ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಭೆ

ಬೀದರ :ಸೆ.22:ಜಿಲ್ಲೆಯ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯನ್ನು ಬೀದರ ಸಂಚಾಲಕರಾದ ಶ್ರೀ ಸಂಜಯಕುಮಾರ ಜಿರ್ಗೆ ಅವರ ಅಧ್ಯಕ್ಷತೆಯಲ್ಲಿ ಜರುಗಿತು ಸಭೆಯಲ್ಲಿ ಜಿಲ್ಲೆಯಲ್ಲಿ ಸದಸ್ಯತ್ವ ನೊಂದಣಿಯ ಬಗ್ಗೆ ಚರ್ಚಿಸುತ್ತಾ ಒಳ್ಳೆಯ ಮತ್ತು ಅನುಭವಿ ಕಲಾವಿದರನ್ನು ಮಾತ್ರ ಒಕ್ಕೂಟಕ್ಕೆ ಸೇರಿಸಿಕೊಳ್ಳಬೇಕು. ಒಕ್ಕೂಟದ ಕಲಾವಿದರಿಗೆ ಗುರುತಿನ ಚೀಟಿಯನ್ನು ನೀಡುವ ಬಗ್ಗೆ, ಕಲಾವಿದರಿಗೆ ಮುಂದಿನ ದಿನಗಳಲ್ಲಿ ಮಾಸಾಶನ ಇನ್ನಿತರ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ 08 ತಾಲ್ಲೂಕುಗಳಲ್ಲಿ ಆದಷ್ಟು ಶೀಘ್ರದಲ್ಲಿಯೇ ತಾಲ್ಲೂಕಾ ಸಂಚಾಲಕರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಮಾಡಲಾಗುವುದು ಎಂದು ಚರ್ಚಿಸಲಾಯಿತು. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಮಿತಿ ಸಭೆಯಲ್ಲಿ ದೇವದಾಸ ಚೀಮಕೋಡ ಬೀದರ ತಾಲ್ಲೂಕಾ ಸಂಚಾಲಕರು, ಶ್ರೀ ಸುನೀಲ ಕಡ್ಡೆ ರಾಜ್ಯ ಸಮಿತಿ ಸದಸ್ಯರು, ಶ್ರೀಮತಿ ಚಿನಮ್ಮಾ ದೊಡ್ಡಮನಿ ಔರಾದ ತಾಲ್ಲೂಕಾ ಸಂಚಾಲಕರು ಹಾಗೂ ಹಿರಿಯ ಅನುಭವಿ ಕಲಾವಿದರು ಮತ್ತು ಒಕ್ಕೂಟದ ಸದಸ್ಯರು ಹಾಜರಿದ್ದರು.