆಡ್ಡಿ ಪಾಟೀಲ್ ತುನ್ನೂರು ಅವರಿಗೂ ಕೂಡ ಒಕ್ಕೂಟದ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಪದಾದಿಕಾರಿಗಳಾದ ಹಣಮಂತ್ರಾಯ ದೇವತ್ಕಲ್, ಶಂಕರಶಾಸ್ತ್ರೀ, ಲಿಂಗರಾಜ ಮಂಜಲಾಪೂರ, ಪರಮಣ್ಣಗೌಡ, ಅಂಬ್ರೇಶ ಮುಷ್ಟಳ್ಳಿ, ಶಿವಶರಣಪ್ಪ ಹೆಡಿಗಿನಾಳ ಸೇರಿದಂತೆ ಇತರರಿದ್ದರು.